ಶಹಾಪುರ: ತಾಲ್ಲೂಕಿನ ಮುಡಬೂಳ ಗ್ರಾಮದಲ್ಲಿ ವೇಣುಗೋಪಾಲಸ್ವಾಮಿ ದೇವರ ಜಾತ್ರೆಯ ಅಂಗವಾಗಿ ನಡೆಯುವ ಕಂಭಾರೋಹಣವು ಭಾನುವಾರ ಸಂಭ್ರಮದಿಂದ ಜರುಗಿತು. ಎರಡು ವರ್ಷದಿಂದ ಕೊರೊನಾ ಹಾವಳಿಯಿಂದ ಜಾತ್ರೆಯ ಸಂಭ್ರಮಕ್ಕೆ ಮಂಕು ಕವಿದಿತ್ತು. ಪ್ರಸಕ್ತ ವರ್ಷ p ಸುತ್ತಮುತ್ತಲಿನ ಹಳ್ಳಿಯ ಜನತೆಯು ಜಾತ್ರೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.
pಸುಮಾರು 50ಅಡಿ ಎತ್ತರದ ಕಂಬದ ಮೇಲೆ ಕುಳಿತು ವ್ಯಕ್ತಿಯೊಬ್ಬರು ಕಂಭಾರೋಹಣ ಮಾಡುವರಿಗೆ ನೀರು ಎರೆಯುತ್ತಾರೆ. ಅಲ್ಲದೆ ಸುಲಭವಾಗಿ ಕಂಬವನ್ನು ಹತ್ತಬಾರದು ಎಂದು ಜಾರುವ ವಸ್ತುವನ್ನು ಕಂಬಕ್ಕೆ ಲೇಪಿಸಿರುತ್ತಾರೆ. ನೆರೆದ ಜನತೆಯು ಚಪ್ಪಾಳೆ, ಕೇಕೆ ಹಾಕಿ ಹುರಿದುಂಬಿಸುತ್ತಾರೆ.
ಆದರೆ ಇದೊಂದು ಸಾಹಸಮವಾದ ಕ್ರೀಡೆಯಂತೆ ಆಗಿದೆ. ಧೈರ್ಯ, ಸಾಹಸ ಹಾಗೂ ಯುಕ್ತಿಯನ್ನು ಬಳಿಸಿಕೊಂಡು ಕಂಭಾರೋಹಣ ಮಾಡುವ ಪರಿ ಮೈ ಜಮ್ಮೆನಿಸುತ್ತದೆ. ತುಸು ಯಾಮಾರಿದರೆ ನೆಲಕ್ಕೆ ಬಿಳಬೇಕು. ತಮ್ಮ ಚಾಕಚಕ್ಯತೆಯನ್ನು ಬಳಸಿಕೊಂಡು ಕಂಭಾರೋಹಣ ಮಾಡಿ ಗೆಲುವು ಸಾಧಿಸಿದ ವ್ಯಕ್ತಿಗೆ ಜೈಕಾರದ ಸುರಿಮಳೆಯಾಗುತ್ತದೆ. ಸುಮಾರು 300 ವರ್ಷದ ಇತಿಹಾಸವನ್ನು ಹೊಂದಿರುವ ಜಾತ್ರೆಗೆ ಇಂದಿಗೂ ಅದೇ ಭಕ್ತಿ ಹಾಗೂ ಪೂಜ್ಯತೆಯಿಂದ ಪಾಲನೆ ಮಾಡುವ ಸಂಪ್ರದಾಯ ಮೆಚ್ಚುವಂತದ್ದು ಎನ್ನುತ್ತಾರೆ ಗ್ರಾಮದ ಮುಖಂಡ ಗೋಪಣ್ಣ ಹವಾಲ್ದಾರ.
ಸುರಪುರ ಸಂಸ್ಥಾನದ ರಾಜಾ ಮಂಡಗೈ ವೆಂಕಟಪ್ಪ ನಾಯಕ(1747-1752) ಅವಧಿಯಲ್ಲಿ ಮುಡಬೂಳ ಗ್ರಾಮದಲ್ಲಿ ವೇಣುಗೋಪಾಲಸ್ವಾಮಿ ದೇವಸ್ಥಾನವನ್ನು ಕಟ್ಟಿಸಿದರು. ತಿರುಪತಿ ತಿಮ್ಮಪ್ಪ ಪರಮಭಕ್ತರಾಗಿರುವ ಸಂಸ್ಥಾನದ ಅರಸರು ವೇಣುಗೋಪಾಲಸ್ವಾಮಿ ದೇಗುಲ ನಿರ್ಮಿಸಿದ್ದರು ಎನ್ನುತ್ತಾರೆ ಇತಿಹಾಸ ಸಂಶೋಧಕ ಭಾಸ್ಕರರಾವ ಮುಡಬೂಳ.
ಗ್ರಾಮದ ವತನದಾರರಾದ ಶಂಕರಗೌಡ ಪಾಟೀಲ್, ಬಸನಗೌಡ ಪಾಟೀಲ್, ಗುರುರಾಜ ಕುಲಕರ್ಣಿ, ಕಂಭಾರೋಹಣ ಜಾತ್ರೆಯಲ್ಲಿ ಶರಣಪ್ಪ ಹವಾಲ್ದಾರ,ಶಿವಮಾನಪ್ಪ ಹವಾಲ್ದಾರ, ರಂಗಣಗೌಡ ಚೆನ್ನಪಟ್ಟಣ, ಬಸವರಾಜ ಹವಾಲ್ದಾರ, ಭೀಮಶ್ಯಾ ಹವಾಲ್ದಾರ, ಭೀಮರಡ್ಡಿ ಹಳಿಸಗರ, ಮಲ್ಲಿನಾಥ ದ್ಯಾವಗೊಂಡ,ಬಂಡೆಪ್ಪ ಹವಾಲ್ದಾರ,ನಿಂಗಣ್ಣ ಗೋಪಾಳಿ, ಡಾ.ಸಾಯಿಬಣ್ಣ ಯಾದಗಿರಿ, ಈರಣ್ಣ ಹವಾಲ್ದಾರ, ತಿಪ್ಪಣ್ಣ ಚೆನ್ನೂರ, ಜೆಟ್ಟೆಪ್ಪ ನಾಯ್ಕೋಡಿ, ಭೀಮಶ್ಯಾ ಕೂಡಗಿ,ಚಂದ್ರಶ್ಯಾ ಹವಾಲ್ದಾರ ಇದ್ದರು.