ಕಲಬುರಗಿ : ನಗರದ ಸರ್ಕಾರಿ ಮಹಾವಿದ್ಯಾಲಯ(ಸ್ವಾಯತ್ತ), ಕಾಲೇಜಿನಲ್ಲಿ ೭೫ನೇ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಶಂಕ್ರೆಪ್ಪ ಹತ್ತಿ ನೆರವೇರಿಸಿದರು.
ಇದೆ ಸಂದರ್ಭದಲ್ಲಿ ಆಕರ್ಶಕವಾಗಿ ಎನ್‌ಸಿಸಿ, ಎನ್‌ಎಸ್‌ಎಸ್,ಗೈಡ್ಸ್, ರೆಡ್ ಕ್ರಾಸ್ ಮತ್ತು ಕ್ರೀಡಾ ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು. ಮತ್ತು ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು. ಸುಮಾರು ೪ ಗಂಟೆಗಳ ಕಾಲ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಮನೋರಂಜನಾ ಕಾರ್ಯಕ್ರಮಗಳು ನಡೆದವು.
ಸುಮಾರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಸುಮಾರು ೩೦೦೦ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿವಿಧ ಘಟಕಗಳ ಸಂಯೋಜಕರಾದ ಡಾ. ಶಿವಲಿಂಗಪ್ಪ ಪಾಟೀಲ, ಕೋತಲೆ ಭಿಮರಾವ್, ಡಾ.ಸೋಮನಾಥ ರೆಡ್ಡಿ, ಡಾ.ವಿಜಯಕುಮಾರ ಹೆಬ್ಬಾಳಕರ್, ರೆಹೆಮಾನಸಾಬ್, ಡಾ.ಸುರೇಶ ಜಾಧವ, ಡಾ.ಶ್ರೀಮಂತ ಹೋಳ್ಕರ, ರಾಜೇಶ ಅಜಬಸಿಂಗ್, ಡಾ.ಗೀತಾ ಪಾಟೀಲ, ಡಾ.ನಾಗಪ್ಪ ಗೋಗಿ, ಡಾ.ಪ್ರಶಾಂತ, ಡಾ.ಅನೀಲಕುಮಾರ ಹಾಲು, ಡಾ.ಪಂಡಿತ ಬೆಳಮಗಿ, ಡಾ.ವಿಜಯಕುಮಾರ ಸಾಲಿಮನಿ, ಚಂದ್ರಶೇಖರ ಅನದಿ, ಡಾ.ಸವಿತಾ ತಿವಾರಿ ಮುಂತಾದವರು ಭಾಗವಹಿಸಿದರು.