ಕಲಬುರಗಿ: ಇಂದಿನ ತಂತ್ರಜ್ಞಾನ,ಕಂಪ್ಯೂಟರ, ಯುಗದಲ್ಲಿ ಪುಸ್ತಕ,ಪತ್ರಿಕೆಗಳ ಓದು ಕಡಿಮೆಯಾಗುತ್ತಿದ್ದು ಓದುವ ಹವ್ಯಾಸ ಬೆಳೆಸಿಕೊಂಡು ಉತ್ತಮ ಜ್ಞಾನಾರ್ಜನೆ ಪಡೆದರೆ ಬಾಳಿಗೆ ಬೆಳಕಾಗಲಿದೆ.ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥ ಡಾ. ಎಚ್. ಟಿ. ಪೋತೆ ಅವರು ಹೇಳಿದರು.
ನಗರದ ವಿಶ್ವನಾಥರಡ್ಡಿ ಮುದ್ನಾಳ ಪದವಿ ಮಹಾವಿದ್ಯಾಲಯದಲ್ಲಿ ವಿಶ್ವನಾಥರಡ್ಡಿ ಮುದ್ನಾಳ್ ಪದವಿ ಮಹಾವಿದ್ಯಾಲಯ ಹಾಗೂ ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ನಾಲ್ಕು ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಇದನ್ನೂ ಓದಿ: ದೇಶದ ಸ್ವಾತಂತ್ರ್ಯಕ್ಕೆ ತಿಲಕ್, ಆಜಾದ್‌ರ ಕೊಡುಗೆ ಅನನ್ಯ: ಎಚ್.ಬಿ.ಪಾಟೀಲ
ಸಾಹಿತ್ಯ ಚಟುವಟಿಕೆಗಳು ಇಲ್ಲಿ ಹಿರಿಯರೊಂದಿಗೆ ಕಿರಿಯರು ಮತ್ತು ಯುವಕರನ್ನು ಸೇರಿಸಿಕೊಳ್ಳಬೇಕು ಇದರಿಂದ ಸಾಹಿತ್ಯ ಬರವಣಿಗೆ ಪುಸ್ತಕ ಓದುವ ಸಂಸ್ಕೃತಿ, ಜೀವಂತಿಕೆಯಿಂದ ಇರಲು ಸಾಧ್ಯ ಪುಸ್ತಕ ಪ್ರಕಾಶನ ಇಂದು ವ್ಯಾಪಾರವಾಗಿ ಮಾರ್ಪಟ್ಟಿದೆ. ಈ ಹಿಂದೆ ಒಂದು ಪುಸ್ತಕ ನಾಲ್ಕೈದು ಸಾವಿರದಲ್ಲಿ ಮುದ್ರಣವಾಗುತಿತ್ತು ಈಗ ಪುಸ್ತಕ ಪ್ರಕಟಣೆ ಕನಿಷ್ಠ ೫೦ ಸಾವಿರದಿಂದ, ಲಕ್ಷಗಳಾದರೂ ಬೇಕು ಇಂತಹ ಸಂದರ್ಭದಲ್ಲಿ ಪುಸ್ತಕ ಪ್ರಕಟಿಸಿ ಬಿಡುಗಡೆ ಮಾಡುತ್ತಿರುವುದು ಮಾದರಿಯ ಕೆಲಸ ಎಂದು ಅವರು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕರಾದ ಡಾ. ಸತೀಶ ಕುಮಾರ ಹೊಸಮನಿ ಅವರು ಮಾತನಾಡಿ ಪ್ರತಿ ವರ್ಷ ಪುಸ್ತಕಗಳು ಸಾವಿರಾರು ಆಯ್ಕೆ ಸಮಿತಿಗೆ ಬರುತ್ತವೆ. ಆದರೆ ಅದರ ಸಾಫ್ಟ್ ಕಾಪಿ ಕೆಲವೇ ಕೆಲವು ಜನರು ನೀಡುತ್ತಿದ್ದು, ಎಲ್ಲರೂ ಸಾಫ್ಟ್ ಕಾಪಿಕೊಟ್ಟರೆ ಡಿಜಿಟಲ್ ಗ್ರಂಥಾಲಯದಲ್ಲಿ ಅಳವಡಿಕೆ ಮಾಡಲಾಗುತ್ತದೆ. ಮೂರು ಕೋಟಿ ಗಿಂತ ಹೆಚ್ಚು ಓದುಗರು ಆನ್ಲೈನ್ ನಲ್ಲಿ ನೊಂದಣಿಯಾಗಿದ್ದಾರೆ. ಅವರೆಲ್ಲರೂ ಆನ್ಲೈನ್ ನಲ್ಲಿ ೩೦ ಲಕ್ಷ ಪುಸ್ತಕಗಳನ್ನ ಓದಬಹುದು. ಆದರೆ ಯಾವುದೇ ಕಾರಣಕ್ಕೂ ಪುಸ್ತಕಗಳನ್ನ ಕಾಪಿ ಡೌನ್ಲೋಡ್ ಮಾಡಲು ಸಾಧ್ಯವಾಗುವುದಿಲ್ಲ ಎಂದರು.
ಇದನ್ನೂ ಓದಿ: ಬೀದರ ಲೋಕಸಭಾ ಕ್ಷೇತ್ರಕ್ಕೆ ಒಟ್ಟು 14 ಕೋಟಿ 65 ಲಕ್ಷ ಅನುದಾನ ಬಿಡುಗಡೆ
ಮುಖ್ಯ ಅತಿಥಿಗಳಾಗಿದ್ದ ಪತ್ರಕರ್ತ ದೇವಯ್ಯ ಗುತ್ತೇದಾರ ಮಾತನಾಡಿ, ಸಂಸ್ಥೆಯ ಜವಾಬ್ದಾರಿ ಹುದ್ದೆಯಲ್ಲಿದ್ದು ಏಕಕಾಲಕ್ಕೆ ನಾಲ್ಕು ಕೃತಿಗಳನ್ನು ಬರೆದು ಬಿಡುಗಡೆಗೊಳಿಸುತ್ತಿರುವ ಕಾರ್ಯ ಶ್ಲಾಘನೀಯ ಇದು ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ ಎಂದರು. ಡಾ. ಶ್ರೀಶೈಲ ನಾಗರಾಳರವರು ಬಿಡುಗಡೆಗೊಂಡ ನಾಲ್ಕು ಪುಸ್ತಕಗಳ ಪರಿಚಯ ಮಾಡಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿ.ವಿ ಸಂಘದ ಜಂಟಿ ಕಾರ್ಯದರ್ಶಿ ಎಸ್. ಡಿ ನಿಜಗುಣಿ ವಹಿಸಿದ್ದರು.
ಡಾ. ಅಜಯಕುಮಾರ,ಡಾ. ಪ್ರೇಮಾ ಅಪಚಂದ, ಡಾ. ಬಸವರಾಜ ಮಠಪತಿ, ಡಾ. ಶರಣಬಸಪ್ಪ ವಡ್ಡನಕೇರಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಣಮಂತ ರೆಡ್ಡಿ ಗೊರೆ, ವೈಜನಾಥ ಕೋಳಾರ, ಎಸ್. ಬಿ. ಮಾಲಿ ಪಾಟೀಲ್ ಶಿವಾನಂದ ಬಿರಾದಾರ, ಭೀಮಾಶಂಕರ ಇಂಗಳೆ ಇದ್ದರು. ಡಾ. ಪ್ರೇಮಾ ಅಪಚಂದರವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾ ಡಿದರೆ, ಡಾ. ಬಸವರಾಜ್ ಮಠಪತಿ ನಿರೂಪಿಸಿದರು.ಡಾ. ಶರಣಬಸಪ್ಪ ವಡ್ಡನಕೇರಿ ವಂದಿಸಿದರು.