ಇಂದಿನ ಮಕ್ಕಳೆ ಭಾರತದ ಭವಿಷ್ಯ: ಡಾ. ನಾ. ಸೊಮೇಶ್ವರ

0
69

ಕಲಬುರಗಿ: ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ನಾಳಿನ ಭವಿಷ್ಯದ ರೂವಾರಿಗಳು ಆರೋಗ್ಯವಂತ ಮಕ್ಕಳು ಮಾತ್ರ ಆರೋಗ್ಯಕರ ಸಮಾಜ ನಿರ್ಮಿಸಬಲ್ಲರು ಅರೋಗ್ಯ ಮತ್ತು ಅಧ್ಯಯನ ಎಂಬ ವಿಷಯದ ಬಗ್ಗೆ ನಾಡಿನ ಪ್ರಮುಖ ಚಿಂತಕರು, ವೈದ್ಯರು, ದೂರದರ್ಶನ ಚಂದನ ವಾಹಿನಿಯ ಥಟ್ಟಂತ ಹೇಳಿ ಕಾರ್ಯ ಕ್ರಮದ ಕ್ವಿಜ್ ಮಾಸ್ಟರ್ ಡಾ.ನಾ.ಸೋಮೇಶ್ವರ ಅವರು ನಗರದ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾತನಾಡಿದರು.

ಎನು ತಿನ್ನಬೇಕು ಎನು ತಿನ್ನಬಾರದು ಅರೋಗ್ಯ ಕರ ಜೀವನ‌ವಿಧಾನ, ರಕ್ತದ ಕೊರತೆ ಉಂಟಾಗಲು ಕಾರಣ ಮತ್ತು ಅದನ್ನು ಉತ್ತಮಪಡಿಸಿಕೊಳ್ಳುವುದು ಹೇಗೆಂಬುದನ್ನು ವಿವರಿಸಿದರು ಅಧ್ಯಯನದ ಮಾದರಿ, ಕಲಿಕೆ, ನೆನಪು ಮುಂತಾದ ವಿಷಯಗಳ ಬಗ್ಗೆ ವೈಜ್ಞಾನಿಕ ಮತ್ತು ವೈದ್ಯಕೀಯ ಕಾರಣ, ಪರಿಣಾಮಗಳನ್ನು ಮನಮುಟ್ಟುವಂತೆ ಪವರ್ ಪಾಯಿಂಟ್ ಪ್ರಶಂಟೇಶನ್ ಮತ್ತು ವಿಡಿಯೋ ಮೂಲಕ ವಿವರಿಸಿದರು.

Contact Your\'s Advertisement; 9902492681

ಕುಮಾರಿ ಶಶಿಕಲಾ ಪ್ರಾರ್ಥನೆ ಗೀತೆ ಹಾಡಿದರು ಡಾ.ಶಶಿಶೇಖರರೆಡ್ಡಿ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು, ಯುವ ರೆಡ್ ಕ್ರಾಸ್ ಘಟಕದ ಅಧಿಕಾರಿ ಡಾ.ಪದ್ಮಣ್ಣಾ ಪೂಜಾರಿ ನಿರೂಪಿಸಿದರು ಖಂಡೇರಾವ್ ಪ್ರಾಂಶುಪಾಲರು ಅಧ್ಯಕ್ಷತೆ ವಹಿಸಿದ್ದರು ಡಾ.ಪ್ರಿಯದರ್ಶಿನಿ ವಂದಿಸಿದರು ಉಪನ್ಯಾಸಕರಾದ ಬಿ.ಎಸ್.ಬಿರಾದಾರ, ಜ್ಯೋತಿರೆಡ್ಡಿ, ವಿದ್ಯಾವತಿ ಚಕ್ಕಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here