ಸುರಪುರ:ನಗರದ ಹಳೆ ಬಸ್ ನಿಲ್ದಾಣ ಬಳಿಯ ಬೈರಿನಾಯಕ ಬಾವಿ ಬಳಿಯಲ್ಲಿ ವ್ಯಕ್ತಿಯೊಬ್ಬ ಗಾಂಜಾ ಮಿಶ್ರಿತಿ ಚಾಕೊಲೆಟ್ ಮಾರಾಟ ಮಾಡುತ್ತಿದ್ದರು ಎನ್ನುವ ಆರೋಪದ ಮೇಲೆ ಅಬಕಾರಿ ಪೊಲೀಸರು ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದಿದ್ದಾರೆ.
ಕನಯ್ಯಾಲಾಲ್ ಮಾಂಗಿಲಾಲ್ ಚವ್ಹಾಣ ಎನ್ನುವ ವ್ಯಕ್ತಿಯನ್ನು ವಶಕ್ಕೆ ಪಡೆದಿರುವ ಅಬಕಾರಿ ಪೊಲೀಸರು ೪೬ ಕೆ.ಜಿಯಷ್ಟು ೭೬೨೦ ಚೊಕೊಲೆಟ್ ವಶಪಡಿಸಿಕೊಂಡಿದ್ದಾರೆ.ಒಂದು ಚಾಕೊಲೆಟಿನ ಬೆಲೆ ಅಂದಾಜು ೫೦ ರೂಪಾಯಿ ಇದ್ದು ಒಟ್ಟು ಮೌಲ್ಯ ಎಷ್ಟಾಗಲಿದೆ ಎನ್ನುವುದು ಇನ್ನಷ್ಟೆ ತಿಳಿದುಬರಲಿದೆ ಎಂದು ಅಬಕಾರಿ ಡಿವೈಎಸ್ಪಿ ಮಲ್ಲಿಕಾರ್ಜುನರಡ್ಡಿ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಎನ್.ಡಿ.ಪಿ.ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಅಬಕಾರಿ ಇಲಾಖೆಯ ಶಹಾಪುರ ಉಪ ವಿಭಾಗದ ಇನ್ಸ್ಪೇಕ್ಟರ್ ಧನರಾಜ್ ಆರ್.ಹೆಚ್,ಸುರಪುರ ಪಿಐ ಜಾಫರ್‌ಮಿಯಾ ಹಾಗೂ ಯಾದಗಿರಿ ವಿಚಕ್ಷಣಾ ದಳದ ಅಧಿಕಾರಿ ಕೇದಾರನಾಥ ಸೇರಿದಂತೆ ಸುರಪುರ ಅಬಕಾರಿ ಠಾಣೆಯ ಎಲ್ಲ ಸಿಬ್ಬಂದಿಗಳಿದ್ದರು.