’ಗುರು-ಹಿರಿಯರನ್ನು ಗೌರವಿಸುವ ಸಂಸ್ಕೃತಿ ಶ್ರೇಷ್ಟವಾದದ್ದು: ಶಿವಾನಂದ ಪಿಸ್ತಿ

0
13

ಕಲಬುರಗಿ: ಮನೆ, ಸಮಾಜಕ್ಕೆ ಹಿರಿಯರು ಭಾರವಲ್ಲ. ಅವರು ತಮ್ಮ ಕುಟುಂಬ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅಪಾರವಾಗಿ ಶ್ರಮಿಸಿರುತ್ತಾರೆ. ಇಳಿವಯಸ್ಸಿನಲ್ಲಿ ವಯೋವೃದ್ಧರು ಭಾರವೆಂದು ವೃದ್ಧಾಶ್ರಮಕ್ಕೆ ನೂಕುವ ನೀಚ ಬುದ್ಧಿ ಬೇಡ. ಅವರಿಗೆ ಗೌರವ ನೀಡಿ, ಉತ್ತಮ ಆರೈಕೆ, ಆಶ್ರಯ ನೀಡುವುದು ಮಕ್ಕಳ, ಕಿರಿಯರ ಆದ್ಯ ಕರ್ತವ್ಯ. ಪೂಜ್ಯನೀಯವಾಗಿ ಗೌರವಿಸುವ ಸಂಸ್ಕೃತಿ ಶ್ರೇಷ್ಟವಾದದ್ದಾಗಿದೆ ಎಂದು ಸಮಾಜ ಸೇವಕ, ಮಹಾನಗರ ಪಾಲಿಕೆ ಸದಸ್ಯ ಶಿವಾನಂದ ಪಿಸ್ತಿ ಹೇಳಿದರು.

ನಗರದ ಹೊರವಲಯದ ಸೈಯದ್ ಚಿಂಚೋಳಿ ಕ್ರಾಸ್ ಸಮೀಪದಲ್ಲಿರುವ ’ಮಹಾದೇವಿ ತಾಯಿ ಮಹಿಳಾ ವಿದ್ಯಾವರ್ಧಕ ಸಂಘದ ವೃದ್ಧಾಶ್ರಮ’ದಲ್ಲಿ ’ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ತಮ್ಮ ೫೧ನೇ ಜನ್ಮದಿನದ ಪ್ರಯುಕ್ತ ಬುಧವಾರ ವೃದ್ಧಾಶ್ರಮದಲ್ಲಿರುವ ಎಲ್ಲರಿಗೂ ಸತ್ಕಾರ, ಹಣ್ಣುಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಗುವಿವಿಯ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಸುನೀಲಕುಮಾರ ಎಚ್.ವಂಟಿ ಮಾತನಾಡಿ, ಪಿಸ್ತಿಯವರು ಸಮಾಜಪರ, ಅಭಿವೃದ್ಧಿಪರವಿರುವ ವ್ಯಕ್ತಿಯಾಗಿದ್ದಾರೆ. ಕಳೆದ ೨೫ ವರ್ಷಗಳಿಂದ ನಾನು ತುಂಬಾ ಹತ್ತಿರದಿಂದ ಗಮನಿಸುತ್ತಿದ್ದು, ಸಾಕಷ್ಟು ಸಮಾಜ ಸೇವೆ ಮಾಡಿದ್ದಾರೆ. ವೃದ್ಧಾಶ್ರಮದಲ್ಲಿ ಜನ್ಮದಿನ ಆಚರಿಸಿಕೊಳ್ಳುವ ಮೂಲಕ ಮಾದರಿಯಾಗಿದ್ದಾರೆ. ಅವರಲ್ಲಿರುವ ಸಮಾಜಪರ ಕಾಳಜಿ ಶ್ಲಾಘನೀಯವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಶಿವಾನಂದ ಪಿಸ್ತಿ ಅವರು ವೈಯಕ್ತಿವಾಗಿ ವೃದ್ಧಾಶ್ರಮಕ್ಕೆ ನಗದು ಹಣ ದಾನವನ್ನಾಗಿ ನೀಡಿದರು. ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ ಅವರಿಂದ ಜರುಗಿದ ಭಕ್ತಿ, ಜಾನಪದ ಗೀತೆಗಳು ಮನೆಸೂರೆಗೊಳಿಸಿದವು.

ಪ್ರಮುಖರಾದ ಎಚ್.ಬಿ.ಪಾಟೀಲ, ಸಿದ್ದರಾಮ ತಳವಾರ, ಮಹಾಂತೇಶ ಬಿ.ಬಿರಾದಾರ, ಶಿವಯೋಗಪ್ಪ ಬಿರಾದಾರ, ಶಿವಪುತ್ರಪ್ಪ ಗೊಬ್ಬೂರಕರ್, ಸೋಮೇಶ ಡಿಗ್ಗಿ, ಪ್ರಭುಲಿಂಗ ಮೂಲಗೆ, ಶರಣಪ್ಪ ಮಳ್ಳಿ, ಬಾಬುರಾವ ಹೊಳ್ಳಿ, ಅಶೋಕ ಭೋಸಗಾ, ಶಿವಾನಂದ ಮಳ್ಳಿ, ವೀರೇಶ ಫುಲಾರಿ, ರಾಜೇಂದ್ರ ಮದಗುಣಕಿ, ರಾಜು ಪಿಸ್ತಿ, ಹಾವಣ್ಣ ಸುಲ್ತಾನಪೂರ್, ಶರಣು ಪಾಟೀಲ, ಸತೀಶ ಸಾವಳಗಿ, ವೃದ್ಧಾಶ್ರಮದ ಭಾಗಿರತಿ ಎ.ಚೌಲ್, ಜಲಜಾಕ್ಷಿ ಕೋರೆ, ಬಸಮ್ಮ ಕೆ.ಸ್ಥಾವರಮಠ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here