ಕಾವ್ಯ ಎಂದರೆ ಅಂತಃ ಕರಣದ ಅನುಭಾವದ ನುಡಿಗಳು: ಬಸವರಾಕ ಸಬರದ

0
17

ಸುರಪುರ: ಗರುಡಾದ್ರಿ ಕಲಾಮಂದಿರದಲ್ಲಿ ಸುರಪುರದ ಕನ್ನಡ ಸಾಹಿತ್ಯ ಸಂಘ ಆಯೋಜಿಸಿದ್ದ ಮಹಾಂತೇಶ ಗೋನಾಲರ ‘ಚಾಡಮಾರಿ ಶಹರಗಳು’ ಹಾಗೂ ಜ್ಯೋತಿ ದೇವಣಗಾಂವ ಅವರ ‘ಅತ್ತರಿನ ಭರಣಿ’ ಗಜಲ್ ಕೃತಿಗಳ ಬಿಡುಗಡೆ ಕಾರ್ಯಕ್ರಮ ನಡೆಸಲಾಯಿತು.

ಕೃತಿಗಳ ಬಿಡುಗಡೆಗೊಳಿಸಿದ ಸಾಹಿತಿ ಬಸವರಾಜ ಸಬರದ ಮಾತನಾಡಿ,’ಕಾವ್ಯ ಅಂದರೆ ಬೋಧನೆಯಲ್ಲಾ,ಉಪದೇಶವಲ್ಲಾ, ಅನುಭವಿಸಿ ಅಂತ:ಕರಣದಿಂದ ಬರೆದ ಅನುಭಾವದ ನುಡಿಗಡಣವೆ ಕಾವ್ಯ.ಕವಿಯಾದವನಿಗೆ ಮಾತೃ ಹೃದಯವಿರಬೇಕು,ಕಾವ್ಯ ಸುವಾಸನೆ ಭರಿತವಾಗಿರಬೇಕು. ಆ ಸುವಾಸನೆಯನ್ನೆ ಶರಣರು ಅನುಭಾವ ಅಂತ ಕರೆದಿದ್ದಾರೆ,ಅಂತಹ ಸುವಾಸನೆಯನ್ನು ಕವಿಗಳು ತಮ್ಮ ಅಂತರ್ಯದಲ್ಲಿ ಅಳವಡಿಸಿಕೊಳ್ಳಬೇಕು. ಕಾಂತಿಯ ಹಾಗೆ ಕಾವ್ಯ ಆಗಬೇಕು.ನವಿರಾದ ಪಿಸುಮಾತಿನ ಇಷ್ಕ ಇದ್ದಾಗಲೇ ಗಜಲ ಆಗುತ್ತದೆ’ ಎಂದರು.

Contact Your\'s Advertisement; 9902492681

ಕವಿ ಕೈದಾಳ ಕೃಷ್ಣಮೂರ್ತಿ ಮಾತನಾಡುತ್ತ ‘ಕವಿಯಾದವನು ಜಗದ ನೋವನ್ನು ತನ್ನ ನೋವೆಂದು ಬಗೆಯಬೇಕು,ಖುಷಿಯನ್ನು ತನ್ನ ಖುಷಿಯೆಂದು ತಿಳಿದುಕೊಳ್ಳಬೇಕು,ಜಗದ ಜಂಜಡಗಳಿಗೆ ದನಿಯಾಗದ ಕವಿ ನಿಜವಾದ ಕವಿಯಾಗವುದಿಲ್ಲ.ಈಗಿನ ಸಂಕಷ್ಟಮಯ ಸಮಯದಲ್ಲಿ ನಮ್ಮ ಕಿವಿಗಳನ್ನು ಒತ್ತೆ ಇಡುವ ಕಾಲ ಬಂದಿದೆ. ಚಂದಿರ ಕತ್ತರಿಸಿ ಬೀಳುತ್ತಿದ್ದಾನೆ.ಬೆಳದಿಂಗಳಿಗೆ ತೆರಿಗೆ ಹಾಕಲಾಗುತ್ತಿದೆ’ ಎಂದು ಹೇಳಿದರು.

ಗು.ವಿ.ವಿ.ಉರ್ದು ವಿಭಾಗದ ಮುಖ್ಯಸ್ಥ ರಜಾಕ್ ಅಬ್ದುಲ್ ರಬ್,’ಬಹುತ್ವ ಭಾರತ ಈ ಭಾಗದಲ್ಲಿ ಇನ್ನೂ ಉಳಿದುಕೊಂಡಿದೆ. ಶ್ರೇಷ್ಠತೆಯ ವ್ಯಸನ ಈ ಸುರಪುರದ ಲಾಂಛನ. ಭಾವೈಕ್ಯತೆ ಇಲ್ಲಿಯ ಅರಿವು’ ಎಂದರು.

ಕಾರ್ಯಕ್ರಮವನ್ನು ಹಿರಿಯ ಚೇತನ ಬುಕ್ಕಪಟ್ಟಣಂ ಆದಿತ್ಯನಾರಾಯಣ ರಾಜಗುರು ಅವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ರಾಜಾ ಮುಕುಂದ ನಾಯಕ, ಚಂದ್ರಕಾಂತ ಭಂಡಾರಿ, ಲಕ್ಷ್ಮಣ ಶಾಸ್ತ್ರಿ ಹೆಬ್ಬಾಳ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಲೇಖಕರಾದ ಜ್ಯೋತಿ ದೇವಣಗಾವ, ಮಹಾಂತೇಶ ಗೋನಾಲ ಮಾತನಾಡಿದರು.

ಜೆ. ಅಗಸ್ಟಿನ್ ಪ್ರಾಸ್ತಾವಿಕ ಮಾತನಾಡಿದರು. ಬಸವರಾಜ ದೇಶಮುಖ, ನಬಿಲಾಲ ಮಕಾನದಾರ, ಶ್ರೀಹರಿ ಆದೋನಿ, ನಿಂಗನಗೌಡ ದೇಸಾಯಿ, ಕುತುಬುದ್ದೀನ್ ಅಮ್ಮಾಪುರ, ಕಮಲಾಕರ, ಶರಣಬಸವ ಯಾಳವಾರ, ಕನಕಪ್ಪ ವಾಗನಗೇರಿ, ನಿಂಗಣ್ಣ ವಡಗೇರಿ, ಗೋಪಣ್ಣ ಯಾದವ, ಜಯಲಲಿತಾ ಪಾಟೀಲ, ಶಕುಂತಲಾ ಜಾಲವಾದಿ, ಡಾ.ಸತ್ಯನಾರಾಯಣ ಆಲದರ್ತಿ, ಮಲ್ಲಯ್ಯ ಕಮತಗಿ, ದೊಡ್ಡ ಮಲ್ಲಿಕಾರ್ಜುನ ಉದ್ಧಾರ, ಸಾಜನಶೆಟ್ಟಿ, ಮೊದಲಾದವರು ಭಾಗವಹಿಸಿದ್ದರು. ಪ್ರಾರಂಭದಲ್ಲಿ ಶ್ರೀನಿವಾಸ ಜಾಲವಾದಿ ಸ್ವಾಗತಿಸಿದರು, ಶಿವಕುಮಾರ ಮಸ್ಕಿ ನಿರೂಪಿಸಿದರು, ಎಚ್ ರಾಠೋಡ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here