ಅಂಧಶೃದ್ಧಾ ನಿರ್ಮೂಲನಾ ದಿನಾಚಾರಣೆ 

0
22

ಕಲಬುರಗಿ: ಗೋದುತಾಯಿ ಬಡಾವಣೆಯಲ್ಲಿರುವ ಮದರ್ ತೆರೆಸಾ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ)ನಲ್ಲಿ ಶನಿವಾರ ಭಾರತ – ಜ್ಞಾನ ವಿಜ್ಞಾನ ಸಮಿತಿ ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ ಅಂಧಶೃದ್ಧಾ ನಿರ್ಮೂಲನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವಶಂಕರಪ್ಪ ಮುಳೆಗಾಂವ ಅವರು ಮಾತನಾಡಿ ಮೂಢ ನಂಬಿಕೆಗಳು, ವ್ಯಕ್ತಿಯ ಮಾನಸಿಕ ಲೋಕದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ವಿದ್ಯಾರ್ಥಿ ಇರುವಾಗಲೆ ವೈಜ್ಞಾನಿಕ ಮನೊಭಾವನೆಯನ್ನು ಬೆಳೆಸಿಕೊಳ್ಳಬೆಕೆಂದು ಎಂದರು.

ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮೂಢನಂಬಿಕೆಗಳ ಕುರಿತು, ತಮ್ಮ ವಿಚಾರಗಳನ್ನು ಮಂಡಿಸಿದರು. ಮೂಢನಂಬಿಕೆಗಳ ಆಚರಣೆಯಿಂದ ಜನರು ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆಂದು ಮುಳೆಗಾಂವ ಅವರು ಹೇಳಿದರು.

Contact Your\'s Advertisement; 9902492681

ಮುಖ್ಯ ಅತಿಥಿಗಳಾಗಿ ಡಾ. ಶ್ರೀಶೈಲ್ ಘೂಳಿ, ಡಾ. ಪ್ರಭು ಖಾನಾಪುರೆ, ರೇವಣಸಿದ್ಧ ಇವರು ತಮ್ಮ ವಿಚಾರಗಳನ್ನು ಮಂಡಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಾರ್ಯದರ್ಶಿಗಳಾದ ಶಿವಪುತ್ರಪ್ಪಾ ಡೆಂಕಿಯವರು ವಹಿಸಿದರು. ಈ ಕಾರ್ಯಕ್ರಮದಲ್ಲಿ ಶರಣಗೌಡ ಪಾಟೀಲ್, ಭೀಮಾಶಂಕರ, ಮದರ್ ತೆರೆಸಾ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ) ಕಾಲೇಜಿನ ಪ್ರಾಂಶುಪಾಲರಾದ ಡಾ.ವನಿತಾ ಜಾಧವ, ಮದರ್ ತೆರಸಾ ಆಂಗ್ಲ ಮಾಧ್ಯಮ ಶಾಲೆಯ ಮುಖೋಪಾಧ್ಯಾಯರಾದ ನಾಗೇಂದ್ರ ಬಡಿಗೇರ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here