ಸೂಫಿ ಮಾರ್ಗ ಭಾಗ-1: ಹಜರತ್ ಖ್ವಾಜಾ ಬಂದೇ ನವಾಜ್ (ರ.ಅ)

0
650
  • ಸಾಜಿದ್ ಅಲಿ

721 ಹಿಜ್ರಿಯ 14 ರಜಬ್ (ತಿಂಗಳು) ರಂದು ಜನಿಸಿದ ಹಜರತ್ ಖ್ವಾಜಾ ಬಂದೇ ನವಾಜ್ ಗೇಸುದರಾಜ್ (ರ.ಅ) ಚಿಸ್ತಿ ಅವರು ದಖನ್ ಭಾಗದ ಹೈದಾರಾಬಾದ ಸೇರಿದಂತೆ ಹೈದರಾಬಾದ್ ಕರ್ನಾಟಕ ಪ್ರದೇಶದ ಪ್ರಸಿದ್ಧ ಸೂಫಿ ಶರಣರಲ್ಲಿ ಒಬ್ಬರಾಗಿದ್ದಾರೆ, ಇದೇ 19ರಂದು ಕಲಬುರಗಿ ಜಿಲ್ಲೆಯಲ್ಲಿ ಅವರ 615ನೇ ಜಾತ್ರಾ ಮಹಾತ್ಸೋವ ಅದ್ಧೂರಿಯಾಗಿ ನಡೆಯುತ್ತಿದೆ.

Contact Your\'s Advertisement; 9902492681

ಹಜರತ್ ಖ್ವಾಜಾ ಬಂದೇ ನವಾಜ್ (ರ.ಅ) ಅವರು ತಮ್ಮ ಬಾಲ್ಯದಿಂದಲ್ಲೆ ಅಧ್ಯಾತ್ಮ, ಧ್ಯಾನ ಹಾಗೂ ಪ್ರರ್ಥನೆಯಲ್ಲಿ ತೊಡಗಿದ್ದು, ಶುದ್ಧ ಮನಸ್ಸಿನ ವ್ಯಕ್ತಿಯಾಗಿದರು. ಇವರ ಬಲ್ಯಾದಿಂದ ಜೀವನಕಾಲದವರೆಗೆ ಗುರು ಭಕ್ತಿ, ಗುರು ಕೃಪೆ ಹಾಗೂ ದೈವ ಭಕ್ತಿಯನ್ನೆ ಪ್ರೀತಿ, ಗೌರವಾದರ ಹೊಂದಿದ್ದು, ಗಾಢವಾಗಿ ನಂಬಿದಲ್ಲದೇ ಜಗತ್ತಿಗೆ ಸಂದೇಶ ಸಾರಿದ್ದಾರೆ.

ಖ್ವಾಜಾ ಬಂದೇ ನವಾಜ್ ಅವರ ಪೂರ್ಣ ಹೆಸರು, ‘ಸಯ್ಯದ್ ವಾಲ್ ಷರೀಫ್ ಕಮಾಲುದ್ದೀನ್ ಬಿನ್ ಮುಹಮ್ಮದ್ ಬಿನ್ ಯೂಸುಫ್ ಅಲ್ ಹುಸೇನಿ’ ಇವರಿಗೆ ಪ್ರೀತಿಯಿಂದ ದಖನ್ ಪ್ರದೇಶದಲ್ಲಿ ಖ್ವಾಜಾ ಬಂದೇ ನವಾಜ್ ಗೇಸುದರಾಜ್ ಎಂದು ಕರೆಯಲಾಗುತ್ತದೆ. ಇದರ ಅರ್ಥ ಖ್ವಾಜಾ ಅಂದರೆ ಅವರ ಹೆಸರಾಗಿದ್ದರೆ, ಬಂದೇ (ಅನುಯಾಯಿ) ನವಾಜ್ (ಕೃಪೆ ತೂರುವವನ್ನು) ಈ ರೀತಿಯಾಗಿ ಖ್ವಾಜಾ ತನ್ನ ಅನುಯಾಯಿಗಳಿಗೆ ಕೃಪೆ ತೂರುವವನ್ನೆಂದು ಇವರ ಹೆಸರನ್ನಲ್ಲಿ ಅಡಗಿರುವ ಅರ್ಥ.

ಖ್ವಾಜಾ ಅವರು ಚಿಸ್ತಿ ಕುಟುಂಬದಲ್ಲಿ ಜನಿಸಿದರು. ಚಿಸ್ತಿ ಭಾರತದ ಪ್ರಸಿದ್ಧ ಸೂಫಿ ಸಂತರ ಕುಟುಂಬವಾಗಿದ್ದು, ಹಜರತ್ ಅಲಿ ಅವರ 22ನೇ ವಂಶಸ್ಥರು ಖ್ವಾಜಾ ಬಂದೇ ನವಾಜ್ ಆಗಿದ್ದಾರೆ. ಖ್ವಾಜಾ ಅವರ ತಂದೆ ಹಜರತ್ ಸೈಯದ್ ವಾಲ್ ಶರೀಫ್ ಯೂಸುಫ್ ಬಿನ್ ಮೊಹಮ್ಮದ್ ಅಲ್ ಹುಸೈನಿ ಪವಿತ್ರ ವ್ಯಕ್ತಿಯಾಗಿದ್ದು, ಖ್ವಾಜಾ ಅವರ 10ನೇ ವಯಸ್ಸಿನಲ್ಲಿ ತಂದೆ ನಿಧನದ ನಂತರ ಅವರ ಅಜ್ಜಾ ಸಂಪೂರ್ಣ ಶಿಕ್ಷಣದ ಜವಾಬ್ದಾರಿಯನ್ನು ವಹಿಸಿಕೊಂಡಿದರು.

12 ವಯಸ್ಸಿನಲ್ಲಿ ಬಂದೇ ನವಾಜ್ ಅವರು ನಮಾಜ್, ರೋಜಾ, (ಉಪವಾಸ ವೃತ) ಸೇರಿದಂತೆ ಕುರಾನ್ ಕಂಠ ಪಾಠ ಹಾಗೂ ಧ್ಯಾನ ಮತ್ತು ಪ್ರರ್ಥನೆಯಲ್ಲಿ ಅತಿಹೆಚ್ಚು ಸಮಯ ಕಳೆಯುತ್ತಿದ್ದರು.  ಖ್ವಾಜಾ ಬಂದೇ ನವಾಜ್ (ರ.ಅ) ಅವರ “ಜವಾಬುಲ್ ಕಲಿ” ಎಂಬ ತಮ್ಮ ಪುಸ್ತಕದಲ್ಲಿ ತನ್ನ 12 ವಯಸ್ಸಿನ ಕುರಿತು “ನಾನು ರಾತ್ರಿಯಿಡಿ ನಿದ್ದೆನೆ ಹೊಗಿಲ್ಲ, ನನ್ನ ಜೀವನದ ಅತಿಹೆಚ್ಚು ಸಮಯ ನಮಾಜ್, ಪ್ರರ್ಥನೆ, ಧ್ಯಾನ, ಹಾಗೂ ಅಲ್ಲಾಹನ ದೈವ ಕೃಪೆಯಲ್ಲಿ ತೊಡಗಿಸಿಕೊಂಡಿದೇ” ಎಂದು ತಮ್ಮ ಪುಸ್ತಕದಲ್ಲಿ ಸ್ವತಹ ಉಲ್ಲೇಖಿಸಿದ್ದಾರೆ.

ಸೂಫಿ ಚಂದಾ ಹುಸೈನಿ ಹಾಗೂ ಗೇಸುದರಾಜ್ ಅವರು  ದೆಹಲಿಯ ಪ್ರಸಿದ್ಧ ಸೂಫಿ ಸಂತ ಹಜರತ್ ನಸೀರುದ್ದೀನ್ ಚಿರಾಗ್ ದೆಹಲಿಯವರ ಶಿಷ್ಯರಾಗಿದ್ದರು. ಚಿರಾಗ್ ದೆಹಲಿಯವರು 8ನೇ ರಮಜಾನ್ 757 ರಲ್ಲಿ 82 ವಯಸ್ಸಿನಲ್ಲಿ ಚಿರಾಗ್ ನಿಧನರಾಗುತ್ತಾರೆ. ನಂತರ ಖ್ವಾಜಾ ಬಂದೇ ನವಾಜ್ ಗೇಸುದರಾಜ್ ಅವರು ಚಿರಾಗ್ ಅವರ ಪೀಠದ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದರು.

ಖ್ವಾಜಾ ತನ್ನ ಹದಿನೈದನೇ ವಯಸ್ಸಿನಲ್ಲಿ, ನಾಸಿರುದ್ದೀನ್ ಚಿರಾಗ್ ದೆಹಲಿ ಅವರ ಹತ್ತಿರ ಶಿಕ್ಷಣ ಪಡೆಯುತ್ತಿದಗಾ ಅವರೊಂದಿಗೆ ಸೂಫಿ ಹಜರತ್ ಚಿತಾವಲಿ, ಹಜರತ್ ತಾಜುದ್ದೀನ್ ಬಹದ್ದೂರ್ ಮತ್ತು ಕಾಜಿ ಅಬ್ದುಲ್ ಮುಕ್ತಾದಿರ್ ಅಂತಹ ಉತ್ಸಾಹಿ ಸೂಫಿಗಳು ವಿದ್ಯಾರ್ಥಿಗಳಾಗಿ ಅವರೊಂದಿಗೆ ಇದ್ದರು.

ಖ್ವಾಜಾ ಬಂದೇ ನವಾಜ್ ಅವರು ನಸಿರುದ್ದೀನ್ ಚಿರಾಗ್ ಅವರ ಶಿಷ್ಯರಾಗಿದ್ದಾಗ ತನ್ನ ಗುರುಗಳ ಬಗ್ಗೆ ಅಪಾರ ಪ್ರೀತಿ, ಆದರ ಹಾಗೂ ಗೌರವ, ಅತಿಹೆಚ್ಚು ಗುರುಭಕ್ತಿ ಹೊಂದಿದರು. ಒಂದು ದಿನ ಖ್ವಾಜಾ ಬಂದೇ ನವಾಜ್ ಹಜರತ್ ನಾಸೀರುದ್ದಿನ್ ಚಿರಾಗ್ ಇತರ ಶಿಷ್ಯರೊಂದಿಗೆ ಅವರ ಪಲ್ಲಕ್ಕಿ ಮೆರವಣಿಗೆ ಕರೆದೊಯ್ಯುತ್ತಿದ್ದಾಗ, ಖ್ವಾಜಾ ಬಂದೇ ನವಾಜ್ ಅವರ ಉದ್ದನೆಯ ಕೂದಲು ಪಾಲ್ಕಿಯ ಚಕ್ರಕ್ಕೆ ಸಿಕ್ಕಿಹಾಕಿಕೊಂಡಿ ತಲೆಯಿಂದ ರಕ್ತ ಹಾಗೂ ತೀವ್ರವಾದ ನೋವು ಬಂದೇ ನವಾಜ್ ಅವರು ಅನುಭವಿಸುತ್ತಾರೆ.

ಅವರು ತನ್ನ ಪ್ರೀಯ ಆದರದ ಶಿಕ್ಷಕ, ಗುರು ಬಗ್ಗೆ ಪ್ರೀತಿ ಮತ್ತು ಗೌರವವನ್ನು ಹೊಂದಿದ ಕಾರಣ  ಈ ನೋವನ್ನು ಸಹಿಸಿಕೊಂಡು, ಬಹಿರಂಗಪಡಿಸಿರುವುದಿಲ್ಲ. ಈ ವಿಚಾರ  ಹಜರತ್ ನಾಸಿರುದ್ದೀನ್ ಮೆಹಮೂದ್ ಚಿರಾಗ್ ದೆಹಲಿ ಅವರಿಗೆ ತಿಳಿದಾಗ, ಅವರು ಖ್ವಾಜಾಗೆ ಕರೆದು ನಿಮ್ಮ ಕೂದಲು ಪಲ್ಲಕ್ಕಿ ಚಕ್ರಕ್ಕೆ ಸಿಲುಕಿದಾಗ ಏಕೆ ಪಲ್ಲಕ್ಕಿ ನಿಲ್ಲಸಲಿಲ್ಲ ಏಕೆ ಕರೆಯಲಿಲ್ಲ ಎಂದು ಕೇಳುತ್ತಾರೆ.

ಖ್ವಾಜಾ ತನ್ನ ಗುರುಗೆ ಹೇಳುತ್ತ, ಗುರುವೇ ನನ್ನಗೆ ನನ್ನ ಗುರುವಿನ ಪಲ್ಲಕ್ಕಿ ನಿಲ್ಲಿಸಲು ಅರ್ಹತೆ ಹಾಗೂ ಸಾಮರ್ಥ್ಯವು ನನ್ನಗಿಲ್ಲ. ರಕ್ತ ಹಾಗೂ ನೋವು ನಿಮ್ಮ ಭಕ್ತಿಗೆ ಅಡ್ಡ ಬರಲು ನಾನು ಅವಕಾಶ ನೀಡುವುದಿಲ್ಲ ಎಂದು ಹೇಳಿಕೊಳುತಾರೆ. ಶಿಷ್ಯನ ಈ ಮಾತು ಕೇಳಿ ಚಿರಾಗ್ ಸಂತೋಷಪಟ್ಟು ಖ್ವಾಜಾ ಬಂದೇ ನವಾಜ್  “ಗೇಸುದರಾಜ್” ಶೀರ್ಷಿಕೆಯನ್ನು ನೀಡಿದರು ಎಂದು ಇತಿಹಾಸ ಹಾಗೂ ಸಂಶೋಧನೆ ಒಂದು ಹೇಳುತ್ತದೆ.

ಖ್ವಾಜಾ ಬಂದೇ ನವಾಜ್ ಅವರು 40ನೇ ವಯಸ್ಸಿನಲ್ಲಿ ಬಿಬಿ ರಾಜಾ ಖಾತೂನ್ ಉರ್ಫ ಬಿಬಿ ಫಾತೀಮಾ ಜಮಾಲೊದ್ದೀನ್ ಅವರೊಂದಗೆ ಮದುವೆಯಾಗುತ್ತಾರೆ, ನಂತರ 43ನೇ ವಯಸ್ಸಿನಲ್ಲಿ ದೆಹಲಿ, ಮೇವತ್, ಗ್ವಾಲಿಯರ್, ಚಂದರ್, ಏರ್ಚಾ, ಚತುರ್, ಚಂದೇರಿ, ಮೈಂಧರ್, ಬರೋಡಾ, ಖಂಬೈಟ್ ದಂತಹ ವಿವಿಧ ಸ್ಥಳಗಳಲ್ಲಿ ಬೋಧಿಸಿದ್ದರು.

ನಂತರ 801 ಹಿಜರಿಯಲ್ಲಿ ದೌಲತಬಾದ್ ತೆರಳಿ, ಅಲ್ಲಿಂದ 802 ಹಿಜರಿಯಲ್ಲಿ 81ನೇ ವಯಸ್ಸಲ್ಲಿ ಗುಲಬರ್ಗಾ ಸುಲ್ತಾನ್ ತಾಜ್-ಉದ್-ದಿನ್ ಫಿರೋಜ್ ಷಾ ಬಹಮನಿ ದಕ್ಕನ್ ಅನ್ನು ಆಳ್ವಿಕೆಯಲ್ಲಿ ಕುಟುಂಬ ಸಮೇತ ಗುಲಬರ್ಗಾಗೆ ಆಗಮಿಸಿ, ಈಗಿನ ಕಲಬುರಗಿ ಕೋಟೆಯ ಸಮಿಪ ನೆಲಸಿರುತ್ತಾರೆ.

ಆಗಿನ ಸುಲ್ತಾನ ಫಿರೋಜ್ ಷಾ ಅವರಿಗೆ ಆದರದಿಂದ ಬರಮಾಡಿಕೊಂಡಿದ್ದು ಇತಿಹಾಸದಲ್ಲಿ ಉಲ್ಲೇಖವಿದ್ದು, ಫಿರೋಜ್ ಷಾ ವಂಶಸ್ಥರು ಖ್ವಾಜಾ ಬಂದೇ ನವಾಜ್ ಅವರಿಂದ ಬೈತ್ (ದೀಕ್ಷೆ)  ಸ್ವೀಕರಿಸುತ್ತಾರೆ. ನಂತರ ಫಿರೋಜ್ ಷಾ ಮತ್ತು ಬಂದೇ ನವಾಜ್ ಅವರು ನಡುವೆ ಕೆಲವು ಭಿನ್ನಾಭಿಪ್ರಾಯ ಕಾರಣ ಖ್ವಾಜಾ ಅವರು ಕೋಟೆ ತೊರೆದು ಕಲಬುರಗಿಯಲ್ಲಿ ಸ್ವಂತ ಜಮೀನು ಖರೀದಿಸಿ ಈಗಿನ ರೋಜಾ ಬಡವಾಣೆಯಲ್ಲಿ ದರ್ಗಾ ಪ್ರದೇಶದಲ್ಲಿ ವಾಸಿಸಿದರು ಎಂದು ಖ್ವಾಜಾ ಬಂದೇ ನವಾಜ್ ಅವರ ಜೀವನ ಚರಿತ್ರೆ ಕುರಿತು ಶಂಶೋಧನೆ ನಡೆಸಿದ ಸಂಶೋಧಕಿ ಡಾ. ರಾಯಿಸಾ ನಸರೀನ್ ಅವರು ತಿಳಿಸಿದ್ದಾರೆ.

ಖ್ವಾಜಾ ಬಂದೇ ನವಾಜ್ ಅವರು ಜೀವನವಿಡೀ ಜನರ ಆಧ್ಯಾತ್ಮೀಕ ಪ್ರವಚನ, ಉಪದೇಶ ಮತ್ತು ಗುರು ಕೃಪೆ, ಸನ್ಮಾರ್ಗದ ನಡೆ ಹಾಗೂ ಪರಿಶುದ್ಧ ಪ್ರರ್ಥನೆಗೆ ನಿರತರಾಗಿ, ತನ್ನ 105 ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು.

“ಬಾಲ್ಯದಲ್ಲಿಯೇ ಧ್ಯಾನ, ಭಕ್ತಿಯಲ್ಲಿ ಖ್ವಾಜಾ ಬಂದೇ ನವಾಜ್ ಅವರು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ನೆಲೆಗೊಳ್ಳಬೇಕು ಎಂದು ಬಯಸಿದ್ದರು. ನೆಮ್ಮದಿಯ ಬದುಕಿಗೆ ಧ್ಯಾನ ಉತ್ತಮ‌ ಸಾಧನ ಎಂಬುದು ಅವರ ಜೀವನ  ಸಂದೇಶದಿದಂದ ತಿಳಿದು ಬರುತ್ತದೆ.”

ಅವರು ತಮ್ಮ ಜೀವನಕಾಲದಲ್ಲಿ ಫಾರ್ಸಿ, ಅರಬಿ, ದಖನಿ, ಸೇರಿದಂತೆ ಮುಂತಾದ ಭಾಷೆಗಳಲ್ಲಿ. ತಫಸಿರ್, ಹದಿಸ್, ಫೀಖಾ, ತಸಾಫ್ ಇವುಗಳ ಉಲ್ಲೇಖದಿಂದ ಸುಮಾರ 105 ಕ್ಕೂ ಹೆಚ್ಚು ಪುಸ್ತಕಗಳು ಬರೆದಿದ್ದು, ಸೂಫಿ ಸಂತ, ಬರಹಗಾರರು ಮತ್ತು ಕವಿಯು ಗೇಸುದರಾಜ್ ಆಗಿದರು.

ಇಂದಿಗೂ ಹಜರತ್ ಖ್ವಾಜಾ ಬಂದೇ ನವಾಜ್ ದರ್ಗಾಕ್ಕೆ ಹಿಂದುಸ್ತಾನದ ವಿವಿಧ ಭಾಗಗಳಲ್ಲಿ  ಲಕ್ಷಾಂತರ ಅನುಯಾಯಿಗಳು ಇದ್ದು, ದರ್ಗಾಕ್ಕೆ ಭೇಟಿ ನೀಡಿ ತಮ್ಮ ಮನಸ್ಸಿಗೆ ಸಮಧಾನ ಪಡಿಸಿಕೊಳುತ್ತಾರೆ. ಅಲ್ಲದೇ ಇಂತಹ ಸ್ಥಳಗಳಿಗೆ ಭೇಟಿ ನೀಡುವುದರಿಂದ, ಮನಸ್ಸಿನ ಕಲ್ಮಷ, ದುರ್ಭಾವನೆ, ಕೆಟ್ಟ ಆಲೋಚನೆ, ಧ್ವೇಷ, ದುಃಖ, ಸಮಸ್ಯೆ, ಸಂಕಷ್ಟಕ್ಕೆ ಒಂದಿಷ್ಟು ಸಮಧಾನ ಕಂಡುಕೊಳ್ಳುವ ಪ್ರಯತ್ನ ಅವರ ಅನುಯಾಯಿಗಳು ಇಂದಿಗೂ ಮಾಡುತ್ತಾರೆ.
                             – ಡಾ. ರಾಯಿಸಾ ನಸರೀನ್, ಸಂಶೋಧಕಿ ಹಾಗೂ ಉಪನ್ಯಾಸಕಿ ಬಿಬಿ ರಜಾ ಪದವಿ ಕಾಲೇಜು ಕಲಬುರಗಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here