ಕಲಬುರಗಿ: ವಾರ್ಡ್ ಸಮಿತಿ ಕಡೆಗೆ ನಾಗರೀಕರ ನಡಿಗೆ ಮಹಾನಗರ ಪಾಲಿಕೆ ಹಾಗೂ ನಗರದ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಾಳೆ ಬೆಳಿಗ್ಗೆ 9:30 ಗಂಟೆಗೆ ಜಗತ್ ವೃತ್ತದಿಂದ ಆರಂಭವಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದ ವರೆಗೆ ವಾರ್ಡ್ ಸಮಿತಿ ಜಾಗೃತಿ ಜಾಥ ನಾಗರಿಕರ ನಡಿಗೆ ವಾರ್ಡ್ ಸಮಿತಿ ಕಡೆಗೆ ಜಾಥಾ ಹಮ್ಮಿಕೊಳ್ಳಲಾಗಿದೆ.
ಈ ಜಾಥಾದಲ್ಲಿ ನಗರದ ಎಲ್ಲಾ ಸಂಘ ಸಂಸ್ಥೆಗಳು, ಈಗಾಗಲೇ ವಾರ್ಡ್ ಸಮಿತಿ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸುವ, ಸಲ್ಲಿಸಿರುವ ಅರ್ಜಿದಾರರು ಹಾಗೂ ಕಲ್ಬುರ್ಗಿಯ ನಾಗರಿಕರು, ಮಹಿಳಾ ಮಂಡಳಗಳು ಜಾಥಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಶ್ರವಣಯೋಗಿ ಹಿರೇಮಠ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.