ಹಿರಿಯರ ಸಂಘದಿಂದ ವ್ಯಕ್ತಿತ್ವ ವಿಕಸನ: ಬಸವರಾಜ್ ಪಾಟೀಲ್ ಸೇಡಂ

0
38

ಅನನ್ಯ ಮಹಾದೇವ ಅಭಿನಂದನಾ ಗ್ರಂಥ ಲೋಕಾರ್ಪಣೆ

ಕಲಬುರಗಿ- ಬದುಕು ಸಾರ್ಥಕವಾಗಲು ಹಿರಿಯ ವ್ಯಕ್ತಿಗಳ ಜತೆ ಕಾಲ ಕಳೆಯಬೇಕು. ಹಿರಿಯರಲ್ಲಿ ಅನುಭವದ ಬುತ್ತಿ ಇರುತ್ತದೆ. ಅವರಿಂದ ನಮ್ಮ ವ್ಯಕ್ತಿತ್ವ ಅರಳುತ್ತದೆ. ಸಜ್ಜನರ ಸಹವಾಸದಿಂದ ವ್ಯಕ್ತಿತ್ವ ವಿಕಾಸನಗೊಳ್ಳುತ್ತದೆ ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಹೇಳಿದರು.

Contact Your\'s Advertisement; 9902492681

ಭಾನುವಾರ ನಗರದ ಡಾ.ಡಾ. ಎಸ್. ಎಂ. ಪಂಡಿತ ರಂಗ ಮಂದಿರದಲ್ಲಿ ಶ್ರೀ ಮಹಾದೇವಪ್ಪ ಕಡೇಚೂರ್ ಅವರ ಅಭಿನಂದನಾ ಗ್ರಂಥ ಸಮಿತಿ ವತಿಯಿಂದ ಆಯೋಜಿಸಲಾದ ಹೈದ್ರಾಬಾದ್ ಸಂಸ್ಥಾನ ವಿಮೋಚನಾ ಹೋರಾಟಗಾರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಹಾದೇವಪ್ಪ ಕಡೇಚೂರ ಅವರ ಅಭಿನಂದನಾ ಸಮಾರಂಭ ಮತ್ತು ಅನನ್ಯ ಮಹಾದೇವ ಅಭಿನಂದನಾ ಗ್ರಂಥ ಹಾಗೂ ಹೈದ್ರಾಬಾದ್ ಸಂಸ್ಥಾನ ವಿಮೋಚನಾ ಹೋರಾಟದ ದಿಗ್ಗಜರು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಮಹಾದೇವಪ್ಪ ಕಡೇಚೂರ ಅವರು ಆದರ್ಶ ವ್ಯಕ್ತಿಯಾಗಿದ್ದರೆ. ಅವರ ಜೀವನ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದೆ. ನಮ್ಮ ಕುಟುಂಬದಲ್ಲಿಯೂ ಸ್ವಾತಂತ್ರ್ಯ ಹೋರಾಟಗಾರರು ಇದ್ದಾರೆ ಎಂಬುವುದೇ ಸಂತಸದ ವಿಚಾರವಾಗಿದೆ. – ಮಾಲಿಕಯ್ಯಾ ಗುತ್ತೇದಾರ್, ರಾಜ್ಯ ಬಿಜೆಪಿ ಉಪಾಧ್ಯಕ್ಷ, ಮಾಜಿ ಸಚಿವ.
ತಾಯಿ-ತಂದೆಯ ಆಶೀರ್ವಾದ, ಗುರುಗಳು ಮಾರ್ಗದರ್ಶನ ನನ್ನ ಜೀವನ ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಇಂದಿಲ್ಲಿ ನನಗೆ ಅಭಿನಂದನೆ ಮಾಡುತ್ತಿರುವುದು ನೋಡಿದರೆ ನಾನೇ ಬಹಳ ಪುಣ್ಯವಂತ ಎಂಬ ಭಾವ ಮೂಡುತ್ತಿದೆ ಎಂದು ಮಹದೇವಪ್ಪ ಕಡೇಚೂರು ಅಭಿಮತ ವ್ಯಕ್ತಪಡಿಸಿದರು.

ಇದನ್ನೂ ಓದಿ: ರಂಗಭೂಮಿ ಜೀವನದ ಪಾಠ ಕಲಿಸಿದೆ: ಮಾಲತಿಶ್ರೀ

ನಮ್ಮ ದೇಶ ಮುಂದೆ ಬರಲು ಮಹಾದೇವಪ್ಪ ಅವರಂತಹ ವ್ಯಕ್ತಿತ್ವದ ಎತ್ತರದ ವ್ಯಕ್ತಿ ಜತೆಯಲ್ಲಿ ನಮ್ಮನ್ನು ನಾವು ಸಮರ್ಪಣೆ ಮಾಡಿಕೊಳ್ಳಬೇಕು. ಇಂತಹ ಮೇರು ವ್ಯಕ್ತಿಗಳಿಂದ ನಮ್ಮ ಬದುಕು ಸಾರ್ಥಕ ವಾಗುತ್ತದೆ. ತಾಯಿ ಭಾರತಾಂಭೆ ಜಗತ್ತಿನಲ್ಲಿ ತಲೆಎತ್ತಿ ನಿಲ್ಲಲು ಸಾಧ್ಯವಾಗುತ್ತದೆ ಎಂದರು.

ಗುಲ್ಬರ್ಗ ವಿವಿ ಕುಲಪತಿ ಪ್ರೊ. ದಯಾನಂದ ಅಗಸರ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಸ್ವಾತಂತ್ರ ಹೋರಾಟದಲ್ಲಿ ಅನೇಕರು ತಮ್ಮ ಜೀವದ ಹಂಗು ತೊರೆದು ಹೋರಾಟ ಮಾಡಿದ್ದಾರೆ ಅಂತಹ ಮಹಾನ್ ಹೋರಾಟಗಾರರಲ್ಲಿ ಮಹದೇವಪ್ಪ ಕಡೇಚೂರ್ ಕೂಡ ಒಬ್ಬರಾಗಿದ್ದರೆ ಅವರ ಬದುಕಿನ ಸಾಧನೆ ಮುಂದಿನ ಪೀಳಿಗೆಗೆ ಆದರ್ಶವಾಗಲಿ. ಇವರ ಜೀವನದ ಈ ಗ್ರಂಥ ರಾಜ್ಯದ ವಿವಿಧ ವಿಶ್ವ ವಿದ್ಯಾಲಯಗಳಲ್ಲಿ ಹಾಗೂ ಶಾಲಾ ಪಠ್ಯ ಪುಸ್ತಕದಲ್ಲಿ ಸೇರಿಸಬೇಕು ಎಂದು ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಿಗೆ ಮನವಿ ಮಾಡಿದರು.

ಇದನ್ನೂ ಓದಿ: ಎಸ್‌ಯುಸಿಐ (ಕಮ್ಯುನಿಸ್ಟ್) ಪ್ರತಿಭಟನೆ: ಜಿಎಸ್‌ಟಿ ತಿಗಣೆ ವಿರುದ್ಧ ಕಾಮ್ರೇಡರ ಆಕ್ರೋಶ

ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ. ಸತೀಶ್ ಕುಮಾರ ಹೊಸಮನಿ ಅವರು ಅನನ್ಯ ಮಹದೇವ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿ ಮಾತನಾಡಿ, ಅನನ್ಯ ಮಹದೇವ ಗ್ರಂಥ ಅತ್ಯುತ್ತಮ ಗ್ರಂಥವಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಈ ಗ್ರಂಥವನ್ನು ಸಿಗುವಂತೆ ಗ್ರಂಥಾಲಯ ಇಲಾಖೆ ವತಿಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ, ಆರ್.ಎಸ್.ಎಸ್ ನ ಉತ್ತರ ಪ್ರಾಂತ ಸಂಚಾಲಕ ಖಗೇಶನ್ ಪಟ್ಟಣಶೆಟ್ಟಿ ಅವರು ಮಾತನಾಡಿದರು. ಡಾ. ಕಲ್ಯಾಣರಾವ ಪಾಟೀಲ ಅವರು ಗ್ರಂಥ ಹಾಗೂ ಕೃತಿಗಳನ್ನು ಪರಿಚಯಿಸಿದರು.

ಇದನ್ನೂ ಓದಿ: ಪ್ರಾಮಾಣಿಕತೆಯ ಸೇವೆಯಿಂದ ಸಾರ್ಥಕತೆ ಸಾಧ್ಯ: ನಿವೃತ್ತ ನ್ಯಾಯಾಧೀಶ ಜಿ.ಕೆ.ಗೋಖಲೆ

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶರಣಕುಮಾರ ಮೋದಿ, ಶರಣಪ್ಪ ತಳವಾರ, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ್ ತೆಗಲತಿಪ್ಪಿ, ರಮೇಶ್ ತಿಪನೂರ, ಸುರೇಶ್ ಹೇರೂರ್, ವೆಂಕಟೇಶ್ ಕಡೇಚೂರ್, ಸುನಿಲ್ ವಂಟಿ, ಭೀಮಣ್ಣ ಬೊನಾಳ್, ಮಹಾದೇವಯ್ಯ ಕರದಳ್ಳಿ ಸೇರಿದಂತೆ ಮತ್ತಿತರು ಇದ್ದರು. ಗ್ರಂಥ ಸಂಪಾದಕರಾದ ಡಾ. ಚಿ.ಸಿ. ಲಿಂಗಣ್ಣ ಅವರು ಸ್ವಾಗತಿಸಿದರು. ಡಾ. ಸದಾನಂದ ಪೆರ್ಲ ಅವರು ನಿರೂಪಿಸಿದರು.

ಇದನ್ನೂ ಓದಿ: ಪಿ.ಡಿ.ಎ ಇಂಜೀನಿಯರಿಂಗ್ ಕಾಲೇಜಿನ ಆಂಟಿ ರ‍್ಯಾಗಿಂಗ್ ಕಮೀಟಿಗೆ ನೇಮಕ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here