ಕಲಬುರಗಿ: ಚಿಂಚೋಳಿ ತಾಲೂಕಿನ ಸುಲೇಪೇಟ, ಹೊಸಳ್ಳಿ, ದಸ್ತಾಪುರ್, ಅಣವಾರ, ಗೌಡನಹಳ್ಳಿ, ಚಿಮ್ಮಾ ಇದ್ಲಾಯಿ ಗ್ರಾಮಗಳಲ್ಲಿ ಭೂಮಿಯಿಂದ ಭಾರೀ ಸದ್ದು ಕೇಳಿಬಂದಿರುವ ಘಟನೆ ಬುಧವಾರ ರಾತ್ರಿ 10:58ಕ್ಕೆ ನಡೆದಿದೆ.
ಕಳೆದ ನಾಲ್ಕು ವರ್ಷಗಳಿಂದ ತಾಲ್ಲೂಕಿನ ಹಲವು ಗ್ರಾಮ ಮತ್ತು ಹಳ್ಳಿಗಳಲ್ಲಿ ಭೂಮಿಯಿಂದ ಭಾರೀ ಶಬ್ದ ಮತ್ತು ಭೂಮಿ ಕಂಪಿಸಿರುವ ಘಟನೆಗಳಿಗೆ ಸಂಬಂಧಿಸಿದಂತೆ ಭೂಮಿ ವಿಜ್ಞಾನಿಗಳು ಬಿಡುಬಿಟ್ಟು ಪರೀಕ್ಷೆ ನಡೆಸಿದರು.
ಆರು ತಿಂಗಳ ಬಳಿಕ ನಿನ್ನೆ ಮತ್ತೆ ರಾತ್ರಿ ಗ್ರಾಮಗಳಲ್ಲಿ ಭೂಮಿಯಿಂದ ಭಾರೀ ಶಬ್ದ ಕೇಳಿಬಂದಿದೆ ಎಂದು ಸ್ಥಳೀಯರು ತಿಳಿಸಿದ್ದು, ರಾತ್ರಿ 10:58ಕ್ಕೆ ಭೂಮಿ ಒಳಗಿನಿಂದ ಭಾರೀ 10 ಸೆಕೆಂಡ್ ಶಬ್ದ ಕೇಳಿ ಜನರು ಗಾಬರಿಯಿಂದ ಮನೆಯಿಂದ ಹೊರಗಡೆ ಬಂದ್ದಾರೆ.
ತಾಲ್ಲೂಕಿನಲ್ಲಿ ಪದೆ ಪದೆ ಇಂತಹ ಘಟನೆ ನಡೆಯುತ್ತಿದ್ದು, ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರಾದ ಮೊಹಿನ್ , ನಾಗೇಶ ಸರಕಾರಕ್ಕೆ ಒತ್ತಾಯಿಸಿದ್ದಾರೆ.