ಕಲಬುರಗಿ: ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಮಕ್ಕಳ ಕಳ್ಳರ ಬಂದಿದ್ದಾರೆಂದು ವದಂತಿಗಳು ಹರದಾಡುತಿದ್ದು, ಈ ವದಂತಿಗಳು ಸಾಮಾಜಿಕ ಜಾಲಾತಾಣಗಳ ಮೂಲಕ ಹರಡಿಸಲಾಗುತ್ತಿದ್ದು ಎಂದು ಪೊಲೀಸ್ ಉಪ ಆಯುಕ್ತ ಕಿಶೋರ್ ಬಾಬು ತಿಳಿಸಿದರು.
ನಾಗರೀಕರು ಇಂತಹ ಸುಳ್ಳು ವದಂತಿಗಳಿಗೆ ಕಿವಿ ಕೂಡಬಾರದೆಂದು ಕಲಬುರಗಿ ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡುತ್ತದೆ ಎಂದು ಅವರು ತಿಳಿಸಿ, ಇಂತಹ ವಿಚಾರಗಳ ಸಂಬಂಧಿಸಿದಂತೆ ವ್ಯಕ್ತಿಗಳ ಮೇಲೆ ಹಲ್ಲೆ ಮಾಡುವುದು ಮತ್ತು ಸಾಮಾಜಿಕ ಜಾಲಾತಾಣಗಳ ಸುಳ್ಳು ವದಂತಿ ಹರಡಿಸಿ ಶೇರ್ ಮಾಡುವುದು ಅಪರಾಧ ಎಂದು ಅವರು ತಿಳಿಸಿದರು.
ಇಂತಹ ಪ್ರಕರಣಗಳು ಕಂಡುಬಂದರೆ ಸಂಬಂಧ ಪಟ್ಟ ವ್ಯಕ್ತಿಗಳ ಮೇಲೆ ಕಾನೂನಿನ ಪ್ರಕಾರ ಕ್ರಮ ಕೈಗೊಳಲಾಗುವುದೆಂದು ಸಾಮಾಜಿಕ ಜಾಲಾತಾಣಗಳ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.