53 ನೇ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ

0
34

ಕಲಬುರ್ಗಿ: ಇಲ್ಲಿನ ವಿದ್ಯಾನಗರ ಶ್ರೀ ಕೃಷ್ಣ ಮಂದಿರ ಹಾಗೂ ಶ್ರೀ ಹನುಮ ಭೀಮ ಮಧ್ವರ ಮಂದಿರ , ಅಖಿಲ ಭಾರತ ಮಧ್ವ ಮಹಾ ಮಂಡಲ ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯದಲ್ಲಿ ಜಗದ್ಗುರು ಶ್ರೀಮನ್ ಮಧ್ವಾಚಾರ್ಯರ ಮೂಲಮಹಾಸಂಸ್ತಾನ, ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಕರಕಮಲ ಸಂಜಾತರಾದ ಶ್ರೀ ವಿಶ್ವಪ್ರಸನ್ನ ತೀರ್ಥರ ಅಜ್ಞಾನುಸಾರವಾಗಿ ಕಲಬುರ್ಗಿಯ ವಿದ್ಯಾನಗರ ಶ್ರೀ ಕೃಷ್ಣ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವವನ್ನು ಅದ್ದೂರಿಯಾಗಿ ದಿನಾಂಕ 18/08/2022 ರಿಂದ 20/08/2022 ರವರೆಗೆ ಆಚರಿಸಲಾಗುವುದು ಎಂದು ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

ಶ್ರೀಶುಭಕೃತ್ ನಾಮ ಸಂವತ್ಸರದ ಶ್ರಾವಣ ಕೃಷ್ಣ ಬಹುಳ ಅಷ್ಟಮಿಯ ಪ್ರಯುಕ್ತ ಶ್ರೀಕೃಷ್ಣ ಜನ್ಮಾಷ್ಟಮಿ ಇದರ ಪ್ರಯುಕ್ತ ವಿವಿಧ ವಯೋಮಾನದವರಿಗೆ ಹಲವು ಸ್ಪರ್ಧೆಗಳನ್ನು ಆಯೋಜಿಸಿದ್ದು ಸ್ಪರ್ಧಾವಿಜೇತರಿಗೆ ಬಹುಮಾನ ಜನ್ಮಾಷ್ಟಮಿಯಂದು ಮಂದಿರದಲ್ಲಿ ಸಾಯಂಕಾಲ ವಿತರಿಸಲಾಗುವುದು.

Contact Your\'s Advertisement; 9902492681

ದಿನಾಂಕ 20/08/2022 ರಂದು ಸಾಯಂಕಾಲ ಗೋಪಾಲ ಕಾವಲಿ ಹಾಗೂ ರಥೋತ್ಸವ ಕಾರ್ಯಕ್ರಮ ನಡೆಯಲಿದೆ. ವಿಶೇಷವೆಂದರೆ ಶ್ರೀ ಕೃಷ್ಣ ಮಂದಿರದಲ್ಲಿ ಅಭಿವೃದ್ದಿ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಇದರ ಪ್ರಯುಕ್ತ ಮಂದಿರದ ಸುತ್ತಲು ಇರುವ ರಥಬೀದಿಯ ಫ್ಲೊರಿಂಗ್ ಮತ್ತು ಮಂದಿರದ ಮುಂಭಾಗದಲ್ಲಿ ನೂತನ ಶೆಡ್ ನಿರ್ಮಿಸಲಾಗುತ್ತಿದೆ.

ಹಾಗೆ ಮಂದಿರದ ಅವರಣದಲ್ಲಿ ಸಣ್ಣ ಪುಟ್ಟ ಕಾರ್ಯಕ್ರಮಗಳಾದ ತೊಟ್ಟಿಲು,ನಾಮಕರಣ,ಉಪನಯನ ಹಾಗೂ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು ಶ್ರೀ ಕೃಷ್ಣನ ಭಕ್ತರಾದ ತಾವುಗಳು ತನು ಮನ ಧನದಿಂದ ಸಹಾಯ ಸಹಕಾರ ನೀಡಬೇಕಾಗಿ ವಿನಂತಿ.

ಸೇವೆ ಮಾಡಲು ಇಚ್ಚಿಸುವವರು  ಮಂದಿರದ ಅವರಣದ ಜಯತೀರ್ಥ ವಿದ್ಯಾರ್ಥಿ ನಿಲಯದ ಕಾರ್ಯಾಲಯದಲ್ಲಿ ಸೇವೆ ಸಲ್ಲಿಸಿ ರಶೀದಿ ಪಡೆಯಬಹುದು ಅಥವಾ ಬ್ಯಾಂಕ್ ಖಾತೆ ಬ್ಯಾಂಕ್ ಖಾತೆ ವಿವರ: Bank: Canara Bank  A/C Name: ABMMM Jayateertha Vidyarti Nilaya A/C No: 13082010011960 IFSC: CNRB0011308 ನೇರವಾಗಿ ದೇಣಿಗೆ ಸೇವೆ ಸಂದಾಯ ಮಾಡಬಹುದು ಮತ್ತು ಭಕ್ತರು ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ಕೃಷ್ಣನ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಶ್ರೀ ಕೃಷ್ಣ ಮಂದಿರದ ನೂತನ ಆಡಳಿತ ಮಂಡಳಿ ಪರವಾಗಿ ಕಾರ್ಯದರ್ಶಿಗಳಾದ ಶ್ರೀ ಕಿಶೋರ ದೇಶಪಾಂಡೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here