ಆಳಂದ: ತಾಲೂಕಿನ ಗಡಿಗ್ರಾಮ ಖಜೂರಿಯಲ್ಲಿ ೧.೩೦ ಕೋ. ರೂ ವೆಚ್ಚದ ೨೦೨೧-೨೨ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಮಂಜೂರಾದ ಆಳಂದ-ಉಮರ್ಗಾ ಮುಖ್ಯ ರಸ್ತೆಯಿಂದ ಖಜೂರಿ ಗ್ರಾಮದ ವರೆಗಿನ ರಸ್ತೆ ನಿರ್ಮಾಣ ಹಾಗೂ ಬೀದಿ ದೀಪಗಳ ಅಳವಡಿಕೆ ಕಾಮಗಾರಿಗಳ ಭೂಮಿ ಪೂಜೆಯನ್ನು ನೇರವೇರಿಸಿ ಮಾತನಾಡಿದರು.
ಖಜೂರಿ ಗ್ರಾಮಕ್ಕೆ ಈ ಅವಧಿಯಲ್ಲಿ ಸುಮಾರು ೧೦ ಕೋ. ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಗ್ರಾಮದ ಬಹುದಿನದ ಬೇಡಿಕೆಯಾದ ಮುಖ್ಯ ರಸ್ತೆಯಿಂದ ಗ್ರಾಮದವರೆಗಿನ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ಗ್ರಾಮದಲ್ಲಿ ಶಾಲಾ ಕೋಣೆಗಳ ನಿರ್ಮಾಣ, ಜಲಜೀವನ ಮಿಷನ್ ಕಾಮಗಾರಿ, ಆಸ್ಪತ್ರೆ ಕಂಪೌಂಡ್ ನಿರ್ಮಾಣ, ಸಂಪರ್ಕ ರಸ್ತೆಗಳು, ಸಿಸಿ ರಸ್ತೆಗಳು, ಗ್ರಂಥಾಲಯ ಕಟ್ಟಡ, ಪೈಪಲೈನ್ ಕಾಮಗಾರಿ, ಘನ ತ್ಯಾಜ್ಯ ವಿಲೇವಾರಿ ಘಟಕ, ಆಸ್ಪತ್ರೆಯಲ್ಲಿ ಶೌಚಾಲಯ ಕುಡಿಯುವ ನೀರಿನ ವ್ಯವಸ್ಥೆ, ಶವ ಪರೀಕ್ಷಾ ಕೊಠಡಿ ಕಾಮಗಾರಿ, ತಡೋಳಾ ರಸ್ತೆ, ಸಿದ್ದೇಶ್ವರ ದೇವಸ್ಥಾನದ ಅಭಿವೃದ್ಧಿ ಸೇರಿದಂತೆ ಅನೇಕ ಕೆಲಸಗಳನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಖಜೂರಿ ಗ್ರಾಮಕ್ಕೆ ನನ್ನ ಶಾಸಕತ್ವದ ಅವಧಿಯಲ್ಲಿ ಅತೀ ಹೆಚ್ಚು ಅನುದಾನ ನೀಡಿದ್ದೇನೆ ಈ ಹಿಂದೆ ಗ್ರಾಮವನ್ನು ಸುವರ್ಣ ಗ್ರಾಮವನ್ನಾಗಿ ಆಯ್ಕೆ ಮಾಡಿ ಗ್ರಾಮದ ಪ್ರತಿ ಮೂಲೆಯಲ್ಲೂ ಕಾಮಗಾರಿ ಮಾಡಿಸಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಮಂಜುನಾಥ ಬಂಗರಗೆ, ತಾ.ಪಂ ಮಾಜಿ ಉಪಾಧ್ಯಕ್ಷ ಗುರುನಾಥ ಪಾಟೀಲ, ಮುಖಂಡರಾದ ಮಲ್ಲಿಕಾರ್ಜುನ ಕಂದಗೂಳೆ, ಶಿವಲಿಂಗಪ್ಪ ಬಂಗರಗೆ, ಶಿವಪುತ್ರ ಬೆಳ್ಳೆ, ಶ್ರೀಮಂತ ನಾಮಣೆ, ಸಿದ್ದಾರಾಮ ಬನಶೆಟ್ಟಿ, ಮಹಿಬೂಬ್ ಶೇಖ್, ಅಶೋಕ ಹೊಸಮನೆ, ಉದಯಕುಮಾರ ಕಂದಗೂಳೆ, ಸಂಗಯ್ಯ ಮಠಪತಿ, ಗಾಂಧಿ ಘಂಟೆ, ರಾಜಶೇಖರ ಗುರುಬಸಗೊಳ, ಕುಮಾರ ಬಂಡೆ, ಪ್ರತಾಪ ವಾಡೆ, ತಿಪ್ಪಣ್ಣ ಬಂಡೆ, ಶರಣಪ್ಪ ಹೊಸಮನೆ, ಪ್ರಫುಲ ಬಾಬಳಸುರೆ, ಶಿವಪ್ಪ ಘಂಟೆ, ಶಿವಪ್ರಕಾಶ ಹೀರಾ, ಪಂಚಾಯತ ರಾಜ್ ಇಂಜಿನಿಯರಿಂಗ್ ಇಲಾಖೆಯ ಕಿರಿಯ ಅಭಿಯಂತರ ಸಂದೀಪ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.