ನಾಡೋಜ ಕೋ. ಚೆನ್ನಬಸಪ್ಪನವರ ಜನ್ಮಶತಮಾನೋತ್ಸವ ಆ.6 ಕ್ಕೆ

0
68

ಕಲಬುರಗಿ : ನಗರದ ವೀರಮ್ಮ ಗಂಗಸಿರಿ ಮಹಿಳಾ ಪದವಿ ಮಹಾ ವಿದ್ಯಾಲಯ ಸಭಾಂಗಣದಲ್ಲಿ ಸ್ವಾತಂತ್ರ್ಯ ಹೋರಾಟಗಾರ , ಸಾಹಿತಿ ಹಾಗೂ ನ್ಯಾಯಾಧೀಶರಾದ ನಾಡೋಜ ಕೋ . ಚೆನ್ನಬಸಪ್ಪನವರ ಜನ್ಮಶತಮಾನೋತ್ಸವ ಸಮಾರಂಭ ಕಾರ್ಯಕ್ರಮ ಆ.6 ರಂದು ಬೆಳಿಗ್ಗೆ 10.30 ಕ್ಕೆ ಹಮ್ಮಿಕೊಳ್ಳಲಾಗಿದೆ.

ಸೇಡಂ ಹಿರಿಯ ಜಿಲ್ಲಾ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಮ್.ಎಸ್.ಸಿ. ವಿಜಯಕುಮಾರ ಎಸ್ ಜಟ್ಲಾ ಉದ್ಘಾಟಿಸುವರು.
ಬೆಂಗಳೂರಿನ ನಾಡಿನ ಕೋ.ಚನ್ನಬಸಪ್ಪ ಜನ್ಮ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಗೋ.ರು ಚನ್ನಬಸಪ್ಪ ಆಶಯನುಡಿಯನ್ನಡಲಿದ್ದಾರೆ. ಬೆಂಗಳೂರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಿರಿಯ ಉಪಾಧ್ಯಕ್ಷರಾದ ಅಪ್ಪಾರಾವ ಅಕೋಣಿ ಮುಖ್ಯ ಅತಿಥಿಸ್ಥಾನ ವಹಿಸುವರು. ವಿ ಜಿ . ಮಹಿಳಾ ಪದವಿ ಮಹಾ ವಿದ್ಯಾಲಯ ಪ್ರಾಚಾರ್ಯರಾದ ಡಾ . ರಾಜೇಂದ್ರ ಕೊಂಡಾ ಅಧ್ಯಕ್ಷತೆ ವಹಿಸುವರು.

Contact Your\'s Advertisement; 9902492681

ಬೆಂಗಳೂರು ಕೋ , ಚೆ , ಸಾಹಿತ್ಯ ಮತ್ತು ಶಿಕ್ಷಣ ಟ್ರಸ್ಟ್ ಅಧ್ಯಕ್ಷರಾದ ಶಾಂತಾ ಜಯಪ್ರಸಾದ, ಬೆಂಗಳೂರು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕರಾದ ಕೆ.ಐ.ಗುದಗಿ, ಕಲಬುರಗಿಯ ವಿ . ಜಿ . ಮಹಿಳಾ ಪದವಿ ಮಹಾ ವಿದ್ಯಾಲಯ ಕನ್ನಡ ವಿಭಾಗ ಮುಖ್ಯಸ್ಥರಾದ ಡಾ . ಶಾಂತಾ ಮಠ ಮತ್ತು ಕಲಬುರಗಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷರಾದ ಡಾ . ಮಲ್ಲಿಕಾರ್ಜುನ ಸಿ . ವಡ್ಡನಕೇರಿ ಗೌರವ ಉಪಸ್ಥಿತ ಸ್ಥಾನ ವಹಿಸುವರು.

ವಿಶ್ರಾಂತ ಪ್ರಾಧ್ಯಾಪಕರು , ಹಾಗೂ ಸಾಹಿತಿಗಳಾದ ಆರ್ ಕೆ ಹುಡುಗಿ ಅವರು ಕೋ . ಚೆನ್ನಬಸಪ್ಪನವರ ವೈಚಾರಿಕ ನಿಲುವು ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ. ವಿಭಾಗೀಯ ಪತ್ರಾಗಾರ ಕಛೇರಿಯ ಹಿರಿಯ ಸಹಾಯಕ ನಿರ್ದೇಶರಾದ ಡಾ . ವೀರಶೆಟ್ಟಿ ಗಾರಪಳ್ಳಿ ಅವರು ಕೋ . ಚೆನ್ನಬಸಪ್ಪ ಮತ್ತು ಸಾರ್ವಜನಿಕ ಜೀವನ ಕುರಿತು ಉಪನ್ಯಾಸ ನೀಡಲಿದ್ದಾರೆ.

ಕಮಲಾಪೂರನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಧ್ಯಾಪಕರಾದ ಡಾ. ಶಾಂತಾ ಬಿ ಅಷ್ಟಗಿ ಅವರು ಕೋ ಚೆನ್ನಬಸಪ್ಪನವರ ಶರಣದೃಷ್ಟಿ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ.

ಕಲಬುರಗಿಯ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು , ಪದಾಧಿಕಾರಿಗಳಾದ ಹಿರಿಯ ಉಪಾಧ್ಯಕ್ಷರಾದ ಡಾ ವಿಜಯಕುಮಾರ ಪರುತೆ,
ಉಪಾಧ್ಯಕ್ಷರು ಬಸವರಾಜ ರಾಜಕಟ್ಟಿ, ಡಾ . ಶಿವರಂಜನ ಸತ್ಯಂಪೇಟೆ,,ಕಾವ್ಯಶ್ರೀ ಮಹಾಗಾಂವಕರ್,ಪ್ರಧಾನ ಕಾರ್ಯದರ್ಶಿ ಸಂತೋಷ ಹೂಗಾರ, ಡಾ ನಾಗಪ್ಪ ಗೋಗಿ, ಶಿವಕುಮಾರ ಬಿದರಿ,ಶಿವಾನಂದ ಮಠಪತಿ,ಕೋಶಾಧ್ಯಕ್ಷರಾದ ವಿಶ್ವನಾಥ ಮಂಗಲಗಿ, ಯುವ ಘಟಕದ ಸಂಚಾಲಕರಾದ ಶಿವರಾಜ ಅಂಡಗಿ ಕದಳಿ ವೇದಿಕೆ ಡಾ ಶಾಂತ ಬಿ ಅಷ್ಟಗಿ ಭಾಗವಸಲಿದ್ದಾರೆ.

ತಾಲೂಕ ಮಟ್ಟದ ಅಧ್ಯಕ್ಷರಾದ ಶರಣಗೌಡ ಪಾಟೀಲ ಪಾಳಾ, ಸಂಜಯ ಪಾಟೀಲ್ ಆಳಂದ, ಬಸವರಾಜ ಚಂದಕವಟೆ ಅಪಜಲಪುರ, ಎಸ್. ಕೆ. ಬಿರಾದಾರ ಜೇವರ್ಗಿ, ಡಾ. ಮಲ್ಲಿನಾಥ ತಳವಾರ ತುಳಜಾಪುರ,ಡಾ. ಶೋಭಾದೇವಿ ಚಕ್ಕಿ ಚಿತ್ತಾಪುರ, ಡಾ.ಶಿವಶರಣಪ್ಪ ಮೊತಕ್ ಪಲ್ಲಿ ಕಾಳಗಿ, ಬಸೆಟ್ಟಪ್ಪ ವಾರದ ಯಡ್ರಾಮಿ,ಎಸ್. ಸಿ.ವಾರದ ಶಹಾಬಾದ, ಡಾ ಶರಣಬಸಪ್ಪ ವಡ್ಡನಕೇರಿ ಕಮಲಾಪುರ, ಬಸವರಾಜ ಐನೋಳ್ಳಿ ಚಿಂಚೋಳಿ ಭಾಗವಸುವರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here