ಬೆಂಗಳೂರು: ಗೌರಿಯನ್ನ ಕೊಂದವರು ಜೈಲಿನಲ್ಲಿದ್ದಾರೆ, ನೊಂದವರು ನಾವಿಲ್ಲಿದ್ದೇವೆ, ಕೊಂದಿಸಿದವರು ದೇಶ ಆಳುತ್ತಿದ್ದಾರೆ ಎಂದು ಬಹು ಭಾಷಾ ನಟ ಪ್ರಕಾಶ್ ರೈ ಮಾರ್ಮಿಕವಾಗಿ ನುಡಿದರು.
ಅವರು ಸೋಮವಾರ ಗೌರಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಗೌರಿ ನೆನಪು ಅನ್ನೋ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇವತ್ತು ಕೋಮುವಾದಿಗಳು ಪ್ರಾಬಲ್ಯವಾಗಲು ಬುದ್ದಿ ಜೀವಿಗಳ ಇಗೋ ಮತ್ತು ಕೀತಾಟವೆ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.
”ನಾನು ಗೌರಿಯನ್ನ ಹುಳುತ್ತಿಲ್ಲಾ ಗೌರಿ ಅನೋ ಬೀಜ ಬಿತ್ತುತ್ತಿದ್ದೇವೆ ಅದು ಬೆಳೆದು ಹೆಮ್ಮರವಾಗಲೆಬೇಕು” ಎಂದು ಗೌರಿ ಅವರ ಅಂತಿಮ ಸಂಸ್ಕಾರ ನಡೆಯುವ ಸಂದರ್ಭದಲ್ಲಿ ಆಡಿದ ಮಾತು ನೆನಪಿಸಿ ಕೊಂಡರು.
ನಾನು ಇಡೀ ದೇಶ ಸುತ್ತಾಡುತ್ತಿದ್ದೆನೆ, ಎಲ್ಲರಿಗೂ ಮಾತಾಡುತ್ತಿದ್ದೆನೆ ಇನ್ಮೇಲೆ ನಾವು ಪ್ರಾಮಾಣಿಕವಾಗಿ ಜನರ ಜೊತೆ ಬೆರೆತು ಅವರ ಹೋರಾಟದಲ್ಲಿ ಭಾಗಿಯಾಗಿ ದೊಡ್ಡ ಜನಾಂದೋಲನ ರೂಪಿಸುವ ಮೂಲಕ ನಾವು ಪರಿವರ್ತನೆ ತರಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅರುಂಧತಿ ರಾಯಿ ಅವರು ಗೌರಿ ಜೊತೆ ಇರುವ ಒಡನಾಟ ಕುರಿತು ಸವಿಸ್ತಾರವಾಗಿ ಮಾತನಾಡುತ್ತಾ ಇಂದಿನ ಪ್ರಸ್ತೂತ ರಾಜಕೀಯಾ ವ್ಯವಸ್ಥೆ ನಮ್ಮಗಳ ವೈಫಲ್ಯಾಗಳ ಜೊತೆಯಲ್ಲಿ ನಾವೆಲ್ಲಾರೂ ಐಕ್ಯ ಚಳುವಳಿಯನ್ನು ಕಟ್ಟುವ ಜೊತೆಗೆ ನಮಗೆ ಸಂವಿಧಾನ ಇದೆ, ಪ್ರಸ್ತೂತ ನಮ್ಮಗಳ ಜಾತಿ ಧರ್ಮ, ಪ್ರದೇಶ, ಪ್ರಭಾವದ ಆಧಾರದಲ್ಲಿ ಕೆಲಸ ಮಾಡುತ್ತಿದ್ದೆ, ಕಾರ್ಯಕ್ರಮದಲ್ಲಿ ಸಂವಾದ ಕೂಡ ನಡೆಸಲಾಯಿತು,
ಗೌರಿ ಅವರ ಸಹೋದರಿ ಆದ ಕವಿತಾ ಲಂಕೇಶ್ ಮಾತನಾಡಿ ಕಾರ್ಯಕ್ರಮಕ್ಕೆ ಇಷ್ಟು ಜನ ಬಂದಿದ್ದು ನೋಡಿ ಗೌರಿ ಮೇಲೆ ಇರುವ ನಿಮ್ಮ ಪ್ರೀತಿ ಎತ್ತಿ ತೋರಿಸುತ್ತದೆ ಎಂದು ಬಹಳ ಖುಷಿಯಾಯಿತು ಎಂದು ಹೇಳಿದರು.
ಕಾರ್ಯಕ್ರಮದ ಮಧ್ಯೆದಲ್ಲಿ ಕ್ರಾಂತಿ ಗೀತೆ ಮತ್ತು ಕೊನೆಯಲ್ಲಿ ಗೌರಿ ನಿನಗೆ ಲಾಲ್ ಸಲಾಂ ಅನ್ನೋ ಹಾಡು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿದರು, ಚಂದ್ರು ಮತ್ತು ಜಬೀನಾ ಖಾನಂ ಕಾರ್ಯಕ್ರಮ ನಿರುಪಿಸಿದ್ದರು, ಗುರುಪ್ರಸಾದ್ ಸ್ವಾಗತಿಸಿದ್ದರು, ದೀಪು ಪ್ರಸ್ತಾವಿಕ ಮಾತನ್ನಾಡಿದರು. ಪ್ರೂ ಗಣೇಶ್ ದೇವಿ,ಪ್ರೂ ವಿ ಎಸ್ ಶ್ರೀಧರ್, ಡಿ ಉಮಾಪತಿ ಸಂವಾದ ಗೋಷ್ಠಿ ನಡೆಸಿದ್ದರು,ಕಾರ್ಯಕ್ರಮದಲ್ಲಿ ನೂರಾರು ಸಮಾನ ಮನಸ್ಕರು ಸೇರಿ ನಾನು ಗೌರಿ ನಾವೆಲ್ಲಾರೂ ಗೌರಿ ಫೋಷಣೆಯಲ್ಲಿ ಇಡೀ ಹಾಲ್ ತುಂಬಾ ರೋಮಾಂಚನಗೊಳಿಸಿತು.