ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದಿಂದ ಜು.31 ರಂದು ಬೆಳಗ್ಗೆ 10.30ಕ್ಕೆ ನಗರದ ಪತ್ರಿಕಾ ಭವನದ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆ, ದಿ.ವಿ.ಎನ್.ಕಾಗಲಕರ್ ವಾರ್ಷಿಕ ಪ್ರಶಸ್ತಿ ಪ್ರದಾನ, ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಪತ್ರಿಕಾ ಸಾಧಕರಿಗೆ ಗೌರವ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ ತಿಳಿಸಿದರು.
ಐವರಿಗೆ ಕಾಗಲಕರ್ ಪ್ರಶಸ್ತಿ ಪ್ರದಾನ: ಅಮೃತ ಮಹೋತ್ಸವದ ಅಂಗವಾಗಿ 2022ನೇ ಸಾಲಿನ ದಿ.ವಿ.ಎನ್.ಕಾಗಲಕರ್ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತರಾದ ಜಯತೀರ್ಥ ಪಾಟೀಲ್, ಶೇಷಮೂರ್ತಿ ಅವಧಾನಿ, ಸಿದ್ದಣ್ಣ ಮಾಲಗಾರ, ದೇವೇಂದ್ರಪ್ಪ ಕಪನೂರ, ಈರಣ್ಣಗೌಡ ಯಡ್ಡಳ್ಳಿ ಅವರಿಗೆ ಪ್ರಶಸ್ತಿ ಫಲಕ 5 ಸಾವಿರ ಗೌರವ ಧನ ನೀಡಿ ಗೌರವಿಸಲಾಗುವುದು ಎಂದು ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಂಸದ ಡಾ.ಉಮೇಶ್ ಜಾಧವ್ ಉದ್ಘಾಟಕರಾಗಿ ಪಾಲ್ಗೊಳ್ಳಲಿದ್ದಾರೆ. ಶಾಸಕ ದತ್ತಾತ್ರೇಯ ಸಿ.ಪಾಟೀಲ್ ರೇವೂರ ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಶಾಸಜ ಡಾ.ಅಜಯ ಸಿಂಗ್, ಕ್ರೆಡಲ್ ಅಧ್ಯಕ್ಷ ಚಂದು ಪಾಟೀಲ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಹಿರಿಯ ಪತ್ರಕರ್ತ ಶಶಿಧರ ಭಟ್ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಮಂಡಳಿಯ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಶಿವರಂಜನ ಸತ್ಯಂಪೇಟೆ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ವಾರ್ಷಿಕ ಪ್ರಶಸ್ತಿ ಪ್ರದಾನ: ಪತ್ರಕರ್ತರಾದ ಬಿ.ವಿ.ಚಕ್ರವರ್ತಿ, ಪ್ರಭುಲಿಂಗ ನೀಲೂರೆ, ಮನೋಜಕುನಾರ ಗುದ್ದಿ, ಸೂರ್ಯಕಾಂತ ಜಮಾದಾರ, ಸುರೇಶಕುಮಾರ ಸಿಂಧೆ, ವೆಂಕಟೇಶ ಹರವಾಳ, ಮಲ್ಲಿಕಾರ್ಜುನ ಗೌರ, ಚಂದ್ರಶೇಖರ ಕೌಲಗಾ, ಅನಿಲ ಸ್ವಾಮಿ, ಪ್ರವೀಣ ಪಾರಾ, ರಾಜು ಕೋಷ್ಠಿ, ಭೀಮಾಶಂಕರ ಫಿರೋಜಬಾದ್, ವಿರೇಶ ಚಿನಗುಡಿ, ಇಂದ್ರಜಿತ್ ರಾಠೋಡ, ಮಹ್ಮದ್ ಜಾವೀದ್ ಅವರಿಗೆ ವಾರ್ಷಿಕ ಪ್ರಶಸ್ತಿ, 1000 ಗೌರವ ಧನ ನೀಡಿ ಗೌರವಿಧಿಸಲಾಗುವುದು ಎಂದರು.
ದೇವೇಂದ್ರಪ್ಪ ಆವಂಟಿ, ಸುರೇಶ್ ಬಡಿಗೇರ, ರಾಮಕೃಷ್ಣ ಬಡಶೇಷಿ, ಅಶೋಕ ಕಪನೂರ, ಸಂಗಮನಾಥ ರೇವತಗಾಂವ, ಅರುಣ ಕದಂ, ಡಾ.ಶಿವರಂಜನ್ ಸತ್ಯಂಪೇಟೆ ಇತರರಿದ್ದರು.