ಮತಕ್ಷೇತ್ರದ ಶೈಕ್ಷಣಿಕ ಅಭಿವೃದ್ಧಿಗೆ ನಾನು ಸದಾ ಕಾಲ ಬದ್ಧ: ಮತ್ತಿಮಡು

0
34

ಶಹಾಬಾದ: ಕಲಬುರಗಿ ಗ್ರಾಮೀಣ ಮತಕ್ಷೇತ್ರ ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸಲು ನಾನು ಸದಾ ಕಾಲ ಬದ್ಧನಾಗಿರುತ್ತೆನೆ ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹೇಳಿದರು.

ಅವರು ಸೋಮವಾರ ಧರ್ಮಾಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡು ಕೋಣೆಗಳ ಅಡಿಗಲ್ಲು ಸಮಾರಂಭವನ್ನು ನೇವೇರಿಸಿ ಮಾತನಾಡಿದರು.

Contact Your\'s Advertisement; 9902492681

ಶಿಕ್ಷಣವೊಂದೆ ಸಮಾಜದ ಉನ್ನತಿ ಮತ್ತು ಪ್ರಗತಿಯಲ್ಲಿ ಮುಖ್ಯ ಅಸ್ತ್ರವಾಗಿದ್ದು, ಶಿಕ್ಷಣದಿಂದಲೇ ಏನೆಲ್ಲ ಪಡೆಯಲು ಸಾಧ್ಯ.ಆದ್ದರಿಂದ ಮಕ್ಕಳನ್ನು ಶಾಲೆಗೆ ಕಳಿಸಿ.ಉತ್ತಮ ವಿದ್ಯಾವಂತರನ್ನಾಗಿ ಮಾಡಿ ಎಂದರಲ್ಲದೇ, ಗ್ರಾಮದ ಮಕ್ಕಳಿಗೆ ಉತ್ತಮವಾದ ಕೋಣೆಗಳ ಅವಶ್ಯಕತೆ ಇತ್ತು.ಇಲ್ಲಿನ ಗ್ರಾಮಸ್ಥರು ಹಲವು ದಿನಗಳ ಬೇಡಿಕೆ ಮೇರೆಗೆ ೨೦೨೧-೨೨ನೇ ಸಾಲಿನ ಕೆಕೆಆರ್‌ಡಿಬಿ ಯೋಜನೆ ಅಡಿಯಲ್ಲಿ ಸುಮಾರು ೨೪ ಲಕ್ಷ ರೂ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಎರಡು ಕೋಣೆಗಳ ಅನುದಾನ ಒದಗಿಸಲಾಗಿದೆ.ಅಲ್ಲದೇ ಕೋಣೆಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಲಾಗಿದೆ.

ಸರಕಾರಿ ಶಾಲೆಯ ಮಕ್ಕಳು ಜಾಣರು.ಅವರಿಗೆ ಮೂಲ ಸೌಲಭ್ಯಗಳ ಕೊರತೆಯಿಂದ ಶೈಕ್ಷಣಿವಾಗಿ ಹಿಂದುಳಿಯುತ್ತಿದ್ದಾರೆ.ಆದ್ದರಿಂದ ನಮ್ಮ ಸರಕಾರ ಶಾಲೆಯ ಮಕ್ಕಳಿಗೆ ಶೈಕ್ಷಣಿಕವಾಗಿ ಯಾವುದೇ ಕೊರತೆಯಾಗದಂತೆ ಮೂಲಶೌಲಭ್ಯ ಒದಗಿಸುವತ್ತ ಮುಂದಾಗಿದೆ. ಶಿಕ್ಷಕರು ಇದರ ಸದುಪಯೋಗಪಡಿಸಿಕೊಂಡು ಈ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವತ್ತ ಶ್ರಮಿಸಬೇಕು.ಗುತ್ತಿಗೆದಾರು ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು.ಅಲ್ಲದೇ ಅಧಿಕಾರಿಗಳು ಕಾಮಗಾರಿ ಗುಣಮಟ್ಟವನ್ನು ಪರೀಕ್ಷಿಸುತ್ತಿರಬೇಕು.ಗ್ರಾಮದ ಜನರಿಗೆ ಯಾವುದೇ ತೊಂದರೆ ಇದ್ದರೂ ತಿಳಿಸಿ, ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುತ್ತೆನೆ ಎಂದರು.

ಮುಖಂಡರಾದ ಸಂಗಮೇಶ ನಾಗನಳ್ಳಿ, ಪ್ರಭು ಕಾಳನೂರ,ಶಿವಪುತ್ರಪ್ಪ ಪಾಟೀಲ, ನಾಗೇಂದ್ರಪ್ಪ ಪೂಜಾರಿ,ಮಾಪಣ್ಣ ಕಟ್ಟಿಮನಿ, ಗುರುರಾಜ ಬಿಲಗುಂದಿ,ಶಿವಶರಣಪ್ಪ ನಾಟೇಕಾರ,ಅಂಬಾರಾಯ ಭಾವಿಮನಿ, ದಿನೇಶ ರಾಠೋಡ, ರಾಜು ಚವ್ಹಾಣ(ಆರ್.ಎಮ್.ಸಿ), ವಿನೋದ ಪಾಟೀಲ ಸರಡಗಿ, ವಿಶ್ವನಾಥ ಪಾಟೀಲ ಬೇನೂರ,ಶಾಂತಕುಮಾರ ಪಾಟೀಲ ನಂದೂರ, ನಾಗರಾಜ ಕಲ್ಲಾ, ಫಯೀಮ್ ಸಾಹೇಬ,ಚಂದ್ರಶೇಖರ ಪಾಟೀಲ, ಭೀಮಾಶಂಕರ ಹೂಗಾರ, ಬಸವರಾಜ ಪಾಳಾ, ಬಸವರಾಜ ದೇವಣಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here