ಕಲಬುರಗಿ:ಜೇವರ್ಗಿ ಅಸೆಂಬ್ಲಿ ಕ್ಷೇತ್ರದ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ತಾಪಂ ಮಾಜಿ ಉಪಾಧ್ಯಕ್ಷರಾಗಿದ್ದ ದೇವೀಂದ್ರಪ್ಪ ದೊಡ್ಮನಿ ಬಿರಾಳ (68) ಗುರುವಾರ ತಮ್ಮ ಸ್ವಂತ ಊರಾದ ಬಿರಾಳದಲ್ಲಿ ಅಲ್ಪ ಕಾಲದ ಅಸ್ವಸ್ಥತೆಯ ನಂತರ ನಿಧನರಾಗಿದ್ದಾರೆ. ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ದೇವೀಂದ್ರಪ್ಪ ಅಗಲಿದ್ದಾರೆ. ಇವರ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರ ಜು. 29 ರ ಶುಕ್ರವಾರ ಅವರ ಸ್ವಂತ ಊರಾದ ಬಿರಾಳ (ಬಿ) ನಲ್ಲಿ ನಡೆಯಲಿದೆ ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ.
ದೇವೀಂದ್ರಪ್ಪ ಬಿರಾಳ ಇವರ ನಿಧನಕ್ಕೆ ಜೇವರ್ಗಿ ಶಾಸಕರು ಹಾಗೂ ವಿಧಾನಸಬೆ ವಿರೋಧ ಪಕ್ಷದ ಮುಖ್ಯ ಸಚೇತಕರು ಆಗಿರುವ ಡಾ. ಅಜಯ್ ಸಿಂಗ್ ಕಂಬನಿ ಮಿಡಿದ್ದಾರೆ. ಈ ಕುರಿತಂತೆ ಹೇಳಿಕೆ ನೀಡಿರುವ ಅವರು ದೇವೀಂದ್ರಪ್ಪ ಬಿರಾಳ ಇವರು ಜೇವರ್ಗಿ ಅಸೆಂಬ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗಟ್ಟಿಯಾಗಿ ಬೆಳೆಯಲು ಸಾಕಷ್ಟು ಕೆಲಸಗಳನ್ನು ಸಂಘಟನೆ ಹಂತದಲ್ಲಿ ಮಾಡಿದವರು. ಇವರು ಜೇವರ್ಗಿ ತಾಪಂ ಉಪಾಧ್ಯಕ್ಷರಾಗಿಯೂ, ಬಿರಾಳ ಗ್ರಾಪಂ ಅಧ್ಯಕ್ಷರಾಗಿಯೂ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿದವರು ಎಂದು ಅವರ ಸೇವೆನ್ನು ಕೊಂಡಾಡಿದ್ದಾರೆ.
ಜೇವರ್ಗಿ ಭಾಗದಲ್ಲಿ ಜನ ಸೇವೆ ಮಾಡುತ್ತ ನಮ್ಮನ್ನಗಲಿರುವ ದೇವೀಂದ್ರಪ್ಪ ದೊಡ್ಮನಿ ಇವರ ಆತ್ಮಕ್ಕೆ ಭಗವಂತ ಚಿರಶಾಂತಿ ದಯಪಾಲಿಸಲಿ, ಅವರ ಕುಟುಂಬ ವರ್ಗದವರಿಗೆ ದುಃಖ ಸಹಿಸಿಕೊಳ್ಳುವ ಶಕ್ತಿ ದೇವರು ಕರುಣಿಸಲಿ ಎಂದು ಡಾ. ಅಜಯ್ ಸಿಂಗ್ ಪ್ರಾರ್ಥಿಸಿದ್ದಾರೆ.
ಕಾಂಗ್ರೆಸ್ ಮುಖಂಡ ದೇವೀಂದ್ರಪ್ಪ ಬಿರಾಳ ಇವರ ನಿಧನಕ್ಕೆ ಮಾಜಿ ಎಂಎಲ್‍ಸಿ ಅಲ್ಲಂಪ್ರಭು ಪಾಟೀಲ್ ನೆಲೋಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರುಕ್ಕು ಪಟೇಲ್ ಇಜೇರಿ, ಸಿದ್ದಲಿಂಗರೆಡ್ಡಿ ಇಟಗಿ, ರಾಜೇಶಖರ್ ಸಿರಿ, ಶಾಂತಪ್ಪ ಕೋಬಾಳ ಕಂಬನಿ ಮಿಡಿದಿದ್ದು ಕುಟುಂಬ ವರ್ಗಕಕೆ ದೇವರು ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸಿದ್ದಾರೆ.