ಆಗಸ್ಟ್ 20 ರಂದು ಗ್ರಾಹಕರ ಸಂಪರ್ಕ ಸಭೆ | GESCOM Public Meeting

0
18

ಕಲಬುರಗಿ: ಗುಲಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ ಕಲಬುರಗಿ ಎಲ್ಲಾ ನಗರ ಉಪವಿಭಾಗಗಳ ವ್ಯಾಪ್ತಿಗೆ ಬರುವ ಗ್ರಾಹಕರಿಗಾಗಿ  ಇದೇ  ಆಗಸ್ಟ್ ೨೦ ರಂದು ಗ್ರಾಹಕರ ಸಂಪರ್ಕ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ಕಲಬುರಗಿ ಜೆಸ್ಕಾಂ ನಗರ ಉಪವಿಭಾಗ-೧ಕ್ಕೆ ಸಂಬಂಧಿಸಿದಂತೆ ಇದೇ ಆಗಸ್ಟ್ ೨೦ರಂದು ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ೧.೩೦ ಗಂಟೆಯವರೆಗೆ ಕಲಬುರಗಿ ನಗರದ ಸುಪರ ಮಾರ್ಕೇಟ್‌ದಲ್ಲಿರುವ ಜೆಸ್ಕಾಂ ನಗರ ಉಪವಿಭಾಗ-೧ರ ಕಾರ್ಯ ಮತ್ತು ಪಾಲನೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರವರ ಕಚೇರಿಯಲ್ಲಿ ಹಾಗೂ ಕಲಬುರಗಿ ಜೆಸ್ಕಾಂ ನಗರ ಉಪವಿಭಾಗ-೨ಕ್ಕೆ ಸಂಬಂಧಿಸಿದಂತೆ ಅಂದು  ಮಧ್ಯಾಹ್ನ ೩ ರಿಂದ ಸಂಜೆ ೫.೩೦ ಗಂಟೆಯವರೆಗೆ ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆಯ ನಗರ ಉಪವಿಭಾಗ-೨ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರವರ ಕಚೇರಿಯಲ್ಲಿ ಜರುಗಲಿದೆ.

Contact Your\'s Advertisement; 9902492681

ಅದೇ ರೀತಿ ಕಲಬುರಗಿ ಜೆಸ್ಕಾಂ ನಗರ ಉಪವಿಭಾಗ-೩ಕ್ಕೆ ಸಂಬಂಧಿಸಿದಂತೆ ಅಂದು  ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ೧.೩೦ ಗಂಟೆಯವರೆಗೆ  ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ಉಪವಿಭಾಗ-೩ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರವರ ಕಚೇರಿಯಲ್ಲಿ  ಹಾಗೂ ಕಲಬುರಗಿ ಜೆಸ್ಕಾಂ ನಗರ ಉಪವಿಭಾಗ-೪ಕ್ಕೆ ಸಂಬಂಧಿಸಿದಂತೆ ಅಂದು ಮಧ್ಯಾಹ್ನ ೩ ರಿಂದ ಸಂಜೆ ೫.೩೦ ಗಂಟೆಯವರೆಗೆ  ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ಉಪವಿಭಾಗ-೪ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರವರ ಕಚೇರಿಯಲ್ಲಿ ಜರುಗಲಿದೆ.

ವಿದ್ಯುತ್ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರ ಸಂಪರ್ಕ ಸಭೆಯಲ್ಲಿ  ಭಾಗವಹಿಸಿ ತಮ್ಮ ಯಾವುದೇ ತರಹದ ವಿದ್ಯುಚ್ಛಕ್ತಿಗೆ ಸಂಬಂಧಿಸಿದಂತೆ ಕುಂದುಕೊರತೆ ಹಾಗೂ ತಮ್ಮ ಸಮಸ್ಯೆಗಳನ್ನು ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here