ಧಾರ್ಮಿಕ ಆಚರಣೆಗಳಿಂದ ಸಮಾಜದಲ್ಲಿ ಸೌಹಾರ್ದತೆ ಸಾಧ್ಯ: ಅಂಬಾರಾಯ ಅಷ್ಟಗಿ

0
86

ಶಹಾಬಾದ: ಧಾರ್ಮಿಕ ಆಚರಣೆಗಳು ಸಮಾಜದಲ್ಲಿ ಸೌಹಾರ್ದತೆ ಹಾಗೂ ಭಾವೈಕ್ಯತೆ ಸಾಮರಸ್ಯ ಗಟ್ಟಿಗೊಳಿಸುತ್ತವೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಭೇದ-ಭಾವ ತೊರೆದು ಬಾಳಿ ಬದುಕಿದಾಗ ಧಾರ್ಮಿಕ ಆಚರಣೆಗಳು ಸಾರ್ಥಕಗೊಳ್ಳುತ್ತವೆ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬಾರಾಯ ಅಷ್ಟಗಿ ಹೇಳಿದರು.

ಅವರು ತಾಲೂಕಿನ ತೊನಸನಹಳ್ಳಿ(ಎಸ್) ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾದ ವೀರಭದ್ರೇಶ್ವರ ಪಲ್ಲಕ್ಕಿ ಉತ್ಸವ ಹಾಗೂ ಉಡಿ ತುಂಬುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

Contact Your\'s Advertisement; 9902492681

ಸಮಾಜದಲ್ಲಿ ಧಾರ್ಮಿಕ ಆಚರಣೆಗಳು ಮನಸ್ಸಿಗೆ ಶಾಂತಿ ನೀಡುತ್ತವೆ. ಧಾರ್ಮಿಕ ಕಾರ್ಯಗಳನ್ನು ಸಮಾಜದ ಎಲ್ಲ ವರ್ಗದ ಜನರು ಸೇರಿ ಆಚರಣೆ ಮಾಡಿದಾಗ ಅದಕ್ಕೊಂದು ವಿಶೇ? ಅರ್ಥ ಬರಲು ಸಾಧ್ಯ, ಧರ್ಮದ ಕಾಯಕದಿಂದ ಒಳ್ಳೆಯ ಫಲ ದೊರೆಯುತ್ತದೆ ಎಂದು ಹೇಳಿದರು.

ತೊನಸನಹಳ್ಳಿ(ಎಸ್) ಗ್ರಾಮದ ಸಂಗಮೇಶ್ವರ ಸಂಸ್ಥಾನ ಮಠದ ರೇವಣಸಿದ್ಧ ಚರಂತೇಶ್ವರ ಸ್ವಾಮಿಗಳು ಮಾತನಾಡಿ, ಜನ್ಮ ನೀಡಿದ ತಂದೆ-ತಾಯಿಯರನ್ನೇ ದೇವರೆಂದು ಮನುಕಲಕ್ಕೆ ಸಂದೇಶ ಸಾರಿದವರು ಯಾರಾದರೂ ಇದ್ದರೇ ಅದು ವೀರಭದ್ರೇಶ್ವರರು.ದೇವರ ದರ್ಶನ ಪಡೆಯಲು ಕಾಶಿ -ಕೇದಾರ, ಮಕ್ಕಾ-ಮದಿನಾ ಸೇರಿದಂತೆ ತೀರ್ಥಯಾತ್ರಾ ಸ್ಥಳಗಳಿಗೆ ಹೋಗಬೇಕಾಗಿಲ್ಲ. ನಮ್ಮ ಜನ್ಮ ದಾತರೇ ನಮಗೆ ನಡೆದಾಡುವ ನಿಜವಾದ ದೇವರು.ಅವರ ಸೇವೆಯೇ ನಿಜವಾದ ಪರಮಾತ್ಮನ ಸೇವೆ ಅದನ್ನು ಮೈಗೂಡಿಸಿಕೊಂಡಾಗ ಮಾತ್ರ ಜೀವನ ಪಾವನವಾಗುತ್ತದೆ.ಅಲ್ಲದೇ ಇಂದಿನ ಸಾಮಾಜಿಕ ಸಮಸ್ಯೆಗೆ ಆಧ್ಯಾತ್ಮಿಕ ಬಡತನವೇ ಕಾರಣವಾಗಿದ್ದು,ಮಠ ಮಾನ್ಯ, ಗುಡಿ-ಗುಂಡಾರಗಳಲ್ಲಿ ನಡೆಯುವ ಅನುಭಾವವು ನಮ್ಮಲ್ಲಿ ಆಧ್ಯಾತ್ಮಿಕ ಸಂಪತ್ತನ್ನು ವೃದ್ಧಿಸಿ ನೈತಿಕ ಪ್ರಜ್ಞೆ , ಸಾಮಾಜಿಕ ಮೌಲ್ಯ ಮತ್ತು ಧಾರ್ಮಿಕ ಮೌಲ್ಯಗಳನ್ನು ಬೆಳೆಸಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ತೊನಸನಹಳ್ಳಿ(ಎಸ್) ಗ್ರಾಮದ ಕೊತ್ತಲಪ್ಪ ಶರಣರು, ಯರಗೋಳದ ಸಂಗಮೇಶ ದೇವರು, ಕಲಬುರಗಿ ಭವಾನಿ ನಗರದ ಶ್ರೀ ಭಾಗ್ಯವಂತಿ ಮಹಾಶಕ್ತಿ ಪೀಠದ ಎ ಬಿ ಪಾಟೀಲ ಮುತ್ತ್ಯಾ ಇದ್ದರು. ಬಿಜೆಪಿ ಮುಖಂಡರಾದ ವೀರಣ್ಣ ಮುಗಳಿ, ಶರಣು ಪಾಟೀಲ ತೋನಸನಳ್ಳಿ ವೀರುಪಾಕ್ಷಯ್ಯ ಸ್ವಾಮಿ ತಾವರಗೇರಾ,ಶರಣರಾಜ ಪಾಟೀಲ, ಶಕ್ತಿರಾಜ ಪಾಟೀಲ, ಗ್ರಾಮದ ಗಣ್ಯರಾದ ನಿಂಗಣ್ಣಗೌಡ ಮಾಲಿಪಾಟೀಲ, ಮಲ್ಲಿಕಾರ್ಜುನ ಗೊಳೇದ್, ವಿರೇಶ ರಾಮಶೆಟ್ಟಿ, ಸಂಗನಗೌಡ ರಾಮಶೆಟ್ಟಿ,ಶಿವಲಿಂಗಪ್ಪ ಗೊಳೇದ್, ಸಿದ್ದು ಗೊಳೇದ್, ಬಸವರಾಜ ಗೊಳೇದ್, ಮಹಾಲಿಂಗ ಪೂಜಾರಿ,ಶ್ರೀಶೈಲ ರಾಮಶೆಟ್ಟಿ, ಸಿದ್ದು ಸಜ್ಜನ್, ಸಿದ್ದು ಅರಳಿ,ಶಿವು ಮುದಿಗೌಡ, ಮಲ್ಲು ಗೊಳೇದ್, ಸುರೇಶ ಹಳ್ಳಿ, ಬಸವರಾಜ ಮದ್ರಿಕಿ, ಪ್ರಕಾಶ ರೆಡ್ಡಿ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here