ಭಾಲ್ಕಿ: ಶ್ರಾವಣ ಮಾಸದ ನಿಮಿತ್ಯ ೨೮ ರಿಂದ ೨೭ ರವರೆಗೆ ಸಾಯಂಕಾಲ ೫-೩೦ ರಿಂದ ೭-೦೦ ಗಂಟೆವರೆಗೆ ಚನ್ನಬಸವಾಶ್ರಮದಲ್ಲಿ ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಅವರಿಂದ ನಡೆಯಲಿರುವ ಶರಣ ಜೀವನ ದರ್ಶನ ಪ್ರವಚನದ ಕರಪತ್ರ ಬಿಡುಗಡೆ ಹಿರೇಮಠ ಸಂಸ್ಥಾನದಲ್ಲಿ ನೆರವೇರಿತು. ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹಾಗೂ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಸನ್ನಿಧಾನ ವಹಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ಭಾಲ್ಕಿ ತಾಲೂಕಾ ಅಧ್ಯಕ್ಷರಾದ ನಾಗಭೂಷಣ ಮಾಮಡಿಯವರು ಕರಪತ್ರ ಬಿಡುಗಡೆ ಮಾಡಿ ಭಾಲ್ಕಿಯ ಮಹಾಜನತೆ ಪೂಜ್ಯರ ಪ್ರವಚನವನ್ನು ಕೇಳಲು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಪೂಜ್ಯರು ಬಸವಾದಿ ಶರಣರ ಚಿಂತನೆಗಳನ್ನು ನಮ್ಮೆಲ್ಲರಿಗೆ ಮನಮುಟ್ಟುವ ಹಾಗೆ ಹೇಳುತ್ತಾ ನಮ್ಮ ಅಂತರಂಗದ ಕಲ್ಮಷವನ್ನು ತೊಳೆಯುತ್ತಾರೆ. ಪ್ರವಚನದಿಂದ ನಮಗೆ ಮಾನಸಿಕ ನೆಮ್ಮದಿಯನ್ನು ದೊರೆಯುತ್ತದೆ. ಅದಕ್ಕಾಗಿ ಎಲ್ಲರೂ ಪೂಜ್ಯರ ಪ್ರವಚನದ ಲಾಭವನ್ನು ಪಡೆದುಕೊಳ್ಳಬೇಕೆಂದು ಆಹ್ವಾನಿಸಿದರು.
ಬೀದರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶಂಭುಲಿಂಗ ಕಾಮಣ್ಣ, ಪ್ರವಚನ ಸೇವಾ ಸಮಿತಿ ಅಧ್ಯಕ್ಷರಾದ ಬಸವರಾಜ ಮರೆ, ವೀರಣ್ಣ ಕುಂಬಾರ, ಸಂತೋಷ ಹಡಪದ, ಸಿದ್ರಾಮ ಕುಡತೆ, ಶಾಂತಯ್ಯ ಸ್ವಾಮಿ ಹಾಗೂ ಹಡಪದ ದಂಪತಿಗಳು ಮುಂತಾದವರು ಉಪಸ್ಥಿತರಿದ್ದರು.