ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರಕ್ಕೆ: ನರೇಂದ್ರ ಬಡಷೇಶಿ ಚಾಲನೆ

0
22

ಕಲಬುರಗಿ: ಕೂಟನೂರು ಯಲ್ಲಾಲಿಂಗ ಮಠದಲ್ಲಿ ಹೈದ್ರಬಾದ ಕರ್ಣಾಟಕ ಶಿಕ್ಷಣ ಸಂಸ್ಥೆಯ, ಎಂ.ಎಸ್.ಇರಾನಿ ಪದವಿ ಮಹಾವಿದ್ಯಾಲಯ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರಕ್ಕೆ ಎಂ. ಎಸ್. ಇರಾನಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ನರೇಂದ್ರ ಬಡಷೇಶಿ ಅವರು ಉದ್ಘಾಟಿಸಿದರು.

ನಂತರ ಅವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ರಾಷ್ಟ್ರೀಯ ಸೇವಾ ಯೋಜನೆಯು ಮಹಾತ್ಮ ಗಾಂಧೀಜಿ ಅವರ ಕನಸಿನ ಕೂಸು ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಟ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವುದರ ಜೊತೆಗೆ ಸೇವಾ ಮನೋಭಾವನೆ ಗಳನ್ನು ಬೇಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆಯನು ವಹಿಸಿಕೊಂಡಿರುವ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ರಾಜಶೇಖರ ಬೀರನಳ್ಳಿ ಅವರು ಅಧ್ಯಕ್ಷೀಯ ಭಾಷಣ ಮಾಡಿದರು.

ಮುಖ್ಯ ಅತಿಥಿ ಶಿವರಾಜ್ ಸಿರಸಿಗಿ, ವಿಧ್ಯಾರ್ಥಿ ಸಂಘದ ಸಂಚಾಲಕರಾದ ಪ್ರೊ. ಬಸಣ್ಣಾ ಕಾಗೆ, ಪ್ರೊ. ಸುಮಂಗಲಾ ಪಾಟೀಲ ಅವರು ನಿರೂಪಣೆಯನ್ನು ಮಾಡಿದರು, ಡಾ. ಪ್ರಾಣೇಶ ಎಸ್ ಅತಿಥಿಗಳನ್ನು ಸ್ವಾಗತಿಸಿದರು, ಡಾ ಶಂಕ್ರಪ್ಪ ಕೆ ಅವರು ವಂದಿಸಿದರು.

ಈ ಕಾರ್ಯಕ್ರಮದಲ್ಲಿ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಶಿಬಿರಾರ್ಥಿಗಳು ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here