ಕಲಬುರಗಿ; ನಗರದ ಕನ್ನಡ ಭವನದಲ್ಲಿ ೭೫ನೇ ಅಮೃತ ಮೋಹತ್ಸವ ಅಂಗವಾಗಿ ಕಲಬುರಗಿ ಜಿಲ್ಲೆಯ ಎನ್.ಎಸ್.ಎಸ್ ಕರಿಯರ್ ಅಕಾಡೆಮಿ ಹಮ್ಮಿಕೊಂಡಿರುವ ಒಂದು ದಿನದ ಉಚಿತ ಕಾರ್ಯಾಗಾರಕ್ಕೆ ವಿಧಾನ ಪರಿಷತ್ ಸದಸ್ಯರಾದ ಶಶೀಲ ಜಿ.ನಮೋಶಿ ಚಾಲನೆ ನೀಡಿದರು.
ಕಾರ್ಯಕ್ರಮ ಅಧ್ಯಕ್ಷತೆ ಮಲ್ಲಿಕಾರ್ಜುನ ಬುಳ್ಳ ಅವರು ವಹಿಸಿದರು. ರಾಜ್ಯದ ವಿಶೇಷ ಉಪನ್ಯಾಸಕರಾದ ಸತೀಶ್ ಬೆನಕಟ್ಟಿ ಅವರು ಭಾರತ ಸಂವಿಧಾನ ಕುರಿತು ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಗೌರವ ಅಧ್ಯಕ್ಷ ಸಂತೋಷ ಜವಳಿ, ಉಪನ್ಯಾಸಕರಾದ ಸಂತೋಷ ಹೂಗಾರ, ಹನೀಫ್, ಪ್ರಿಯ, ಅರ್ಜುನ್, ಶರಣು ಗರುಡಾಶೆಟ್ಟಿ ಇದ್ದರು.