ಬಿಲ್ಕಿಸ್ ಬಾನು ಅತ್ಯಾಚಾರಿಗಳ ಬಿಡುಗಡೆ ಹಿಂಪಡೆಯಬೇಕೆಂದು ಒತ್ತಾಯಿಸಿ ಪ್ರತಿಭಟನೆ

0
25

ಶಹಾಬಾದ: ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರಿಗಳನ್ನು ಕ್ಷಮಾಪಣ ನೀತಿಯಡಿಯಲ್ಲಿ ಬಿಡುಗಡೆ ಮಾಡಿರುವುದನ್ನು ಕೂಡಲೇ ಹಿಂಪಡೆಯಬೇಕೆಂದು ಒತ್ತಾಯಿಸಿ ರವಿವಾರ ಎಐಎಂಎಸ್‌ಎಸ್ ಸಂಘಟನೆಯವರು ಪ್ರತಿಭಟನೆ ನಡೆಸಿ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಎಐಎಂಎಸ್‌ಎಸ್ ಜಿಲ್ಲಾಧ್ಯಕ್ಷೆ ಗುಂಡಮ್ಮ ಮಡಿವಾಳ ಮಾತನಾಡಿ, ಗುಜರಾತ್ ನಲ್ಲಿ ೨೦೦೨ರಲ್ಲಿ ನಡೆದ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಅವರ ಕುಟುಂಬದ ಏಳು ಸದಸ್ಯರನ್ನು ಕೊಲೆ ಮಾಡಿರುವ ೧೧ ಅಪರಾಧಿಗಳನ್ನು ಕ್ಷಮಾಪಣಾ ನೀತಿಯಡಿಯಲ್ಲಿ ಬಿಡುಗಡೆ ಮಾಡಿರುವುದನ್ನು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯು (ಎ ಐ ಎಂ ಎಸ್ ಎಸ್) ತೀವ್ರ ಆಘಾತ ಮತ್ತು ಆಕ್ರೋಶವನ್ನು ವ್ಯಕ್ತಪಡಿಸುತ್ತದೆ ಎಂದರು.

Contact Your\'s Advertisement; 9902492681

ಆ ಸಂದರ್ಭದಲ್ಲಿ ೫ ತಿಂಗಳ ಗರ್ಭಿಣಿ ಆಗಿದ್ದಂತಹ ಬಿಲ್ಕಿಸ್ ಬಾನು ಎದುರಿಸಿದ ಭಯಾನಕತೆ ಮತ್ತು ಮಾನಸಿಕ ಆಘಾತವನ್ನು ನೆನಪಿಸಿಕೊಳ್ಳಲು ಸಾಧ್ಯವಿಲ್ಲ. ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಆಕೆಯ ಕಣ್ಣೆದುರೇ ಅವಳ ಮೂರು ವ?ದ ಮಗುವನ್ನು ಗೋಡೆಗೆ ಅಪ್ಪಳಿಸಿ ಸಾಯಿಸಿ, ಅವಳ ಕುಟುಂಬದ ಏಳು ಸದಸ್ಯರನ್ನು ಕೊಲೆ ಮಾಡಲಾಗಿತ್ತು. ಇಂತಹ ಭೀಕರ ಮತ್ತು ಆಘಾತಕಾರಿ ಸನ್ನಿವೇಶವನ್ನು ಎದುರಿಸಿದ ಬಿಲ್ಕಿಸ್ ಬಾನು ಧೈರ್ಯದಿಂದ ಹೋರಾಡಿ, ನ್ಯಾಯಾಲಯದಿಂದ ನ್ಯಾಯಾಲಯಕ್ಕೆ ಪರದಾಡಿದಳು. ಕೊನೆಯದಾಗಿ ೨೦೦೮ರಲ್ಲಿ ಮುಂಬೈಯ ವಿಶೇ? ಸಿಬಿಐ ನ್ಯಾಯಾಲಯವು ೧೧ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತು.

ಗುಜರಾತ್ ಸರ್ಕಾರವು ಇಂತಹ ಘೋರ ಅಪರಾಧವೆಸಗಿದ ಅಪರಾಧಿಗಳನ್ನು ತನ್ನ ಹಳೆಯ ಕ್ಷಮಾಪಣಾ ನೀತಿಯಡಿಯಲ್ಲಿ ಬಿಡುಗಡೆ ಮಾಡಿರುವುದು ಆಘಾತಕಾರಿ ವಿ?ಯವಾಗಿದೆ. ಸರ್ಕಾರದ ಈ ನಡೆಯಿಂದ ಬಿಲ್ಕಿಸ್ ಬಾನು ಜೀವಕ್ಕೆ ಅಪಾಯ ಇರುವುದಲ್ಲದೆ, ಇದೇ ರೀತಿಯ ಅಪರಾಧಕ್ಕೆ ಬಲಿಪಶುವಾಗಿರುವ ಸಂತ್ರಸ್ತರಿಗೂ , ಅಪರಾಧಿಗಳಿಗೆ ಕೊನೆಯವರೆಗೂ ಶಿಕ್ಷೆ ಆಗುವುದರ ಭರವಸೆಯ ಆಶಾಕಿರಣ ಇಲ್ಲದಾಗುತ್ತದೆ. ನಮ್ಮ ದೇಶದಲ್ಲಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲೆ ಅಪರಾಧಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ, ಸರ್ಕಾರದ ಈ ನಿರ್ಧಾರವು ನಿಸ್ಸಂದೇಹವಾಗಿ ಆರೋಪಿಗಳಿಗೆ ಮತ್ತ? ಧೈರ್ಯವನ್ನು ನೀಡಿದಂತಾಗಿದೆ. ಮತ್ತೊಂದು ಆಘಾತಕಾರಿ ವಿ?ಯವೆಂದರೆ ಬಿಡುಗಡೆಯಾದ ಅಪರಾಧಿಗಳಿಗೆ ವಿಶ್ವ ಹಿಂದೂ ಪರಿ?ತ್ ಕಚೇರಿಯಲ್ಲಿ ಸಿಹಿ ಹಂಚಿ, ಹಾರ ಹಾಕಿ ಸಂಭ್ರಮಿಸಿರುವುದು ಅಪರಾಧವನ್ನು ಮತ್ತು ಅಪರಾಧಿಗಳನ್ನು ವೈಭವೀಕರಿಸದಂತಾಗುವುದು.

ಆರೋಪಿಗಳನ್ನು ಅವಧಿಗೂ ಮುಂಚೆ ಬಿಡುಗಡೆ ಮಾಡಿರುವುದನ್ನು ಹಿಂತೆಗೆದುಕೊಂಡು, ಆರೋಪಿಗಳಿಗೆ ತಕ್ಕ ಶಿಕ್ಷೆಯನ್ನು ಖಾತ್ರಿ ಪಡಿಸಬೇಕು, ಸಂತ್ರಸ್ತೆಗೆ ಸೂಕ್ತ ಭದ್ರತೆಯನ್ನು ಒದಗಿಸಬೇಕು ಎಂದು ನಾಡಿನ ಎಲ್ಲಾ ನ್ಯಾಯ ಪ್ರೇಮಿ ಜನತೆಯ ಪರವಾಗಿ ಎಐಎಂಎಸ್‌ಎಸ್ ಮನವಿ ಮಾಡುತ್ತದೆ.

ಮಹಾದೇವಿ ಮಾನೆ, ರಾಧಿಕಾ, ಶೋಭಾ, ಭಾಗಿರಥಿ, ಮಲ್ಲಮ್ಮ, ಸುಕನ್ಯಾ, ಮಹಾದೇವಿ, ಶೇಖ ಶಾಹೀರಾ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here