ಕಾನೂನು ಪಾಲನೆ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಪೂರಕ: ಹಣಮಂತರಾಯ ಅಟ್ಟೂರ್

0
61

ಕಲಬುರಗಿ: ಕಾನೂನಿನ ಮುಂದೆ ಎಲ್ಲರೂ ಸರಿಸಮಾನರು. ಜಾತಿ, ಧರ್ಮ, ಭಾಷೆ, ಪ್ರಾಂತ್ಯ, ಲಿಂಗ, ಹಣ, ಪ್ರಭಾವ ನೋಡದೆ ಅನ್ಯಾಯಕ್ಕೊಳಗಾದವರಿಗೆ ಪ್ರಾಮಾಣಿಕವಾಗಿ ನ್ಯಾಯವನ್ನು ದೊರಕಿಸಿಕೊಡಲು ನ್ಯಾಯಾಂಗ ಶ್ರಮಿಸುತ್ತಿದೆ. ಎಲ್ಲರೂ ಸಂವಿಧಾನ, ಕಾನೂನು, ನ್ಯಾಯದ ಪಾಲನೆ ಮಾಡಿದರೆ ಸಮಾಜದಲ್ಲಿ ಶಾಂತಿ ನೆಲೆಸಿ, ಸದೃಢ ರಾಷ್ಟ್ರ ನಿರ್ಮಾಣಕ್ಕೆ ಪೂರಕವಾಗಿದೆ ಎಂದು ನ್ಯಾಯವಾದಿ, ಹೋರಾಟಗಾರ ಹಣಮಂತರಾಯ ಎಸ್.ಅಟ್ಟೂರ್ ಅಭಿಮತ ವ್ಯಕ್ತಪಡಿಸಿದರು.

ನಗರದ ಶೇಖರೋಜಾದಲ್ಲಿರುವ ’ಸ್ವಾತಿ,ಶಿವಾ ವಿದ್ಯಾಮಂದಿರ ಪ್ರೌಢಶಾಲೆ’ಯಲ್ಲಿ ’ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಏರ್ಪಡಿಸಲಾಗಿದ್ದ ’ಅಂತಾರಾಷ್ಟ್ರೀಯ ನ್ಯಾಯ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಜನಸಾಮಾನ್ಯರಿಗೆ ಕಾನೂನಿನ ಅರಿವು ಅಗತ್ಯ. ಬಸವಣ್ಣನವರ ಸಪ್ತ ಸೂತ್ರದ ವಚನ ಅಳವಡಿಕೆ ಅಗತ್ಯ. ಕಾನೂನು ಪಾಲನೆ ಜೊತೆ ಮಾನವೀಯತೆ ಇರಲಿ. ಆರ್.ಟಿ.ಇ., ಸಂಚಾರಿ ನಿಯಮಗಳು, ವರದಕ್ಷಿಣೆ, ಬಾಲ ಕಾರ್ಮಿಕತೆ, ಆಸ್ತಿ ಹಕ್ಕು ಸೇರಿದಂತೆ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಕಾಯ್ದೆ-ಕಾನೂನುಗಳನ್ನು ತಿಳಿಸಿದರು.

Contact Your\'s Advertisement; 9902492681

ವಿಶೇಷ ಉಪನ್ಯಾಸ ನೀಡಿದ ನ್ಯಾಯವಾದಿ ಗಣೇಶ ಅಂಕಲಗಿ, ಶಾಲಾ-ಕಾಲೇಜು, ಜನರ ಮನೆ ಬಾಗಿಲಿಗೆ ಅತ್ಯವಶ್ಯಕವಾದ ಸಾಮಾನ್ಯ ಕಾನೂನು ತಿಳಿಸುವ ಕಾರ್ಯ ಮಾಡಲಾಗುತ್ತಿದೆ. ವಿದ್ಯಾರ್ಥಿ ದೆಸೆಯಿಂದಲೇ ಪ್ರಶಸ್ನಿಸುವ ಮನೋಭಾವ ಬೆಳಸಿಕೊಳ್ಳಿ. ಮಹಿಳೆಯರು ಆರ್ಥಿಕವಾಗಿ ಸಭಲರಾಗಿ. ಜನನ ಮತ್ತು ಮರಣ ಪ್ರಮಾಣ ಪತ್ರ, ಪೋಕ್ಸೋ ಕಾಯ್ದೆ, ಆಸಿಡ್ ದಾಳಿ, ಮಹಿಳಾ ಅತ್ಯಾಚಾರ, ಮಹಿಳಾ ಆರೋಗ್ಯ ರಕ್ಷಣೆ ಸೇರಿದಂತೆ ಮತ್ತಿತರರ ವಿಷಯಗಳಿಗೆ ಸಂಬಂಧಿಸಿದಂತೆ ಕಾನೂನಿನ ಬಗ್ಗೆ ವಿವರಿಸಿದರು.

ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ ಮಾತನಾಡಿದರು. ನರಸಪ್ಪ ಬಿರಾದಾರ ದೇಗಾಂವ, ನೀಲಕಂಠಯ್ಯ ಹಿರೇಮಠ, ಬಸಯ್ಯಸ್ವಾಮಿ ಹೊದಲೂರ, ಪರಮೇಶ್ವರ ಬಿ.ದೇಸಾಯಿ, ಸಿದ್ದರಾಮ ತಳವಾರ, ಬಸವರಾಜ ಮುನ್ನಳ್ಳಿ ಸೇರಿದಂತೆ ಬಳಗದ ಸದಸ್ಯರು, ಶಾಲೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here