ಕಲಬುರಗಿ: ’ಸ್ವರಾಜ್ಯವೇ ನನ್ನ ಜನ್ಮಸಿದ್ಧ ಹಕ್ಕು’ ಎಂದು ಸಾರಿ ಬ್ರಿಟಿಷರ ವಿರುದ್ಧ ಹೋರಾಡಿದ ಬಾಲ ಗಂಗಾಧರ ತಿಲಕ್‌ರು ಮತ್ತು ’ನಾನು ಆಜಾದ್ ಇದ್ದೇನೆ. ದೇಶದ ಆಜಾದವೇ ನನ್ನ ಗುರಿ’ ಎಂದು ಬಾಲ್ಯದಲ್ಲಿಯೇ ಬ್ರಿಟಿಷರ ವಿರುದ್ಧ ಗರ್ಜಿಸಿದ ಚಂದ್ರಶೇಖರ ಆಜಾದ್ ಅವರು ದೇಶದ ಸ್ವಾತಂತ್ರ್ಯಕ್ಕೆ ನೀಡಿರುವ ಕೊಡುಗೆ ತುಂಬಾ ಅನನ್ಯವಾಗಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ನ್ಯೂ ರಾಘವೇಂದ್ರ ಕಾಲನಿಯಲ್ಲಿರುವ ’ಮುತ್ತಾ ಟ್ಯುಟೋರಿಯಲ್ಸ್’ನಲ್ಲಿ ’ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ಜರುಗಿದ ’ಬಾಲ ಗಂಗಾಧರ ತಿಲಕ್ ಮತ್ತು ಚಂದ್ರಶೇಖರ ಆಜಾದ್’ ಅವರ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಇಬ್ಬರು ಮಹನೀಯರ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಇದನ್ನೂ ಓದಿ: ಬೀದರ ಲೋಕಸಭಾ ಕ್ಷೇತ್ರಕ್ಕೆ ಒಟ್ಟು 14 ಕೋಟಿ 65 ಲಕ್ಷ ಅನುದಾನ ಬಿಡುಗಡೆ
ತಿಲಕ್‌ರು ಪ್ರಖರ ರಾಷ್ಟ್ರವಾದಿ, ಅಧ್ಯಾತ್ಮವಾದಿ, ಜನನಾಯಕ, ಆಧುನಿಕ ಭಾರತದ ರೂಪುರೇಷೆಯ ತಯಾರಕ, ಲೇಖಕರಾಗಿ ಬಹುಮುಖ ವ್ಯಕಿತ್ವವನ್ನು ಹೊಂದಿದ್ದರು. ’ಕೇಸರಿ’, ’ಮರಾಠಾ’ ಪತ್ರಿಕೆಗಳ ಮೂಲಕ ಭಾರತೀಯರಲ್ಲಿ ಸ್ವಾತಂತ್ರ್ಯದ ಕಿಚ್ಚು ಹೆಚ್ಚಿಸಿದರು. ಜನತೆಯಲ್ಲಿ ಒಗ್ಗಟ್ಟು ಉಂಟುಮಾಡಲು ಸಾರ್ವಜನಿಕವಾಗಿ ಗಣೇಶ, ಶಿವಾಜಿ ಜಯಂತಿಗಳನ್ನು ಆಚರಿಸಲು ಪ್ರಾರಂಭಿಸದರು. ಕ್ರಾಂತಿಕಾರಿಯಾಗಿ ನಿರಂತರವಾಗಿ ಹೋರಾಟ ಮಾಡಿದ ಆಜಾದ್‌ರು ಸ್ವಾತಂತ್ರ್ಯಕಾಗಿ ವೀರ ಮರಣಹೊಂದಿದ್ದಾರೆ ಎಂದು ನುಡಿದರು.
ಟ್ಯೂಟೋರಿಯಲ್ಸ್ ಮುಖ್ಯಸ್ಥ ಶಿವಕುಮಾರ ಮುತ್ತಾ ಮಾತನಾಡಿ, ತಿಲಕ್ ಮತ್ತು ಆಜಾದ್ ಅವರು ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವವನ್ನೇ ನೀಡಿದ್ದಾರೆ. ಅವರೆಲ್ಲರ ಪರಿಶ್ರಮ ವ್ಯರ್ಥವಾಗದಂತೆ, ಸ್ವಾತಂತ್ರ್ಯದ ಮೌಲ್ಯಗಳನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯರ ಮೇಲಿದೆ ಎಂದರು.
ಪ್ರಮುಖರಾದ ಸಿದ್ದರಾಮ ತಳವಾರ, ಸೋಮೇಶ ಡಿಗ್ಗಿ, ಚಂದ್ರಶೇಖರ ವೈ.ಶಿಲ್ಪಿ, ಶಿಕ್ಷಕರಾದ ಲಕ್ಷ್ಮೀ, ಪ್ರೀಯಾಂಕಾ, ಪ್ರಮೋದ ಕುಲಕರ್ಣಿ, ಕಾಶಿಬಾಯಿ ಜಾಧವ, ಭೀಮಾಶಂಕರ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇದನ್ನೂ ಓದಿ: ಗ್ರಾಮದ ಸಮಸ್ಯೆ ಆಲಿಸಿದ ಬಾಲರಾಜ್ ಗುತ್ತೇದಾರ್: ಸಮಸ್ಯೆ ಪರಿಹಾರಕ್ಕೆ ಆಗ್ರಹ