ವಿದ್ಯಾರ್ಥಿಗಳು ಸಂಶೋಧನಾತ್ಮಕ ಮನೋಭಾವ ಬೆಳೆಸಿಕೊಳಬೇಕು: ಜಿ.ಎಂ.ವಿಜಯಕುಮಾರ

0
118

ಕಲಬುರಗಿ: ವಿಜ್ಞಾನ ಮನೆಯಿಂದಲೇ ಆರಂಭವಾಗುತ್ತದೆ. ದಿನನಿತ್ಯ ಜೀವನದಲ್ಲಿ ಪ್ರತಿ ಹೆಜ್ಜೆ ಹೆಜ್ಜೆಗೂ ವಿಜ್ಞಾನದ ಅನ್ವಯವಾಗುತ್ತಿದ್ದು ಅವುಗಳನ್ನು ವಿಶ್ಲೇಷಣೆ ಮಾಡುವುದರ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಂಶೋಧನಾತ್ಮಕ ಹಾಗೂ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳಬೇಕು ಎಂದು ಅಪರ ಆಯುಕ್ತರ ಕಾರ್ಯಾಲಯದ ಸಹ ನಿರ್ದೇಶಕ ಜಿ.ಎಂ.ವಿಜಯಕುಮಾರ ಹೇಳಿದರು.

ನಗರದ ಕರುಣೇಶ್ವರ ನಗರದ ವಿವೇಕಾನಂದ ವಿದ್ಯಾನಿಕೇತನ ಶಾಲೆಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಬೆಂಗಳೂರು ಜಿಲ್ಲಾ ಸಮಿತಿ ಕಲಬುರಗಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಲಬುರಗಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಇವರುಗಳ ಸಹಯೋಗದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ಸರ್.ಸಿ.ವಿ ರಾಮನ್ ರಸಪ್ರಶ್ನೆ ಕಾರ್ಯಕ್ರಮದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿದ್ಯಾನಿಕೇತನ ಪ್ರೌಢ ಶಾಲೆಯ ಪ್ರಾಂಶುಪಾಲರಾದ ಸಿದ್ದಪ್ಪ ಭಗವತಿ ಕರಾವಿಪ, ರಾಜ್ಯ ಘಟಕದ ಅಧ್ಯಕ್ಷ ಗಿರೀಶ್ ಕಡ್ಲೆವಾಡ, ಕ್ವಿಜ್ ಮಾಸ್ಟರ್‌ಗಳಾದ ಸಂತೋಷ್ ಕುಲಕರ್ಣಿ, ಆನಂದ ಕುಲಕರ್ಣಿ ಕರಾವಿಪ, ಜಿಲ್ಲಾ ಕಾರ್ಯದರ್ಶಿ ರಾಜಶೇಖರ ವೇದಿಕೆ ಮೇಲಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರಾವಿಪ ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾದ ಸಿ ಬಿ ಪಾಟೀಲ್ ವಹಿಸಿದ್ದರು. ಅಪ್ಪಾ ಪಬ್ಲಿಕ್ ಶಾಲೆಯ ಸೃಷ್ಟಿ ಮುಧೋಳ ಹಾಗೂ ಹಂಸ ಸ್ವಾಮಿ ತಂಡ ಪ್ರಥಮ ಸ್ಥಾನ ಹಾಗೂ ಎಸ್ ಆರ್ ಎನ್ ಮೆಹ್ತಾ ಶಾಲೆ ಯ ಜಯಂತ್ ವೈಷ್ಣವಿ ಇವರ ತಂಡ ದ್ವಿತಿಯ ಸ್ಥಾನ ಪಡೆಯಿತು. ಪ್ರಥಮ ಸ್ಥಾನ ಪಡೆದ ತಂಡವು ಸೆಪ್ಟೆಂಬರ್ ಮೊದಲ ವಾರದಲ್ಲಿ ಬೆಳಗಾವಿಯಲ್ಲಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ.

ಕಾರ್ಯಕ್ರಮವನ್ನು ಕರಾವಿಪ ಜಿಲ್ಲಾ ಖಜಾಂಚಿಯಾದ ಚಂದ್ರಶೇಖರ್ ಪಾಟೀಲ್ ನಿರೂಪಿಸಿದರು. ಶ್ರೀಮತಿ ಜಮುನಾ ಟಿಳೆ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಕೆ ಎಂ ದೇಸಾಯಿ, ಶ್ರೀಧರ್ ಬಿ ಕೆ, ರವಿ ಮಾಳವಾದಕರ, ಮಾಣಿಕರಾವ ಸಕ್ಪಾಲ್, ಶಿವಶರಣ ಉದನೂರ, ಸುರೇಖಾ, ಕೃಷ್ಣಾ, ಶಿವಮೂರ್ತಿ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here