ಕಲಬುರಗಿ : ನಗರದ ಕನ್ನಡಭವನದಲ್ಲಿ ಕಲಬುರಗಿ ಜಿಲ್ಲಾ ಕೊಳಗೇರಿ ನಿವಾಸಿಗಳ ಒಕ್ಕೂಟ ಆಯೋಜಿಸಿದ ಪ್ರಸಕ್ತ ಸವಾಲುಗಳು ಮತ್ತು ಮಹಿಳಾ ನಾಯಕತ್ವ ಕುರಿತಾದ ಕಾರ್ಯಾಗಾರವನ್ನು ಸ್ಲಂ ಜನಾಂದೋಲನ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಡಾ.ಗವಿಸಿದಪ್ಪ ಪಾಟೀಲ, ರಾಬಿಯಾ ಶಿಖಾರಿ, ಜನಾರ್ಧನ ಹಳ್ಳಿಬೆಂಚಿ, ರೋಹಿಣಿ ಟಿ ಸುರಮರ, ಕಾರ್ಯಕ್ರಮ ಸಂಚಾಲಕ ಅಲ್ಲಮಪ್ರಭು ನಿಂಬರ್ಗಾ, ಬಾಬುರಾವ ದಂಡಿನಕರ್, ವಸತಾ, ಕವಿತಾ ಇನಾಮದಾರ, ಶಾರದಾಬಾಯಿ ಅವರಾದಕರ, ನರ್ಮದಾ ಗಾಜಿಪೂರ, ಅನೀಲಕುಮಾರ ಚಕ್ರ, ವಿಕಾಸ ಸವಾರಿಕರ್, ನರ್ಮದಾ ಹತ್ವಾಲ್, ಬ್ರಮ್ಮಾನಂದ ಮಿಂಚಾ, ಗಣೇಶ ಕಾಂಬಳೆ, ಯಮನಪ್ಪ ಪ್ರಸಾದ, ಶಾಮರಾಜ ಸಿಂಧೆ, ಕರಣಕುಮಾರ ಬಂದರವಾಡ, ಶಿವಕುಮಾರ ಚಿಂಚೋಳಿ ಸೇರಿದಂತೆ ಹಲವರಿದ್ದರು.