ಕಲಬುರಗಿ: ನೀತಿ ಆಯೋಗದಿಂದ ನೋಂದಣಿಯಾಗಿರುವ ಇಂಡಿಯನ್ ಕೌನ್ಸಿಲ್ ಫಾರ್ ಪ್ರೊಫೆಸನಲ್ ಎಜುಕೇಶನ್ ಮಿಷನನ ಘಟಕವಾದ ಗೋವಾದ ಇಂಡಿಯನ್ ವರ್ಚುವಲ್ ಅಕಾಡೆಮಿ ಫಾರ್ ಪೀಸ್ ಆಂಡ್ ಎಜುಕೇಶನ್ ಸಂಸ್ಥೆ ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ನಾನಾಸಾಹೇಬ್ ಹಚ್ಚಡದ ಅವರಿಗೆ ತನ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಶನಿವಾರ ಗೋವಾದ ಪಣಜಿಯ ದೀನನಾಥ ಮಂಗೇಶ್ಕರ್ ಕಲಾ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ನಾನಾಸಾಹೇಬ್ ಹಚ್ಚಡದ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯ ಅಮರ ಶಂಕರ ಸಬಳೆ, ಮಹ್ಮದ್ ಖೈಸರ್ ಖಾಲೀದ್, ಗಾಯಕ ಗೋಪಾಲರೆಡ್ಡಿ, ಡಾ. ನಾರಾಯಣರೆಡ್ಡಿ ಭಾರ್ಗವ, ವಾಸುದೇವ ಅಗ್ನಿಹೋತ್ರಿ, ಎಲಸ್ಟಾನ್ ಫರ್ನಾಂಡೀಸ್, ಸೋನಿಯಾ ಶಿರಸಾಟ್, ಡಾ. ಬ್ರೀಜೇಶ ಯಾದವ, ಡಾ. ಡೇನಿಯಲ್ ಎಡ್ವೀನ್, ಡಾ. ಜಾನ್ ಲೆಸ್ಲೀ ಕುಮಾರ ಇದ್ದರು.
ಪ್ರಶಸ್ತಿಗೆ ಭಾಜನರಾದ ನಾನಾಸಾಹೇಬರಿಗೆ ವಿಭಾಗದ ಮುಖ್ಯಸ್ಥ್ಯರಾದ ಡಾ. ಎಂ ಎಸ್ ಪಾಟೀಲ, ಡಾ. ಸಾರಿಕಾದೇವಿ ಕಾಳಗಿ, ಡಾ. ಸುಮಂಗಲಾ ರೆಡ್ಡಿ, ಡಾ. ಪ್ರಭಾವತಿ ಚಿತಕೋಟಿ, ಡಾ. ಚಿದಾನಂದ ಚಿಕ್ಕಮಠ ಅಭಿನಂದಿಸಿದ್ದಾರೆ.