ನಿರಂತರ ನೀರು ಸರಬರಾಜು ಯೋಜನೆ ಕಾಮಗಾರಿ ಅವಧಿಯೊಳಗಾಗಿ ಪೂರ್ಣಗೊಳಿಸಲು ಸೂಚನೆ

0
30

ಕಲಬುರಗಿ: ಮಹಾನಗರ ಪಾಲಿಕೆಯ ಸಹಯೋಗದೊಂದಿಗೆ ಕಲಬುರಗಿ ನಗರದಲ್ಲಿ ನಿರಂತರ ನೀರು ಸರಬರಾಜು ಯೋಜನೆಯನ್ನು ಅನುಷ್ಠಾನಗೊಳ್ಳುತ್ತಿದ್ದು, ಈ ಕಾಮಗಾರಿಗಳು ಉತ್ತಮ ಗುಣಮಟ್ಟದೊಂದಿಗೆ ನಿಗದಿತ ಅವಧಿಯೊಳಗಾಗಿ ಪೂರ್ಣಗೊಳಿಸಬೇಕೆಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರಾದ ಭುವನೇಶ ದೇವಿದಾಸ್ ಪಾಟೀಲ್ ಅವರು   ಗುರುವಾರ ಸಂಬಂಧಪಟ್ಟ ಅಧಿಕಾರಿಗಳಿಗೆ  ನಿರ್ದೇಶನ ನೀಡಿದರು.

ಅವರು ಕಲಬುರಗಿ ನಗರದ ಬಂಬು ಬಜಾರ ರಸ್ತೆಯಲ್ಲಿರುವ ಹಳೇ ಜಲಶುದ್ದೀಕರಣ ಕೇಂದ್ರದಲ್ಲಿ ನೀರು ಶುದ್ಧೀಕರಣ ಘಟಕಗಳ ಪುನಶ್ಚೇತನ, ಪ್ಲಾಕುಲೇಟರ್ ದುರಸ್ತಿ, ಡಿಸ್ಲಡ್ಜ್  ಮಾಡುವುದು ಮತ್ತು  ಶುದ್ಧೀಕರಣ ಘಟಕ್ಕೆ ಹೋಗದೇ ಬೈಪಾಸ್ ಆಗುತ್ತಿರುವ ನೀರನ್ನು ಶುದ್ಧೀಕರಣ ಘಟಕಕ್ಕೆ ಹೋಗುವ ವಾಲ್ವುಗಳ  ಹಾಗೂ ರಾಸಾಯನಿಕ ಬೆರಿಗೆ ಮಾಡುವ ಚೇಂಬರ್ ಹಾಗೂ ಮೋಟಾರುಗಳನ್ನು ದುರಸ್ತಿ ಮಾಡುವ ಕಾಮಗಾರಿಗಳನ್ನು ಮಹಾನಗರ ಪಾಲಿಕೆ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Contact Your\'s Advertisement; 9902492681

ಈಗಾಗಲೇ ಪ್ರಾರಂಭಗೊಂಡ ನಿರಂತರ ನೀರು ಸರಬರಾಜಿಗೆ ಸಂಬಂಧಿಸಿದ ಮೇಲ್ಮಟ ಜಲಸಂಗ್ರಹಗಾರ, ತಾವರಗೇರಾ ಕ್ರಾಸ್ ಹತ್ತಿರ ಹೊಸದಾಗಿ ನಿರ್ಮಿಸುತ್ತಿರುವ ಜಲ ಶುದ್ಧೀಕರಣ ಘಟಕ ಹಾಗೂ ಹರಸೂರುನಿಂದ ತಾವಗೇರಾ ಕ್ರಾಸ್‌ವರೆಗೂ ಹೊಸದಾಗಿ ಅಳವಡಿಸುತ್ತಿರುವ ಕೊಳವೆ ಮಾರ್ಗವು ಕೂಡಾ ಪಾಲಿಕೆ ಆಯುಕ್ತರು ವೀಕ್ಷಿಸಿದರು.

ಕಲಬುರಗಿ ನಗರಕ್ಕೆ ವಿಶ್ವ ಬ್ಯಾಂಕ್ ನೆರವಿನಿಂದ ಯೋಜನಾ ಅನುಷ್ಠಾನ ಘಟಕ ಕೆ.ಯು.ಡಬ್ಲ್ಯೂ.ಎಸ್.ಎಮ್.ಪಿ. (ಏUWSಒP) ಅಡಿಯಲ್ಲಿನ ೨೪x೭ ನೀರು ಸರಬರಾಜು ಆಧುನೀಕರಣ ಯೋಜನೆಯ ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ. ಈ ಯೋಜನೆಯನ್ನು ಮಹಾನಗರ ಪಾಲಿಕೆಯ ಸಹಯೋಗದೊಂದಿಗೆ ನಗರಕ್ಕೆ ನಿರಂತರ ನೀರು ಸರಬರಾಜು ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಈ ಸಂದರ್ಭದಲ್ಲಿ ಕಲಬುರಗಿ ಕೆಯುಐಡಿಎಫ್‌ಸಿ ಅಧೀಕ್ಷಕ ಅಭಿಯಂತರ ಕಾಂತರಾಜ್ ಕೆ., ಮಹಾನಗರ ಪಾಲಿಕೆ ಕಾರ್ಯಪಾಲಕ ಅಭಿಯಂತರರಾದ ಕೆ.ಎಸ್.ಪಾಟೀಲ್ ಹಾಗೂ ಮೆ. ಎಲ್ ಆಂಡ್ ಟಿ ಕಂಪನಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here