ಕಲಬುರಗಿ: ಇವತ್ತಿನ ಅವಸರದ ದಿನಗಳಲ್ಲಿ ಮನುಷ್ಯನ ಹಲವು ಒತ್ತಡಗಳಿಗೆ ಹಾಗೂ ಮನಸ್ಸಿನ ನಿವಾರಣೆಗೆ ಸಂಗೀತದಿಂದ ಶಾಂತಿ, ನೆಮ್ಮದಿ ದೊರೆಯಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಲಯ ಜಂಟಿ ನಿರ್ದೇಶಕರಾದ ಕೆ.ಎಚ್.ಚನ್ನೂರ ಹೇಳಿದರು.
ಕಲಬುರಗಿ ಕಲಾ ಮಂಡಳದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂಗೀತ ಪ್ರತಿಯೊಬ್ಬರ ಮನಸ್ಸುಗಳಿಗೆ ಸಹ ತಲುಪಲಿದ್ದು, ಬೇಸರ, ಕಷ್ಟಕರ ಸಮಯದಲ್ಲಿದ್ದರೂ ಸಹ ಒಂದು ಕ್ಷಣ ಸಂಗೀತವನ್ನು ಆಲಿಸಿದರೆ ಮನಸ್ಸು ತನ್ನೆಲ್ಲಾ ದುಃಖಗಳನ್ನು ಕಳೆದುಕೊಂಡು ಸಮಾಧಾನ ಹೊಂದುತ್ತದೆ. ಗಡಿನಾಡ ಸಂಗೀತ ಹಾಗೂ ವಿವಿದುದ್ದೇಶ ಸೇವಾ ಸಂಘವು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಾದ ಸಂಗೀತೋತ್ಸವ ಕಾರ್ಯಕ್ರಮ ಶ್ಲಾಘನೀಯವಾಗಿದ್ದು ನಾನು ಯಾವಾಗಲು ಕಲಾವಿದರ ಜೊತೆ ಇರುತ್ತೆನೆ ಎಂದರು. ಇದೇ ಸಂದರ್ಭದಲ್ಲಿ ೬ ಜನ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಉದ್ದಿಮೆದಾರರಾದ ಗುರುರಾಜ್ ಬಿ ಮತ್ತಿಮೂಡ ಉದ್ಘಾಟಿಸಿದರು. ಕಲಬುರಗಿ ಮಹಾನಗರ ಪಾಲಿಕೆ ಸದಸ್ಯ ಸಚಿನ ಕಡಗಂಚಿ ಅಧ್ಯಕ್ಷತೆ ವಹಿಸಿದರು.
ಸಹಾಯಕ ನಿರ್ದೇಶಕರಾದ ದತ್ತಪ್ಪ ಸಾಗನೂರ, ನಿವೃತ್ತ ವಾರ್ತಾ ಇಲಾಖೆಯ ಉಪ ನಿರ್ದೇಶಕರಾದ ಜಿ.ಚಂದ್ರಕಾಂತ, ಸತ್ಯಂ ಪಿ.ಯು.ಕಾಲೇಜಿನ ಪ್ರಾಶುಂಪಾಲರಾದ ಬಿ.ಎಚ್.ನಿರಗುಡಿ, ಕಲ್ಯಾಣ ಕಹಳೆ ಪತ್ರಿಕೆಯ ಸಂಪಾದಕ ಶರಣಗೌಡ ಪಾಟೀಲ ಪಾಳಾ, ಕಸಾಪ ಉತ್ತರ ವಲಯ ಅಧ್ಯಕ್ಷ ಪ್ರಭುಲಿಂಗ ಮೂಲಗೆ ಇದ್ದರು.