ಕಲಬುರಗಿ : ನಗರದ ತಾರಫೈಲ ಬಡಾವಣೆಯಲ್ಲಿ ಬಾಬು ಜಗಜೀವನರಾಂ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಾಸಕರು ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾದ ದತ್ತಾತ್ರೇಯ ಸಿ.ಪಾಟೀಲ ರೇವೂರ ಅವರು ಗುದ್ದಲಿಪೂಜೆಯ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯೆ ನಿಂಗಮ್ಮ ಕಟ್ಟಿಮನಿ, ರಾಜು ವಾಡೇಕರ, ಲಿಂಗರಾಜ ತಾರಫೈಲ, ಮಹೇಶ ವಾಡೇಕರ, ಮಲ್ಲು ಜೀನಕೇರಿ, ಪ್ರಭು ಹಾದಿಮನಿ, ಆಕಾಶ ಪಿ, ಬರಡೇಶ ತಾರಫೈಲ, ಗುಂಡೇಶ ಶಿವನೂರ, ಮರಲಿಂಗ ಹಣಗಿ, ಕಿರಣ ವಾಡೇಕರ, ಅಶೋಕ ಅಬಿರಾಳ, ಶಿವಪುತ್ರ ನಾಗನಹಳ್ಳಿ ಹಾಗೂ ಬಡಾವಣೆಯ ಮುಖಂಡರು ಇದ್ದರು.