ಕರಡ್ಯಾಳ ಗುರುಕುಲ ವಿದ್ಯಾರ್ಥಿ ನೀಟ್ ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ 8ನೇ ರ‍್ಯಾಂಕ್

0
18

ಭಾಲ್ಕಿ: ಭಾಲ್ಕಿ ತಾಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ಪಿ.ಯು.ಕಾಲೇಜು ವಿದ್ಯಾರ್ಥಿಯಾದ ಕು.ಹೃತ್ವಿಕ್ ಸಂತೋಷ ಬಿರಾಜದಾರ (ಅಂಗವಿಕಲದೊಂದಿಗೆ ದೈಹಿಕ) ೨೦೨೨ನೇ ಸಾಲಿನ ನಿಟ್ ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ ೮ನೇ ರ‍್ಯಾಂಕ್ ಪಡೆದಿರುತ್ತಾನೆ.

ಸದರಿ ವಿದ್ಯಾರ್ಥಿಯು ಕಾಲೇಜು ವತಿಯಿಂದ ನಡೆಸಲಾದ ಸ್ಕಾಲರ್‌ಶೀಪ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಎರಡು ವರ್ಷಗಳು ವಿದ್ಯಾಭ್ಯಾಸ ಮಾಡಿ ಈಗ ರಾಷ್ಟ್ರಕ್ಕೆ ೮ನೇ ರ‍್ಯಾಂಕ್ ಬಂದಿರುವುದು ಹಾಗೂ ಬೀದರ ಜಿಲ್ಲೆಗೆ ಇದೇ ಮೊದಲ ಬಾರಿಗೆ ನೀಟ್ ಪರೀಕ್ಷೆಯಲ್ಲಿ ಪ್ರಪ್ರಥಮವಾಗಿ ಜಿಲ್ಲೆಗೆ ೮ನೇ ರ‍್ಯಾಂಕ್ ತಂದುಕೊಟ್ಟ ಕೀರ್ತಿ ವಿದ್ಯಾರ್ಥಿಯದಾಗಿದೆ.

Contact Your\'s Advertisement; 9902492681

ಈತನು ಎಮ್ಸ್ ದೆಹಲಿಯಲ್ಲಿ ತನ್ನ ವೈದ್ಯಕೀಯ ಶಿಕ್ಷಣವನ್ನು ಪಡೆಯಲು ಇಚ್ಛಿಸಿರುತ್ತಾನೆ. ಈತನ ಮುಂದಿನ ಭವಿಷ್ಯ ಉಜ್ವಲವಾಗಲೆಂದು ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು, ಸಂಸ್ಥೆಯ ಕಾರ್ಯದರ್ಶಿ, ಪೂಜ್ಯ ಶ್ರೀ ಮಹಾಲಿಂಗ ಮಹಾಸ್ವಾಮಿಗಳು, ಆಡಳಿತಾಧಿಕಾರಿಗಳಾದ ಶರಣ ಮೋಹನರೆಡ್ಡಿ, ಪ್ರಾಚಾರ್ಯರ ಶರಣ ಬಸವರಾಜ ಮೊಳಕೀರೆ ಹಾಗೂ ಉಪನ್ಯಾಸಕ ಸಿಬ್ಬಂದಿಯವರು ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here