ಕಲಬುರಗಿ: ಭಾರತ ಸ್ವಾತಂತ್ರ್ಯದಅಮೃತ ಮಹೋತ್ಸವದ ಪ್ರಯುಕ್ತಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು ರೂಪಿಸಿರುವ ಮನೆ-ಮನೆಗೆ ರಾಷ್ಟ್ರಧ್ವಜ ವಿತರಣಾಅಭಿಯಾನ, ಕವಿಗೋಷ್ಠಿ, ಸ್ವಾತಂತ್ರ್ಯ ಚಳುವಳಿಗೆ ಕರ್ನಾಟಕದಕೊಡುಗೆಕುರಿತು ವಿಚಾರ ಸಂಕಿರಣ, ಛಾಯಾಚಿತ್ರಗಳ ಪ್ರದರ್ಶನ, ಪುಸ್ತಕಗಳ ವಿತರಣೆ ಹೀಗೆ ಅನೇಕ ವೈವಿದ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಶನಿವಾರದಂದು ಬೆಳಗ್ಗೆ ೧೧.೧೫ ಕ್ಕೆ ನಗರದಕನ್ನಡ ಭವನದ ಪ್ರಾಂಗಣದಲ್ಲಿರಾಷ್ಟ್ರಧ್ವಜ ಗಳನ್ನು ವಿತರಣೆ ಮಾಡುವ ಮೂಲಕ ಅನೇಕ ಗಣ್ಯರುಗಳಿಂದ ವಿದ್ಯುಕ್ತವಾಗಿ ಚಾಲನೆ ನೀಡಲಾಗುತ್ತಿದೆಎಂದುಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.
ಪರಿಷತ್ತು ಕಲೆ, ಸಂಗೀತ, ಸಾಹಿತ್ಯದ ಬೆಳವಣಿಗೆಯ ಜತೆಗೆ ಸ್ವಾತಂತ್ರಕ್ಕಾಗಿ ಮಡಿದ ಮಹನೀಯರನ್ನೂ ಸಹ ಸ್ಮರಿಸುವಕಾರ್ಯ ಮಾಡಲಾಗುತ್ತಿದೆ. ರಾಷ್ಟ್ರಧ್ವಜವನ್ನುದೇಶಪ್ರೇಮದ ಸಂಕೇತವಾಗಿದೆಎಂದು ನಾವೆಲ್ಲರೂ ಭಾವಿಸಲಾಗಿದ್ದು, ಧ್ವಜಾರೋಹನ ಮತ್ತುಧ್ವಜವಂದನೆಗೆತನ್ನದೇಆದಚಾರಿತ್ರಿಕ ಮಹತ್ವವೂಇದೆ.
ಎಪ್ಪತ್ತೈದು ವರ್ಷಗಳನ್ನು ಪೂರೈಸುತ್ತಿರುವ ಸ್ವತಂತ್ರ ಭಾರತ ವರ್ತಮಾನದ ಸಂದರ್ಭದಲ್ಲಿ ಇಂಥ ಅರ್ಥಪೂರ್ಣ ಕಾರ್ಯಕ್ರಮಗಳೊಂದಿಗೆ ರಾಷ್ಟ್ರಪ್ರೇಮದೊಂದಿಗೆ ಸ್ವಾತಂತ್ರ್ಯ ಸಂಗ್ರಾಮದ ಸದಾಶಯಗಳನ್ನು ಸಂರಕ್ಷಿಸುವಜವಾಬ್ದಾರಿಯನ್ನೂಕೂಡ ನಾವು ಮನಗಾಣಬೇಕಿದೆ. ಈ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್ತು ವಿಭಿನ್ನ ಮತ್ತು ಪ್ರಾಯೋಗಿಕವಾದ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿಆಯೋಜಿಸಲು ನಿರ್ಧರಿಸಲಾಗಿದೆಎಂದುಅವರು ವಿವರಿಸಿದ್ದಾರೆ.