ಸುರಪುರ:ನಗರದ 1994 ಗೆಳೆಯರ ಬಳಗದ ವತಿಯಿಂದ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕಿರಿಯ ಪ್ರಾಥಮಿಕ ಉರ್ದು ಶಾಲೆ ಖುರೇಷಿ ಮೊಹೊಲ್ಲಾ ದಲ್ಲಿ ಮಕ್ಕಳಿಗೆ ನೋಟ್ ಪುಸ್ತಕ ಪೆನ್ನು ಪೆನ್ಸಿಲ್ ಮಕ್ಕಳ ಬರವಣಿಗೆಗೆ ಬಳಸಲ್ಪಡುವ ಸಾಮಗ್ರಿಗಳನ್ನೂ ಶಾಲೆಯ ಎಲ್ಲಾ ಮಕ್ಕಳಿಗೆ ವಿತರಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಜೀಮ ಪ್ರೇಮಜಿ ಫೌಂಡೇಶನ್ ಸಂಪನ್ಮೂಲ ವ್ಯಕ್ತಿ ಅನ್ವರ್ ಜಮಾದರ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಸಮಾಜದಲ್ಲಿರುವ ಪ್ರತಿಯೊಬ್ಬರು ಶಾಲಾ ಮಕ್ಕಳಿಗೆ ಕಲಿಕೋಪಕರಣಗಳ ಮೂಲಭೂತ ಸೌಕರ್ಯಗಳನ್ನು ಶಾಲೆಗಳಿಗೆ ಒದಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಈ ಕಾರ್ಯಕ್ಕೆ 1994 ಗೆಳೆಯರ ಬಳಗವು ಕೂಡ ತುಂಬ ಸಹಾಯ ಮಾಡಿದೆ ಕ್ರಮೇಣ ಈ ಕಾರ್ಯವು ಮುಂದಿನ ಇನ್ನುಳಿದ ಶಾಲೆ ಗಳಿಗೂ ಶಾಲೆಗಳಲ್ಲಿರುವ ಮಕ್ಕಳಿಗೆ ಹಂಚುತ್ತೇವೆ ಎಂದು ಅಭಿಪ್ರಾಯಪಟ್ಟರು.
ಶಾಲೆಯ ಮುಖ್ಯ ಶಿಕ್ಷಕರಾದ ಸ್ಯಾಮುವೆಲ್ ಮಾತನಾಡುತ್ತಾ ಗೆಳೆಯರೆಲ್ಲರೂ ಸೇರಿ ಈ ಕಾರ್ಯ ಮಾಡಿರುವುದು ಅತ್ಯಂತ ಶ್ಲಾಘನೀಯವೆಂದು ಅಭಿಪ್ರಾಯಪಟ್ಟರು ಮಕ್ಕಳಿಗೆ ಓದು ಬರಹಕ್ಕೆ ಮತ್ತಷ್ಟು ಪ್ರೋತ್ಸಾಹ ಕೊಟ್ಟಂತಾಯ್ತು ಗೆಳೆಯರ ಬಳಗ ಇನ್ನೂ ಹೆಚ್ಚಿನ ಮಟ್ಟದ ಸಮಾಜ ಸೇವೆ ಮಾಡಲಿ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಶರಣು ನಾಯಕ್ ಭೈರಿಮರಡಿ ಭಂಡಾರೆಪ್ಪ ನಾಟೇಕರ್ ಸೂಗುರೇಶ್ ಮಡ್ಡಿ ವೀರಯ್ಯಸ್ವಾಮಿ ನಿಂಗಣ್ಣ ಗೋನಾಲ ದಿಲೀಪ್ ಕುಮಾರ್ ರವಿ ಕುಮಾರ್ ಶೆಟ್ಟಿ ಶಾಂತು ಗೋನಾಲ್ ಮೃತ್ಯುಂಜಯ ಹಿರೇಮಠ್ ಮಹಂತೇಶ್ ಕಡಕೋಳ ಈರಣ್ಣ ಪತ್ತಾರ ಶಿಕ್ಷಕರಾದ ಗಂಗಮ್ಮ ರಂಜನಾ ನಾಜ್ನಿನ್ ಸುಲ್ತಾನ ಮಮತಾ ಸ್ವಾಗತಿಸಿದರು ಮಾಳಪ್ಪ ನಿರೂಪಿಸಿ ಅಬ್ದುಲ್ ರೆಹಮಾನ್ ವಂದಿಸಿದರು