ಭೀಮಳ್ಳಿ-ಭೋಸ್ಗಾ ಸೇತುವೆ ಕಾಮಗಾರಿ ಯೋಜನೆ ಮರು ಪರಿಷ್ಕಣೆಗೆ ಅಲ್ಲಂಪ್ರಭು ಪಾಟೀಲ್ ಆಗ್ರಹ

0
27

ಕಲಬುರಗಿ: ತಾಲೂಕಿನ ಭೀಮಳ್ಳಿ- ಭೋಸ್ಗಾ ಹಳ್ಳಕ್ಕೆ ಅಡ್ಡಲಾಗಿ ರೂಪಿಸಲಾಗಿರುವ ಬಾಂದಾರು ಯೋಜನೆ ತುಂಬ ಅಶಕ್ತವಾಗಿದೆ, ಇದರಿಂದ ಹಳ್ಳದ ರಭಸದ ನೀರನ್ನು ತಡೆಯಲಾಗದು, ಸೇತುವೆ ಮತ್ತೆ ಕುಸಿಯುವ, ಕೊಚ್ಚಿ ಹೋಗುವ ಅಪಾಯವಿದೆ ಎಂದು ಕಳವಳ ಹೊರಹಾಕಿರುವ ಮಾಜಿ ಎಂಎಲ್‍ಸಿ ಅಲ್ಲಂಪ್ರಭು ಪಾಟೀಲ್ ತಕ್ಷಣ ಜಿಲ್ಲಾಡಳಿತ, ಜಿಪಂ ಸದರಿ ಗ್ರಾಮಗಳ ಸಮಸ್ಯೆ ಬಗ್ಗೆ ಗಮನ ಹರಿಸಿ ಬಾಂದಾರು ಕಾಮಗಾರಿ ಯೋಜನೆ ಪರಿಷ್ಕರಿಸಬೇಕು, ಗಟ್ಟಿಮುಟ್ಟಾದ ಕಾಮಗಾರಿಯಾಗುವಂತೆ ಪರಿಷ್ಕರಿಸಿ ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.

ಶುಕವಾರ ಮಳೆ ನೀರಿಗೆ ಕೊಚ್ಚಿ ಹೋದ ಸೇತುವೆ, ಅರೆಬರೆ ಸೇತುವೆ ಕಾಮಗಾರಿ ಸ್ಥಳಕ್ಕೆ ಬೇಟಿ ನೀಡಿ, ಜನರ ಅಹವಾಲು ಆಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

Contact Your\'s Advertisement; 9902492681

ಇದು ಸಮಸ್ಯೆ ತುಂಬ ಗಂಭೀರವಾಗಿದೆ, 3 ವರ್ಷದಿಂದ ಸಮಸ್ಯೆ ಕಾಡುತ್ತಿದೆ, ಕಳೆದ ಬಾರಿಯೂ ಇದೇ ಹಳ್ಳದ ನೀರಿಗೆ ಇಬ್ಬರು ಸಾವನ್ನಪ್ಪಿದ್ದಾರೆ. ಸೇತುವೆ ನಿರ್ಮಿಸುವಂತೆ ಜನ ಕೋರಿದ್ದರೂ ಮಲೆಗಾಲದಲ್ಲಿ ಕಾಮಗಾರಿ ಆರಂಭಿಸಿದ್ದಾರೆ. ಅದೂ 12 ಎಂಎಂ ಸರಳು ಹಾಕಿ ಹಳ್ಳಕ್ಕೆ ಸೇತುವೆ ಕಟ್ಟುತ್ತಿದ್ದಾರೆ. ಈ ಕಾಮಾಗರಿ ಗಟ್ಟಿಮುಟ್ಟಾಗಿಲ್ಲ. ಯೋಜನೆ ಪರಿಷ್ಕರಣೆಯಾಗಲಿ, ಕನಿ,್ಠ 10 ಬಾಕ್ಟ್ ಇರುವಂತಹ ಕಲ್ವರ್ಟ್ ಇಲ್ಲಿ ನಿರ್ಮಾಣವಾದಲ್ಲಿ ಸಮಸ್ಯೆಗೆ ಕಾಯಂ ಪರಿಹಾರ ಸಿಗುತ್ತದೆ ಎಂದು ಪಾಟೀಲ್ ಆಗ್ರಹಿಸಿದ್ದಾರೆ.

ಸುತ್ತಲಿನ 10 ಕ್ಕೂ ಹೆಚ್ಚು ಹಳ್ಳಿಗಳಿಂದ ನೀರು ಭಾರಿ ಪ್ರಮಾಣದಲ್ಲಿ ಹರಿದು ಬಂದು ಹಳ್ಳ ಸೇರುತ್ತದೆ. ಇಲ್ಲಿನ ನೀರಿನ ರಭಸದ, ಸಂಗ್ರಹಿತ ನೀರಿನ ಪ್ರಮಾಣ ಅಧ್ಯಯನ ಮಾಡದೆ ತರಾತುರಿಯಲ್ಲಿ ಈಹಗೆ ಕಾಮಗಾರಿ ಮಾಡಿದರೆ ಜನರ ಸಮಸ್ಯೆಗೆ ಪರಿಹಾರ ದೊರಕೋದಿಲ್ಲ. 40 ರಿಂದ 50 ಟನ್ ಭಾರದ ವಾಹನಗಳು ಇಲ್ಲಿಂದ ಸಾಗುತ್ತವೆ. ಕಳೆದ ವರ್ಷವೇ ಸಮಸ್ಯೆ ಗಮನಕ್ಕೆ ತಂದರೂ ಜಿಲ್ಲಾಡಳಿತ ಕಾಮಗಾರಿ ಆಂರಭಿಸುವಲ್ಲಿ ಅಲಕ್ಷನ ತೋರಿದೆ. ಇನ್ನಾದರೂ ಸದರಿ ಯೋಜನೆ ಸಂಪೂರ್ಣ ಪರಿಷ್ಕರಮೆ ಮಾಡಿ ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದರು.

ಗ್ರಾಮಸ್ಥರಾದ ವಿಶ್ವನಾಥ ಜಮಾದಾರ್, ಇಸ್ಮಾಯಿಲ್ ಸಾಬ್, ಸೀತಾಬಾಯಿ ಸೇರಿದಂತೆ ಅನೇಕರು ಅಲ್ಲಂಪ್ರಭು ಅವರನ್ನು ಕಂಡು ಕಳೆದ 3 ದಿನದಿಂದ ಹಳ್ಳ್ಳ ದಾಟಲಾಗುತ್ತಿಲ್ಲ. ಅಪಾಯದಲ್ಲೇ ದಾಟುತ್ತಿz್ದÉೀವೆ. ತಕ್ಷಣ ಸಮಸ್ಯೆ ಪರಿಹಾರಕ್ಕೆ ಕ್ರಮ ಜರುಗಿಸಲು ಕೋರಿದರು. ಕೆಲವರಂತೂ ಈ ಕಾಮಗಾರಿಗೆ 3 ಕೋಟಿಗೂ ಹೆಚ್ಚಿನ ಹಣ ಮೀಸಲಿಟ್ಟು 10 ಬಾಕ್ಸ್‍ನ ಕಾಮಾರಿ ರೂಪಿಸಿ ಜಾರಿಗೆ ತರುವಂತೆ ಒತ್ತಾಯಿಸಿದರು. ಜನರ ಅಹವಾಲು ಆಲಿಸಿದ ನಂತರ ತಕ್ಷಣವೇ ನಿಯೋಗದಲ್ಲಿ ಜಿಪಂ ಸಿಇಓ, ಜಿಲ್ಲಾಧಿಕಾರಿ ಹಾಗೂ ಕೆಕೆಆರ್‍ಡಿಬಿ ಅದ್ಯಕ್ಷರನ್ನು ಕಂಡು ಸಮಸ್ಯೆ ವಿವರಿಸಿ ಯೋಜನೆ ಪರಿಷ್ಕರಿಸಿ ಜಾರಿಗೆ ತರುವಂತೆ ಆಗ್ರಹಿಸುವುದಾಗಿ ಅಲ್ಲಂಪ್ರಭು ಪಾಟೀಲ್ ಹೇಳಿದರು.

ಕಾಂಗ್ರೆಸ್ ಮುಖಂಡರಾದ ನೀಲಕಂಠರಾವ ಮೂಲಗೆ, ಜಿಪಂ ಮಾಜಿ ಸದಸ್ಯ ಸಂತೋಷ ಪಾಟೀಲ್ ದಣ್ಣೂರ , ಗ್ರಾಮದ ಪಂಚಾಯ್ತಿ ಸದಸ್ಯ ಶರಣಪ್ಪ ಸಿಂಗೆ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಮಾತನಾಡಿ ಕಲಂ 371 ಜೆ ಅಡಿ ಕೆಕೆಆರ್‍ಡಿಬಿ ಇದೆ. ಸಾಕಷ್ಟು ಹಣವಿದೆ. ಹಳ್ಳಿ ಜನರ ಇಂತಹ ಸಮಸೆಗೆ ತಕ್ಷಣ ಯೋಜನೆ ರೂಪಿಸುವಂತೆ ಅಧ್ಯಕ್ಷರು ಹಾಗೂ ಕಲಬುರಗಿ ದಕ್ಷಿಣ ಶಾಸಕರಾದ ದತ್ತಾತ್ರೇಯ ಪಾಟೀಲರಿಗೆ ಆಗ್ರಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here