ಶರಣರ ದಾರಿಯಲ್ಲಿ ಸನ್ಮಾರ್ಗವಿದೆ: ಪ್ರಭುಲಿಂಗ ಮಹಾಗಾಂವಕರ

0
51

ಕಲಬುರಗಿ: ಶರಣರು ತಮ್ಮ ವಚನಗಳ ಮೂಲಕ ಲೋಕದ ಅಂಕು ಡೊಂಕುಗಳನ್ನು ತಿದ್ದುವ ಮಹತ್ಕಾರ್ಯ ಮಾಡಿದರು ಎಂದು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ ತಿಳಿಸಿದರು.

ಶ್ರಾವಣ ಮಾಸದ ಪ್ರಯುಕ್ತ ವಚನೋತ್ಸವ ಪ್ರತಿಷ್ಠಾನದ ವತಿಯಿಂದ ಶರಣ ರವೀಂದ್ರ ಶಾಬಾದಿಯವರ ಮನೆಯಂಗಳದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರಾವಣ ವಚನೋತ್ಸವ ಕಾರ್ಯಕ್ರಮ ಶರಣರ ತತ್ವ ದರ್ಶನ ಉಪನ್ಯಾಸ ಮಾಲೆ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಇಂದಿನ ಯುವ ಪೀಳಿಗೆ ಶರಣರು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕಿರುವುದು ಬಹಳ ಅಗತ್ಯವಾಗಿದೆ. ಬಸವಣ್ಣ ಕಟ್ಟಿದ ಲಿಂಗಾಯತ ಧರ್ಮಕ್ಕೆ ಸಂವಿಧಾನಿಕ ಮಾನ್ಯತೆ ದೊರಕುವುದು ಬಹಲಕ ಅಗತ್ಯವಿದೆ ಎಂದು ಹೇಳಿದರು.

‘ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ, ಧರೆ ಹತ್ತಿ ಉರಿದಡೆ ನಿಲಬಹುದೆ?’ ಎಂಬ ಬಸವಣ್ಣನ ವಚನ ಕುರಿತು ವಿಶೇಷ ಉಪನ್ಯಾಸ ನೀಡಿದ ಪ್ರೊ. ಕಲ್ಯಾಣರಾವ ಪಾಟೀಲ, ಇಂದಿನ ಪ್ರಸ್ತುತ ದಿನಮಾನಗಳಿಗೆ ಹೇಳಿ ಮಾಡಿಸಿದಂತಿರುವ ಈ ವಚನ ಮನುಷ್ಯನ ಮೂಲಭೂತ ಕರ್ತವ್ಯ ಗಳನ್ನು ತಿಳಿಸಿಕೊಡುತ್ತವೆ ಎಂದರು.

ತಂದೆತಾಯಿಯ ಆಸ್ತಿಗೆ ವಾರಸುದಾರರಾಗದೆ, ಅವರ ಬದುಕಿನ ತತ್ವ, ವಿಚಾರಗಳಿಗೆ ವಾರಸುದಾರರಾಗಿರಬೇಕು. ವಚನಗಳ ಪಚನದಿಂದ ಸಮಾಜದ ಆರೋಗ್ಯ ಕಾಪಾಡಲು ಸಾಧ್ಯ ಎಂದು ಬಣ್ಣಿಸಿದರು.

ಮುಖ್ಯ ಅತಿಥಿಗಳಾಗಿದ್ದ ಪತ್ರಕರ್ತ-ಸಾಹಿತಿ ಡಾ. ಶಿವರಂಜನ ಸತ್ಯಂಪೇಟೆ ಮಾತನಾಡಿ, ಸಂಯಮ ಕಳೆದುಕೊಳ್ಳುತ್ತಿರುವ ಇಂದಿನ ಯುವ ಸಮೂಹಕ್ಕೆ ಶರಣರ ತತ್ವಾದರ್ಶಗಳು ಕಡೆಗೀಲು ಆಗಿವೆ ಎಂದು ಹೇಳಿದರು.

ವಚನೋತ್ಸವ ಒಕ್ಕೂಟಗಳ ಅಧ್ಯಕ್ಷ ಅಪ್ಪಾರಾವ ಅಕ್ಕೋಣಿ ಅಧ್ಯಕ್ಷತೆ ವಹಿಸಿದ್ದರು. ವಚನೋತ್ಸವ ಸಮಿತಿ ಗೌರವಾಧ್ಯಕ್ಷ ಬಿ.ಕೆ. ಹಳ್ಳಿ ಪ್ರಾಸ್ತಾವಿಕ ಮಾತನಾಡಿದರು.

ಬಸವರಾಜ ಧೂಳಾಗುಂಡಿ ನಿರೂಪಿಸಿದರು. ಕಲ್ಯಾಣಪ್ಪ ಬಿರಾದಾರ ಪ್ರಾರ್ಥಿನೆಗೀತೆ ಹಾಡಿದರು. ಹಣಮಂತರಾವ ಕೋಳಕೂರ ವಂದಿಸಿದರು.

ಶತಾಯುಷಿ ಭೋಗಲಿಂಗಪ್ಪ ಶಾಬಾದಿ, ಆರ್.ಜಿ.‌ಶೆಟಗಾರ, ಸತೀಶ ಸಜ್ಜನಶೆಟ್ಟಿ, ಬಸವಪ್ರಭು ಶಾಬಾದಿ, ಶಿವಕುಮಾರ ಶಾಬಾದಿ, ಹಣಮಂತರಾಯ ಕುಸನೂರ, ಸಿದ್ಧರಾಮ ಯಳವಂತಗಿ, ಸಿದ್ಧರಾಮ ಹಂಚಿನಾಳ, ಬಸವರಾಜ ಮೊರಬದ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here