ಕಲಬುರಗಿ ಬಿಜೆಪಿ ಕಾರ್ಪೊರೇಟರ್ ಸದಸ್ಯತ್ವ ರದ್ದು: ಸೈಯದಾ ನೂರ್ ಫಾತಿಮಾ ಜೈದಿ ನೂತನ ಸದಸ್ಯೆ

1
340

ಕಲಬುರಗಿ: ಇತ್ತೀಚಿಗೆ ನಡೆದ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಮಹಿಳಾ ಅಭ್ಯರ್ಥಿ ಓರ್ವರು ಚುನಾವಣೆ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿ ಚುನಾವಣೆಗೆ ಸ್ಪರ್ಧಿಸಿ ಜಯಗಳಿಸಿದ ಅಭ್ಯರ್ಥಿ ಪಾಲಿಕೆ ಸದಸ್ಯತ್ವ ರದ್ದು ಪಡಿಸಿ ಕೆಎಂಸಿ ಕಾಯಿದೆಯ ಸೆಕ್ಷನ್ 26(1)(ಜೆ) ಮತ್ತು ಭಾರತ ಸಂವಿಧಾನದ 243(ವಿ) ಕಲಂ ಪ್ರಕಾರ 3ನೇ ಹೆಚ್ಚುವರಿ ನ್ಯಾಯಲಯ ಆದೇಶ ಹೊರಡಿಸಿದೆ.

ಚುನಾವಣೆಯಲ್ಲಿ ಸುಳ್ಳು ವಯಸ್ಸಿನ ದಾಖಲಿಸಿ ಸೃಷ್ಠಿಸಿದ ಕಲಬುರಗಿ ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 24ಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಪ್ರಿಯಾಂಕಾ ಅಂಬರೀಶ್ ಆಯ್ಕೆಗೊಂಡಿದರು. ಸುಳ್ಳು ದಾಖಲೆ ಸಲ್ಲಿಕೆ ಆರೋಪ ಸಾಬಿತಾಗಿರುವ ಹಿನ್ನೆಯಲ್ಲಿ ಅವರ ಸದಸ್ಯತ್ವವನ್ನು ರದ್ದು ಪಡಿಸಿ ಕೆಎಂಸಿ ಕಾಯಿದೆಯ ಸೆಕ್ಷನ್ 26(1)(ಜೆ) ಮತ್ತು ಭಾರತ ಸಂವಿಧಾನದ 243(ವಿ) ಕಲಂ ನಿಯಮದ ಪ್ರಕಾರ ಎರಡನೇ ಅಭ್ಯರ್ಥಿ ಸೈಯದಾ ನೂರ್ ಫಾತಿಮಾ ಜೈದಿ ಪಾಲಿಕೆ ನೂತನ ಸದಸ್ಯತ್ವ ನೀಡಬೇಕೆಂದು ನ್ಯಾಯಲಯ ಆದೇಶ ಹೊರಡಿಸಿದೆ.

Contact Your\'s Advertisement; 9902492681

ಸೈಯದಾ ನೂರ್ ಫಾತಿಮಾ ಜೈದಿ ಆರ್ಟಿಐ ಹಾಕಿ ಮಾಹಿತಿಯಲ್ಲಿ ಬಿಜೆಪಿ ಅಭ್ಯರ್ಥಿ ದಾಖಲೆಯಿಂದ ಈ ಪ್ರಕರಣ ಬೆಳಕ್ಕಗೆ ಬಂದಿತ್ತು. ನಾಮಪತ್ರ ಸಲ್ಲಿಸುವಾಗ ಪ್ರಿಯಾಂಕಾ ಅಂಬರೀಶ್ ಅವರು 21 ವರ್ಷ ವಯಸ್ಸನ್ನು ಪೂರೈಸಿಲ್ಲ ಎಂದು ನ್ಯಾಯಲಯಕ್ಕೆ ಸೈಯದಾ ನೂರ್ ಫಾತಿಮಾ ಜೈದಿ ಇಂದು ಪ್ರಿಯಾಂಕಾ ಅಂಬರೀಶ್ ಅವರ ವಿರುದ್ಧ ದುಷಾರೋಪ ಸಲ್ಲಿಸಿದರು.

ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಪೂರ್ಣ ಪ್ರಮಾಣದ ಅಧಿಕಾರದೊಂದಿಗೆ ಕಲಬುರಗಿ ಮೇಯರ್ ಸ್ಥಾನವನ್ನು ವಶಪಡಿಸಿಕೊಳ್ಳುವ ವಿಶ್ವಾಸ ತೋರಿದ್ದ ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here