ನೌಕರರ ಕಲ್ಯಾಣ ಸಂಘದಿಂದ ಸೈನಿಕ ಧ್ವಜ ನಿಧಿಗೆ 2 ಲಕ್ಷ ರೂ. ಗಳ ದೇಣಿಗೆ

0
53

ಕಲಬುರಗಿ: ಭಾರತೀಯ ಸೇನೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಾಗೂ ಸೇವೆಸಲ್ಲಿಸಿ ನಿವೃತ್ತರಾಗಿರುವ ಮಾಜಿ ಸೈನಿಕರ ಮತ್ತು ಅವರ ಅವಲಂಬಿತರ ಯೋಗಕ್ಷೇಮಕ್ಕಾಗಿ ಗುಲಬರ್ಗಾ ವಿಭಾಗದ ಮಾರುಕಟ್ಟೆ ಇಲಾಖೆಯ ನೌಕರರ ಕಲ್ಯಾಣ ಸಂಘವು ಸಶಸ್ತ್ರ ಪಡೆಗಳ ಧ್ವಜ ನಿಧಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಬಿ. ಶರಣಪ್ಪ ಸತ್ಯಂಪೇಟ್ ಇವರ ಮೂಲಕ ೨ ಲಕ್ಷ ರೂ.ಗಳ ಚೆಕ್‌ನ್ನು ಸೈನಿಕ ಕಲ್ಯಾಣ ಮತ್ತು ಪುರ್ನವಸತಿ ಇಲಾಖೆಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಶಿಷ್ಠಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ, ಗುಲಬರ್ಗಾ ವಿಭಾಗದ ಮಾರುಕಟ್ಟೆ ಇಲಾಖೆಯ ನೌಕರರ ಕಲ್ಯಾಣ ಸಂಘದ ಅಧ್ಯಕ್ಷರಾದ ಶರಣಪ್ಪ.ಎಮ್.ಮಜ್ಜಿಗೆ, ಕಾರ್ಯದರ್ಶಿ ತುಳಸಿರಾಮ.ಎಮ್.ಲಾಖೆ ಮತ್ತು ಖಜಾಂಚಿ ಚನ್ನಬಸಯ್ಯಾ . ಎಂ.ಹಿರೇಮಠ, ಕಲಬುರಗಿ ಸೈನಿಕ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಕೆ.ಕೃಷ್ಣ ಹಾಗೂ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here