ಕಲಬುರಗಿ: ಪೂಜ್ಯ ದೊಡ್ಡಪ್ಪ ಅಪ್ಪ ಇಂಜೀನಿಯರಿಂಗ್ ಕಾಲೇಜಿನಲ್ಲಿ ಆಂಟಿ ರ‍್ಯಾಗಿಂಗ್ ಕಮೀಟಿಗೆನ್ಯಾಯವಾದಿ ಶಿವರಾಜ ಅಂಡಗಿ ಹಾಗೂ ಸರ್ಕಲ್ ಇನ್ಸ್‌ಪೆಕ್ಟರ್ ಸಂತೋಷ ತಟ್ಟೆಪಳ್ಳಿ ಇಬ್ಬರೂ ಎಕ್ಸ್ಟ್ರನಲ್ ಸದಸ್ಯರೆಂದು ಹಾಗೂ ಉಳಿದ ೮ ಸದಸ್ಯರು ಇಂಟರನಲ್ ಸದಸ್ಯರನ್ನಾಗಿ ಪಿ.ಡಿ.ಎ ಇಂಜೀನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್.ಎಸ್. ಕಲಶೆಟ್ಟಿರವರ ನೇತೃತ್ವದಲ್ಲಿ ಸಭೆ ಜರುಗಿತು.
ಕಾಲೇಜಿನ ಬೋರ್ಡ್ ರೂಮಿನಲ್ಲಿ ನಡೆದ ಕಮೀಟಿನ ಸಭೆಯಲ್ಲಿ ಎಕ್ಸ್ಟ್ರನಲ್ ಸದಸ್ಯರಾಗಿ ನೇಮಕಗೊಂಡ ನ್ಯಾಯವಾದಿ ಶಿವರಾಜ ಅಂಡಗಿ ಹಾಗೂ ಸರ್ಕಲ್ ಇನ್ಸ್‌ಪೆಕ್ಟರ್ ಸಂತೋಷ ತಟ್ಟೆಪಳ್ಳಿ ಇಬ್ಬರಿಗೂ ಪಿ.ಡಿ.ಎ ಇಂಜೀನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್.ಎಸ್. ಕಲಶೆಟ್ಟಿರವರು ಸನ್ಮಾನಿಸಿ ಸತ್ಕರಿಸಿದರು.
ಕಾಲೇಜಿನ ವಿದ್ಯಾರ್ಥಿಗಳು ರ‍್ಯಾಗಿಂಗ್ ಚಟುವಟಿಕೆ ನಡೆಸದಂತೆ ಯಾವ ಯಾವ ಮುಂಜಾಗೃತೆ ಕ್ರಮಗಳು ಕೈಗೊಳ್ಳಬೇಕೆಂದು ಚರ್ಚಿಸಲಾಯಿತು. ಸಭೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್.ಎಸ್. ಕಲಶೆಟ್ಟಿ, ಉಪಪ್ರಾಂಶುಪಾಲರಾದ ಡಾ. ಸಿದ್ರಾಮ ಪಾಟೀಲ, ಡಾ. ಕಲ್ಪನಾ ವಾಜರಖೇಡ, ಎಕ್ಸ್ಟ್ರನಲ್ ಸದಸ್ಯರಾದ ನ್ಯಾಯವಾದಿ ಶಿವರಾಜ ಅಂಡಗಿ ಹಾಗೂ ಸರ್ಕಲ್ ಇನ್ಸ್‌ಪೆಕ್ಟರ್ ಸಂತೋಷ ತಟ್ಟೆಪಳ್ಳಿ, ಇಂಟರನಲ್ ಸದಸ್ಯರಾದ ಡಾ. ಮಲ್ಲಿಕಾರ್ಜುನ ಭೋವಿ, ಡಾ. ಬಿ.ಜಿ. ಮಹೇಂದ್ರ ಪ್ರೋ. ಚಂದ್ರಶೇಖರ್ ಬೋಗ್ಲೆ, ಪ್ರೋ. ಶಿವಕುಮಾರ ಪಾಟೀಲ, ವಿದ್ಯಾರ್ಥಿ ಸದಸ್ಯರಾದ ಶರಣಪ್ರಸಾದ ನೀಲಾ ಮತ್ತು ಸುಮಿತ ಪಟ್ಟಣ ಉಪಸ್ಥಿತರಿದ್ದರು.
ಆಂಟಿ ರ‍್ಯಾಗಿಂಗ್ ಕಮೀಟಿ ಚೇರಮನ್ ಡಾ. ಸುವರ್ಣ ನಂದ್ಯಾಳ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು ಎಂದು ನಾನು ಇಂತಹ ಕಲ್ಯಾಣ ಕರ್ನಾಟಕ ಪ್ರದೇಶದ ಪ್ರತಿಷ್ಠಿತ ಹೈ.ಕ. ಶಿಕ್ಷಣ ಸಂಸ್ಥೆಯ ಕಾಲೇಜೊಂದರಲ್ಲಿ ಸದರಿ ಕಮೀಟಿಯ ಸದಸ್ಯನಾಗಿ ಸಂಘ ಸಂಸ್ಥೆಗಳ ಪ್ರತಿನಿಧಿಯಾಗಿ ನೇಮಕ ಮಾಡಿದ್ದು ನನಗೆ ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಮಾಡಲು ಸದಾವಕಾಶ ಸಿಕ್ಕಂತಾಗಿದೆ ಎಂದು ಹೇಳುತ್ತಾ ಸಂಸ್ಥೆಯ ಅಧ್ಯಕ್ಷರಿಗೂ, ಪ್ರಾಚಾರ್ಯರಿಗೂ, ಚೇರಮನ್‌ರಿಗೂ ಕೃತಜ್ಞನಾಗಿರುತ್ತೇನೆ.