ಸೆಪ್ಟೆಂಬರ 5 ರಂದು ಶ್ರೀ ಮಲ್ಲಿಕಾರ್ಜುನ ದೇವರ ಪಲ್ಲಕ್ಕಿ ಮಹೋತ್ಸವ

0
23

ಕಲಬುರಗಿ: ನಗರದ ಲೋಹಾರ ಗಲ್ಲಿ ಹತ್ತಿರದ ಮಹಾದೇವ ನಗರದ ಆಸಿಫ್ ಗಂಜ, ಮಲ್ಲಿಕಾರ್ಜನ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಶ್ರಾವಣ ಮಾಸದ ಅಂಗವಾಗಿ   ಶ್ರೀ ಮಲ್ಲಿಕಾರ್ಜುನ ದೇವರ ಪಲ್ಲಕ್ಕಿ ಉತ್ಸವ ಸೆಪ್ಟೆಂಬರ್ 5 ರಂದು ಬಹುವಿಜೃಂಬಣೆಯಿಂದ ಜರುಗುವುದು ಎಂದು ಶ್ರೀ ಮಲ್ಲಿಕಾರ್ಜುನ ಪಂಚ ಮಂಡಳಿಯ ಸಮಸ್ತ ಸದ್ಭಕ್ತ ಮಂಡಳಿ ತಿಳಿಸಿದ್ದಾರೆ.

ಸೆಪ್ಟೆಂಬರ 4 ರಂದು ಬೆಳಿಗ್ಗೆ ಮಲ್ಲಿಕಾರ್ಜುನ ದೇವರ ಮೂರ್ತಿಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾ ಮಂಗಳಾರತಿ ನೆರವೇರಿಸಲಾಗುವುದು. ನಂತರ ಭಕ್ತಾಧಿಗಳಿಗಾಗಿ ಮಹಾಪ್ರಸಾದ ವ್ಯವಸ್ಥೆಯನ್ನು ಮಾಡಲಾಗುವುದು.  ನಂತರ ವಿವಿಧ ಭಜನಾ ತಂಡಗಳಿಂದ ಭಜನೆ ಹಾಗೂ ಸಮಾಜಿಕ, ಸಾಂಸ್ಕøತಿಕ, ಧಾರ್ಮಿಕ ಕಾರ್ಯಕ್ರಮಗಳು ನಡೆಯುವವು.

Contact Your\'s Advertisement; 9902492681

ಸೆಪ್ಟೆಂಬರ 5 ರಂದು ಸೋಮವಾರ ಶ್ರೀ ಮಲ್ಲಿಕಾರ್ಜುನ ದೇವರ ಪಲ್ಲಕ್ಕಿ ಉತ್ಸವ ಬೆಳಿಗ್ಗೆ 11ಕ್ಕೆ ಮಹಾದೇವ ನಗರದಿಂದ  ಬಾಜಾ ಭಜಂತ್ರಿ, ಡೊಳ್ಳಿನ ಮೇಳ, ಪುರವಂತರು, ಭಜನಾ ಮೇಳ, ಮಹಿಳೆಯರಿಂದ ಕುಂಭ ಕಳಸದೊಂದಿಗೆ ಶ್ರೀ ಮಲ್ಲಿಕಾರ್ಜುನ ದೇವರ ಪಲ್ಲಕ್ಕಿ ಉತ್ಸವ ಆರಂಭವಾಗಿ ಹುಮ್ನಾಬಾದ ಬೆಸ್, ಕಿರಾಣಾ ಬಜಾರ, ಚೌಕ್, ಫೋರ್ಟ್ ರೋಡ್, ಲೋಹಾರ ಗಲ್ಲಿ ಮುಖಾಂತರ ಮಹಾದೇವ ನಗರದ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಬಂದು ತಲಪುವುದು. ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಮಲ್ಲಿಕಾರ್ಜುನ ದೇವಾಲಾಯದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದು ಪುನಿತರಾಬೇಕು ಎಂದು ಶ್ರೀ ಮಲ್ಲಿಕಾರ್ಜುನ ಪಂಚ ಮಂಡಳಿಯ ಸಮಸ್ತ ಸದ್ಭಕ್ತ ಮಂಡಳಿ ಅವರು ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here