ಮೂರು ದಿನ ಡಿ. ದೇವರಾಜ ಅರಸು ಜನ್ಮ ದಿನಾಚರಣೆಗೆ ಡಿ.ಸಿ. ಅಧ್ಯಕ್ಷತೆಯಲ್ಲಿ ನಿರ್ಧರಾ

0
11

ಕಲಬುರಗಿ: ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಹಿಂದುಳಿದ ವರ್ಗದ ಹರಿಕಾರರಾದ ಡಿ.ದೇವರಾಜ ಅರಸು ಅವರು ಜನ್ಮ ದಿನಾಚರಣೆಯನ್ನು ಇದೇ ಆಗಸ್ಟ್ 20 ರಿಂದ 23ರ ವರೆಗೆ ಜಿಲ್ಲೆಯಲ್ಲಿ ಅರ್ಥಪೂರ್ಣ ಮತ್ತು ವಿಶಿಷ್ಠವಾಗಿ ವಿಜೃಂಭಣೆಯಿಂದ ಆಯೋಜಿಸಲು ಡಿ.ಸಿ. ಯಶವಂತ ವಿ. ಗುರುಕರ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.

ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಯಂತಿ ನಿಮತ್ಯ ಅಧಿಕಾರಿಗಳ ಮತ್ತು ಹಿಂದುಳಿದ ಸಮುದಾಯ ಮುಖಂಡರ ಹಾಗೂ ಸಂಘ-ಸಂಸ್ಥೆಗಳೊಂದಿಗೆ ಸಭೆ ಜರುಗಿತು.

Contact Your\'s Advertisement; 9902492681

ಆಗಸ್ಟ್ 20 ರಂದು ಬೆಳಿಗ್ಗೆ 9 ಗಂಟೆಗ ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಿಂದ ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರ ವರೆಗೆ ಕಲಾ ತಂಡಗಳೊಂದಿಗೆ ಡಿ.ದೇವರಾಜ ಅರಸು ಅವರು ಭಾವಚಿತ್ರದ ಭವ್ಯ ಮೆರವಣಿಗೆ ನಡೆಸಿ ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಮಟ್ಟದ ಜನ್ಮ ದಿನಾಚರಣೆ ಮತ್ತು ಜಿಲ್ಲಾ ಮಟ್ಟದ ಡಿ.ದೇವರಾಜ ಅರಸು ಪ್ರಶಸ್ತಿ ಪ್ರದಾನ ಸಮಾರಂಭ ರಂಗಮಂದಿರದಲ್ಲಿ ಜರುಗಿಸಲು ಮತ್ತು ಬಡಗಿ, ನೇಕಾರ, ಕಮ್ಮಾರ, ಕುಂಬಾರ, ವಿಶ್ವಕರ್ಮ ಇತ್ಯಾದಿ ಹಿಂದುಳಿದ ಸಮುದಾಯದ ಕುಲಕಸುಬುದಾರರು ತಯ್ಯಾರಿಸಿರುವ ವಸ್ತುಗಳ ಪ್ರದರ್ಶನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಸಹ ಏರ್ಪಡಿಸಲು ಸಭೆ ಒಮ್ಮತದ ನಿರ್ಧಾರ ಕೈಗೊಂಡಿತ್ತು.

ಉದ್ಘಾಟನಾ ಕಾರ್ಯಕ್ರಮಕ್ಕೆ ಶಿಷ್ಠಾಚಾರದಂತೆ ಜನಪ್ರತಿನಿಧಿಗಳನ್ನು ಆಹ್ವಾನಿಸಲು ಮತು ತಜ್ಞರಿಂದ ಉಪನ್ಯಾಸ ನೀಡಲು ಒಪ್ಪಿಗೆ ಸೂಚಿಸಲಾಯಿತು. ಇದೇ ಮೊದಲ ಬಾರಿಗೆ ಜಿಲ್ಲಾ ಮಟ್ಟದಲ್ಲಿ ಡಿ.ದೇವರಾಜ ಅರಸು ಪ್ರಶಸ್ತಿ ನೀಡಲಾಗುತ್ತಿರುವ ಕಾರಣ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಸಾಹಿತ್ಯಿಕವಾಗಿ ಸಮುದಾಯದ ಒಳಿತಿಗೆ ದುಡಿದ ಪ್ರಶಸ್ತಿಗೆ ಅರ್ಹರಿರುವರು ತಮ್ಮ ವಿವರಗಳನ್ನು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಗೆ ಕೂಡಲೆ ಸಲ್ಲಿಸಬೇಕು. ಅರ್ಜಿ ಸಲ್ಲಿಸದಿದ್ದರೂ ಸಹ ಜಿಲ್ಲಾಧಿಕಾರಿಗಳ ನೇತೃತ್ವದ ಆಯ್ಕೆ ಸಮಿತಿ ಹಿಂದುಳಿದ ಸಮುದಾಯಕ್ಕೆ ಶ್ರಮಿಸಿದ ಅರ್ಹರನ್ನು ಆಯ್ಕೆ ಮಾಡುತ್ತದೆ ಎಂದು ಡಿ.ಸಿ. ಸ್ಪಷ್ಟಪಡಿಸಿದರು.

ಆಗಸ್ಟ್ 21 ರಂದು ಜಿಲ್ಲಾ ಮಟ್ಟದಲ್ಲಿ ಶಾಲಾ-ಕಾಲೇಜುಗಳಲ್ಲಿ ಡಿ.ದೇವರಾಜ ಅರಸು ಕುರಿತ ಪ್ರಬಂಧ ಸ್ಪರ್ಧೆ ಮತ್ತು ವಸತಿ ನಿಲಯದ ಮಕ್ಕಳಿಗೆ ಯೋಗ ಹಾಗೂ ಸ್ಪರ್ಧೆ ಅಯೋಜಿಸಿ ಮಕ್ಕಳಿಗೆ ನಗದು ಬಹುಮಾನ ನೀಡಲಾಗುತ್ತದೆ. ಆ.22 ರಂದು ಶಾಲಾ ಮಕ್ಕಳಿಗೆ ಅರಣ್ಯ ಮಹತ್ವ ಕುರಿತು ತಿಳುವಳಿಕೆ ಮತ್ತು ಗಿಡ ನೆಡುವ ಕಾರ್ಯಕ್ರಮ ಮತ್ತು ಡಿ.ದೇವರಾಜ ಅರಸು ಅವರ ಅಪೂರ್ವ ಛಾಯಾಚಿತ್ರ ಪ್ರದರ್ಶನ ಸಹ ನಡೆಯಲಿದೆ.

ಇದೇ ಸಂದರ್ಭದಲ್ಲಿ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಆ.13 ರಿಂದ 15ರ ವರೆಗೆ ಪ್ರತಿ ಮನೆಗಳ ಮೇಲೆ ರಾಷ್ಟ್ರಧ್ವಜಾರೋಹಣ ಮಾಡುವಂತೆ ಕರೆ ನೀಡಿದ ಜಿಲ್ಲಾಧಿಕಾರಿಗಳು, ಸಮುದಾಯ ಮುಖಂಡರಿಗೆ ರಾಷ್ಟ್ರಧ್ವಜ ವಿತರಿಸಿದರು.

ಮೂರು ದಿನ ಪ್ರದರ್ಶನ ಮತ್ತು ಮಾರಾಟ ಮೇಳ:

ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಹಿಮೂದ್ ಅವರು ಜಯಂತಿ ಕುರಿತು ಕೈಗೊಂಡು ಪೂರ್ವಸಿದ್ಧತೆ ಕುರಿತು ವಿವರಿಸುತ್ತಾ ಮಾತನಾಡಿ, ರಂಗಮಂದಿರ ಆವರಣದಲ್ಲಿ ಹಿಂದುಳಿದ ಸಮುದಾಯದ ವಿವಿಧ ಕುಲಕಸುಬುದಾರರು ತಯ್ಯಾರಿಸಿರುವ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಮೂರು ದಿನ ಕಾಲ ಇಲಾಖೆಯಿಂದ ಮಳಿಗೆ ಹಾಕಿ ಅವಕಾಶ ಮಾಡಕೊಡಲಾಗುತ್ತಿದೆ. ಈಗಾಗಲೆ 20 ಸಮುದಾಯಗಳನ್ನು ಗುರುತಿಸಿದೆ ಎಂದರು.

ಸಭೆಯಲ್ಲಿ ಭಾಗವಹಿಸಿದ ವಿಧಾನ ಪರಿಷತ್ತಿನ ಮಾಜಿ ಶಾಸಕ ತಿಪ್ಪಣಪ್ಪ ಕಮಕನೂರ ಮಾತನಾಡಿ, ಕೋವಿಡ್ ಕಾರಣ ಕಳೆದ 2 ವರ್ಷದಿಂದ ಜಯಂತಿ ಸರಳವಾಗಿ ಆಚರಿಸಲಾಗಿದೆ. ಹೀಗಾಗಿ ಈ ಬಾರಿ ಅರ್ಥಪೂರ್ಣವಾಗಿ ಆಚರಿಸಬೇಕು. ಇದೇ ಮೊದಲ ಬಾರಿಗೆ ಜಿಲ್ಲಾ ಮಟ್ಟದಲ್ಲಿ ಡಿ.ದೇವರಾಜ ಅರಸು ಪ್ರಶಸ್ತಿ ನೀಡಲು ಸರ್ಕಾರ ನಿರ್ಧರಿಸಿದ್ದು, ಹಿಂದುಳಿದ ಸಮುದಾಯದವರಿಗೆ ಸಂತಸ ತಂದಿದೆ. ಅರ್ಹರನ್ನು ಆಯ್ಕೆ ಮಾಡಬೇಕು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಎ.ಸಿ.ಪಿ. ದೀಪನ್ ಎಂ.ಎನ್., ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಪ್ರಿಯದರ್ಶಿನಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನವೀನ್ ಯು., ವಿವಿಧ ಸಮುದಾಯಗಳ ಮುಖಂಡರಾದ ಮಹಾಂತೇಶ ಕೌಲಗಿ, ಮಲ್ಲಿಕಾರ್ಜುನ ಹೆಳವಾರ, ಅಯ್ಯಣ್ಣ ಜಮಾದಾರ, ಡಾ.ಚಿ.ಸಿ.ನಿಂಗಣ್ಣಾ, ವೆಂಕಟೇಶ ನೀರಡಗಿ, ಬಿ.ಎಂ.ರಾವೂರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಮಾಜದ ಮುಖಂಡರುಗಳಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here