ಕಲಬುರಗಿ: ಇಂದಿನ ಆಧುನಿಕ ಯುಗದಲ್ಲಿ ಶರಣರ ಅನುಭಾವ ನುಡಿಗಳು ಜನರ ಬದುಕಿಗೆ ದಾರಿ ದೀಪವಾಗಿದೆ.ಅವರ ಆದರ್ಶಗಳು ಇಂದಿಗೂ ಪ್ರಸ್ತುತ ಎಂದು ವೇದ ಪಂಡಿತ ಶಿವಕವಿ ಹಿರೇಮಠ ಜೋಗೂರ ಅಭಿಪ್ರಾಯ ಪಟ್ಟಿದ್ದಾರೆ.
ನಗರದ ಜಯನಗರ ಶಿವಮಂದಿರಲ್ಲಿ ಶ್ರಾವಣ ಮಾಸದ ನಿಮಿತ್ತ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಶರಣರ ಧರ್ಮ ಅಧ್ಯಾತ್ಮಿಕ ಪ್ರವಚನ ಉದ್ಘಾಟನೆ ಕಾರ್ಯಕ್ರಮದಲ್ಲಿ ಆಶಯನುಡಿ ಮಾತನಾಡಿದ ಅವರು ಸರ್ವ ಮಾನವರ ಉದ್ಧಾರಕ್ಕಾಗಿ ಶರಣರು ತ್ಯಾಗಿಗಳಾದರು.ಜನರ ಬದುಕಿನಲ್ಲಿ ತುಂಬಿರುವ ಕತ್ತಲೆಯಲ್ಲಿ ಜ್ಞಾನದ ಬೆಳಕನ್ನು ಚೆಲ್ಲಿದರು.ಎಲ್ಲರೂ ನಮ್ಮವರು ಎಂದು ತತ್ವ ಸಾರಿದರು.ಇಂದಿನವರಿಗೆ ಅದರಲ್ಲೂ ಯುವ ಜನಾಂಗಕ್ಕೆ ಅಧ್ಯಾತ್ಮಿಕ ಚಿಂತನೆಗಳನ್ನು ಮೂಡಿಸುವುದು ಅಗತ್ಯ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ಉದ್ಯಮಿ ಯುವ ಮುಖಂಡ ಸಂತೋಷ ಬಿಲಗುಂದಿ ವಿಶ್ವ ಗುರು ಬಸವಣ್ಣನವರು ವಚನಗಳ ಮೂಲಕ ಮೌಲ್ಯಾಧಾರಿತ ಸಂದೇಶಗಳನ್ನು ಸಾರಿದ್ದಾರೆ.ಪ್ರವಚನ, ಪುರಾಣಗಳ ಕುರಿತು ಜನರಿಗೆ ಆಸಕ್ತಿ ಮೂಡಿಸುವ ಕೆಲಸ ಹೆಚ್ಚು ಹೆಚ್ಚು ಆಗಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಸಾಹಿತಿ ಬಿ.ಎಚ್.ನಿರಗುಡಿ ಪ್ರತಿ ವರ್ಷದಂತೆ ಈ ಬಾರಿಯೂ ಜಯನಗರ ಶಿವಮಂದಿರದಲ್ಲಿ ಒಂದು ತಿಂಗಳು ಅಧ್ಯಾತ್ಮಿಕ ಪ್ರವಚನ ಹಮ್ಮಿಕೊಂಡಿದ್ದು ಶ್ಲಾಘನೀಯ.ಒತ್ತಡದ ಜೀವನದಲ್ಲಿ ಪ್ರವಚನ ಟಾನಿಕ್ ಆಗಿ ಕೆಲಸ ಮಾಡಿ ನೆಮ್ಮದಿ ತರುತ್ತದೆ ಎಂದರು.ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೋಟಿಗೊಬ್ಬ ಶರಣ ಎನ್ನುವುದು ಸುಳ್ಳಲ್ಲ. ಅವರ ಮೌಲ್ಯಗಳೆ ಎತ್ತಿ ತೋರಿಸುತ್ತದೆ.ಶರಣರ ಸಂದೇಶಗಳನ್ನು ನಾವೇಲ್ಲರೂ ಪಾಲಿಸೋಣ ಎಂದು ಕರೆ ನೀಡಿದರು..ಮಹಾನಗರ ಪಾಲಿಕೆ ಸದಸ್ಯ ವೀರಣ್ಣ ಹೊನ್ನಳ್ಳಿ, ಯುವ ಮುಖಂಡ ಉದಯಕಿರಣ ರೇಷ್ಮೆ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಡಾ.ಎ.ಎಸ್.ಭದ್ರಶೆಟ್ಟಿ ಸ್ವಾಗತಿಸಿದರು.ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಕೆ.ಬಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಜಿ.ಜಿ.ವಣಿಕ್ಯಾಳ ಕಾರ್ಯಕ್ರಮ ನಿರೂಪಿಸಿದರು.ಎಂ.ಡಿ.ಮಠಪತಿ ವಂದಿಸಿದರು.ಟ್ರಸ್ಟ್ ಪದಾಧಿಕಾರಿಗಳಾದ ವಿರೇಶ ದಂಡೋತಿ, ಶಿವಪುತ್ರಪ್ಪ ಮರಡಿ, ಬಸವರಾಜ ಅನ್ವರಕರ, ಭೀಮಾಶಂಕರ ಶೆಟ್ಟಿ, ಎಸ್.ಡಿ.ಸೇಡಂಕರ, ಬಸವರಾಜ ಮಾಗಿ, ಮಲ್ಲಿಕಾರ್ಜುನ ಕಲ್ಲಾ, ಗುರುಬಸಪ್ಪ ಕಾಂತಾ, ಶ್ರೀಮತಿ ಅನುರಾಧ ಕುಮಾರಸ್ವಾಮಿ, ಸಂಜೀವಕುಮಾರ ಕರಿಕಲ್ ಬಡಾವಣೆಯ ಮುಖಂಡರಾದ ವಿನೋದ ಪಾಟೀಲ್, ಚಾಮರಾಜ ದೋಡ್ಮನಿ,ಅಮೀತ ಚಿಟಗುಂಪಿ, ಪ್ರಶಾಂತ ತಂಬೂರಿ, ಚೇತನ,ಶರವಣ ಸ್ವಾಮಿ, ವೀರಣ್ಣ ಇಂಡಿ,ಎ.ಎಚ್.ಹುಂಪ್ಳಿ ಸೇರಿದಂತೆ ಮಹಿಳೆಯರು, ಹಿರಿಯರು ಭಾಗವಹಿಸಿದ್ದರು.