ಕಲಬುರಗಿ: ನಗರದ ಬಸವೇಶ್ವರ್ ಆಸ್ಪತ್ರೆಯ ಎದುರುಗಡೆಯಲ್ಲಿರುವ ವಿದ್ಯಾನಗರ್ ಕಾಲೋನಿ ವಿದ್ಯಾನಗರ್ ವೆಲಫೇರ್ ಸೊಸೈಟಿ ವತಿಯಿಂದ ಧಾರವಾಡ ಜಿಲ್ಲೆಯ ಗರಗದ ಶ್ರೀ ಮಡಿವಾಳೇಶ್ವರ್ ಪುರಾಣ ಪ್ರವಚನ ಜುಲೈ ೨ರಂದು ಸಾಯಂಕಾಲ ೬-೩೦ ಗಂಟೆಗೆ ವಿದ್ಯಾನಗರದ ಶ್ರೀ ಮಲ್ಲಿಕಾರ್ಜುನ್ ದೇವಸ್ಥಾನದಲ್ಲಿ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ವೆಲಫೇರ್ ಸೇಸೈಟಿಯ ಅದ್ಯಕ್ಷ ಮಲ್ಲಿನಾಥ್ ದೇಶಮುಖ್ ಅವರು ಇಲ್ಲಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ತಿಂಗಳ ಪರ‍್ಯಂತರ ನಡೆಯುವ ಪುರಾಣವನ್ನು ಗೋಳಾ (ಬಿ) ಹಾಗೂ ನರೋಣಾದ ಚನ್ನಮಲ್ಲ ಸ್ವಾಮಿಗಳು ಹೊಸಮಠ್ ಅವರು ಹೇಳುವರು. ಆಕಾಶವಾಣಿ ಮತ್ತು ದೂರದರ್ಶನ ಕಲಾವಿದ ಜಗದೀಶ್ ಎಸ್. ನಗನೂರ್ ಹಾಗೂ ಜಗದೀಶ್ ಸಿದ್ದಣ್ಣ ದೇಸಾಯಿ ಕಲ್ಲೂರ್ ಅವರು ಸಂಗೀತ ಹಾಗೂ ತಬಲಾ ಸಾಥ್ ನೀಡುವರು ಎಂದರು.
ಸೊಸೈಟಿ ಕಾರ್ಯದರ್ಶಿ ಶಿವರಾಜ್ ಅಂಡಗಿ ಅವರು ಮಾತನಾಡಿ, ೧ ತಿಂಗಳ ಪರ್ಯಂತ ನಡೆಯುವ ಪುರಾಣ ಪ್ರತಿನಿತ್ಯ ಸಾಯಂಕಾಲ ೬.೩೦ ರಿಂದ ೮.೩೦ರವರೆಗೆ ಪುರಾಣ ಕಾರ್ಯಕ್ರಮಕ್ಕೆ ವಿದ್ಯಾನಗರದ ಸುತ್ತಮುತ್ತಲಿನ ಬಡಾವಣೆಯ ಭಕ್ತಾದಿಗಳು ಆಗಮಿಸಿ ಪುನೀತರಾಗಬೇಕೆಂದು ಕೋರಿದರು. ಸುದ್ದಿಗೋಷ್ಠಿಯಲ್ಲಿ ಉಮೇಶ್ ಶೆಟ್ಟಿ ಹಾಗೂ ವಿನೋದಕುಮಾರ್ ಜನೆವರಿ ಅವರು ಉಪಸ್ಥಿತರಿದ್ದರು.