ಶಹಾಬಾದ:ಕಲಬುರಗಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಣ ಅಧಿಕಾರಿ ಡಾ.ಗಿರೀಶ.ಡಿ.ಬದೊಲೆ ಅವರು ಕಳೆದ ಶುಕ್ರವಾರದಂದು ಶಹಾಬಾದ ನಗರದ ತಾಪಂ ಕಚೇರಿ ಹಾಗೂ ಸಿಡಿಪಿಓ ಕಾರ್ಯಾಲಯಕ್ಕೆ ಬೇಟಿ ನೀಡಿ ಪರಿಶೀಲನೆ ಮಾಡಿದರು.
ತಾಪಂ ಕಚೇರಿಗೆ ಬೇಟಿ ನೀಡಿ ಅಲ್ಲಿನ ಅವ್ಯವಸ್ಥೆಯನ್ನು ಕಂಡು ಬೆರಗಾದರು. ಕಚೇರಿಯ ಮಾಳಿಗೆ ಸಂಪೂರ್ಣ ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿತ್ತು. ಮಳೆ ಬಂದಾಗಲೊಮ್ಮೆ ಮಾಲಿಗೆ ಸೋರುತ್ತದೆ.ಅಲ್ಲದೇ ನಿಜಾಮ ಕಾಲದ ಕಟ್ಟಡವಾಗಿದೆ.ಈ ಹಳೆಯ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತ ಬಂದಿದ್ದು, ಈ ವರ್ಷ ಬಹಳ ಮಳೆಯಾದ ಕಾರಣ ಕಟ್ಟಡ ಸೋರುತ್ತಿರುವುದರಿಂದ ಬಹಳ ತೊಂದರೆಯಾಗಿದೆ.
ಆದ್ದರಿಂದ ಬಾಲಕರ ಪ್ರೌಢಶಾಲೆಯ ಕಟ್ಟಡಗಳ ನಿರ್ಮಾಣವಾಗಿದ್ದು, ಹಳೆ ಕಟ್ಟಡದ ಕೋಣೆಗಳಲ್ಲಿ ತಾತ್ಕಾಲಿಕವಾಗಿ ಕಚೇರಿಯನ್ನು ನಡೆಸುತ್ತಿದ್ದೆವೆ ಎಂದು ತಾಪಂ ಅಧಿಕಾರಿ ಡಾ. ಬಸಲಿಂಗಪ್ಪ ಡಿಗ್ಗಿ ಅವರು ಜಿಪಂ ಸಿಇಒ ಅವರ ಗಮನಕ್ಕೆ ತಂದರು. ಜಿಪಂ ಸಿಇಒ ಅವರು ಕಟ್ಟಡ ನಿರ್ಮಾಣಕ್ಕೆ ಜಿಪಂನಲ್ಲಿ ಅನುದಾನವಿದೆ. ಸ್ಥಳ ಗುರುತಿಸಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಒದಗಿಸಲಾಗುವುದ ಎಂದು ಹೇಳಿದರು. ಈಗಾಗಲೇ ನಗರದ ಹೊರವಲಯದಲ್ಲಿ ಬರುವ ತರನಳ್ಳಿ ಗ್ರಾಮದ ರಸ್ತೆಗೆ ಹೊಂದಿಕೊಂಡಿರುವ ಸರಕಾರಿ ಜಾಗದಲ್ಲಿ ಸ್ಥಳ ಗುರುತಿಸಲಾಗಿದ್ದು, ವ್ಯಾಜ್ಯ ನ್ಯಾಲಯದಲ್ಲಿರುವ ಕಾರಣ ವಿಳಂಬವಾಗಿದೆ ಎಂದು ಸ್ಥಳೀಯ ಅಧಿಕಾರಿ ಬಸಲಿಂಗಪ್ಪ ಡಿಗ್ಗಿ ಮಾಹಿತಿ ನೀಡಿದರು.
ಅಲ್ಲದೇ ತಾಪಂ ಯೋಜನೆಗಳ ಮತ್ತು ಕಾಮಗಾರಿಗಳ ಮಾಹಿತಿ ಪಡೆದರು. ನಂತರ ಶಿಶು ಅಭಿವೃದ್ಧಿ ಇಲಾಖೆಗೆ ಬೇಟಿ ನೀಡಿ ಸಿಡಿಪಿಓ ಬಿ.ಎಸ್.ಹೊಸಮನಿ ಅವರಿಂದ ಇಲಾಖೆಯ ಕಾರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಶಿಶು ಪಾಲನಾ ಕೇಂದ್ರದಲ್ಲಿ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ವೇಷ ಧರಿಸಿದ ಪಟ್ಟ ಮಗುವನ್ನು ಎತ್ತಿಕೊಂಡು ಮುದ್ದಾಡಿದರು.
ಈ ಸಂದರ್ಭದಲ್ಲಿ ಚಿತ್ತಾಪೂರ ತೋಟಗಾರಿಕೆ ಇಲಾಖೆಯ ಅಧಿಕಾರಿ ಸಿದ್ದಣ್ಣ ಅಣಬಿ, ತಾಪಂ ಅಧಿಕಾರಿ, ಸಿಡಿಪಿಓ ಅಧಿಕಾರಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು.