ಬಸವಕಲ್ಯಾಣ: ರೈತರು ತಮ್ಮ ಹೊಲಗಳಿಗೆ ಹೋಗಲು ರಸ್ತೆ ಇಲ್ಲವೆಂದು ತಿಳಿಸಿದಾಗ ಸ್ವತಹ ಶಾಸಕ ಶರಣು ಸಲಗರ ಅವರೇ ಖುದ್ದು ದಾರಿ ವೀಕ್ಷಿಸಲು ಹೋಗಿ ತೆರೆಯನ್ನು ಹಾರಿ ಹೋಗುತ್ತಿರುವ ಪೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.
ತಮ್ಮ ಮತಕ್ಷೇತ್ರದ ಕಾಂಬಳೆ ವಾಡಿ ಗ್ರಾಮಕ್ಕೆ ಭೇಟಿ ನೀಡಿದಾಗ ಅಲ್ಲಿನ ರೈತರು ಹೊಲಗಳಿಗೆ ದಾರಿ ಮಾಡಿಕೊಡಲು ಕೇಳಿಕೊಂಡರು. ತಕ್ಷಣವೇ ಆ ದಾರಿಯನ್ನು ವೀಕ್ಷಿಸಲು ತೆರಳಿದಾಗ ದಾರಿಯಲ್ಲಿರುವ ತೆರೆಯನ್ನು ದಾಟಲು ಹಾರಿದ್ದಾರೆ.
ರೈತರ ವಿಮೆ ಬರದೆ ಇದ್ದಾಗ ಇನ್ಶುರೆನ್ಸ್ ಕಂಪನಿಗೆ ಹೋಗಿ ವಿಚಾರಿಸದ ಶಾಸಕರ ಮಧ್ಯ ಶರಣು ಸಲಗರ ಅವರ ಕಾರ್ಯ ಮೆಚ್ಚುವಂತದ್ದು ಎಂದು ರೈತರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.