ದಲಿತ ಮುಖಂಡನ ಬಂಧನಕ್ಕೆ ಆಗ್ರಹಿಸಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ

0
126

ಸುರಪುರ:ತಾಲೂಕು ಆಡಳಿತದಿಂದ ನಗರದ ಶ್ರೀ ಪ್ರಭು ಮಹಾವಿದ್ಯಾಲಯದ ಆವರಣದಲ್ಲಿ ನಡೆಸಲಾದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರ ಇರಿಸದೆ ಅವಮಾನಿಸಲಾಗಿದೆ ಎಂದು ಆರೋಪಿಸಿ ದಲಿತ ಮುಖಂಡರು ಕಾರ್ಯಕ್ರ?ದ ವೇದಿಕೆ ಬಳಿ ಪ್ರತಿಭಟಿಸುವ ಸಂದರ್ಭದಲ್ಲಿ ಶಾಸಕ ರಾಜೂಗೌಡ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ತಾಲೂಕು ಬಿಜೆಪಿ ಎಸ್ಸಿ ಮೋರ್ಚಾದ ನೇತೃತ್ವದಲ್ಲಿ ನಗರದ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ , ಶಾಸಕ ರಾಜೂಗೌಡ ಅವರ ಕುರಿತು ಅವಾಚ್ಯ ಪದ ಬಳಸಿ ಮಾತನಾಡಿರುವ ದಲಿತ ಮುಖಂಡನನ್ನು ಕೂಡಲೇ ಬಂಧಿಸಬೇಕು,ಡಾ:ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ನಮ್ಮ ಶಾಸಕರಾದ ರಾಜುಗೌಡರಿಗೆ ಅಪಾರ ಗೌರವವಿದೆ,ಅಲ್ಲದೆ ಕಾರ್ಯಕ್ರಮವನ್ನು ಆಯೋಜಿಸಿರುವುದು ತಾಲೂಕು ಆಡಳಿತ,ಆದರೆ ರಾಜುಗೌಡರ ಕುರಿತು ಉದ್ದೇಶಪೂರ್ವಕವಾಗಿ ಅವಹೇಳನ ಮಾಡಲಾಗಿದೆ,ಆದ್ದರಿಂದ ಅವರ ಕುರಿತು ಮಾತನಾಡಿದ ದಲಿತ ಮುಖಂಡನನ್ನು ಕೂಡಲೇ ಬಂಧಿಸಬೇಕು ಹಾಗೂ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರತಿಭಟನೆಗೆ ಪರವಾನಿಗೆ ಇಲ್ಲದಿದ್ದರು ನಿಯಮ ಬಾಹಿರವಾಗಿ ಪ್ರತಿಭಟನೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Contact Your\'s Advertisement; 9902492681

ಸಂಜೆಯೊಳಗಾಗಿ ಶಾಸಕರನ್ನು ಅವಾಚ್ಯವಾಗಿ ನಿಂದಿಸಿದ ದಲಿತ ಮುಖಂಡನನ್ನು ಬಂಧಿಸದಿದ್ದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು. ಇದಕ್ಕೂ ಮುನ್ನ ಅಪಾರ ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಗಲಿಗರು ತಾಲೂಕು ಬಿಜೆಪಿ ಕಚೇರಿಯಿಂದ ಪೊಲೀಸ್ ಠಾಣೆಯವರೆಗೂ ಪಾದಯಾತ್ರೆ ನಡೆಸಿ ಶಾಸಕರನ್ನು ನಿಂದಿಸಿದವರ ವಿರುದ್ಧ ಘೋಷಣೆಗಳನ್ನು ಕೂಗಿದರು.

ದಲಿತ ಮುಖಂಡನನ್ನು ಬಂಧಿಸುವಂತೆ ಒತ್ತಾಯಿಸಿ ಬಿಜೆಪಿ ಎಸ್ಸಿ ಮೋರ್ಚಾದಿಂದ ಸುರಪುರ ಪೊಲೀಸ್ ಉಪವಿಭಾಗದ ಉಪಾಧೀಕ್ಷಕರು ಹಾಗೂ ಪೊಲೀಸ್ ಇನ್ಸ್‌ಪೆಕ್ಟರ್ ಅವರಿಗೆ ಬರೆದ ಮನವಿಯನ್ನು ಪಿಎಸ್‌ಐ ಕೃಷ್ಣ ಸುಬೇದಾರ ಅವರ ಮೂಲಕ ಸಲ್ಲಿಸಲಾಯಿತು.

ಈ ಸಂದರ್ಭದಲಿ ಬಿಜೆಪಿ ಎಸ್ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಭೀಮಾಶಂಕರ ಬಿಲ್ಲವ್,ಎಪಿಎಮ್‌ಸಿ ಮಾಜಿ ಅಧ್ಯಕ್ಷ ದುರ್ಗಪ್ಪ ಗೋಗಿಕೇರಾ, ನಗರಸಭೆ ಸದಸ್ಯರಾದ ವೇಣುಮಾಧವ ನಾಯಕ, ನರಸಿಂಹಕಾಂತ ಪಂಚಮಗಿರಿ, ಶಿವಕುಮಾರ ಕಟ್ಟಿಮನಿ,ಕಕ್ಕೇರಾ ಪುರಸಭೆ ಮಲ್ಲು ದಂಡೀನ್, ಮುಖಂಡರಾದ ಬಲಭೀಮನಾಯಕ ಭೈರಿಮಡ್ಡಿ, ದೊಡ್ಡದೇಸಾಯಿ ದೇವರಗೋನಾಲ, ಸಣ್ಣ ದೇಸಾಯಿ ದೇವರಗೋನಾಲ, ಭೀಮಣ್ಣ ಬೇವಿನಾಳ, ಶರಣುನಾಯಕ, ವೆಂಕಟೇಶ ನಾಯಕ ಭೈರಿಮಡ್ಡಿ, ರವಿನಾಯಕ ಭೈರಿಮಡ್ಡಿ, ಮಂಜುನಾಥ ನಾಯಕ, ಶಿವನಗೌಡ ವಾಗಣಗೇರಾ, ರಂಗನಗೌಡ ದೇವಿಕೇರಾ, ಗಂಗಾಧರ ನಾಯಕ ಅರಳಹಳ್ಳಿ ಸೇರಿದಂತೆ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here