ಶಾಸಕ ಡಾ.ಅಜಯಸಿಂಗ್ ಮನೆ ಮುತ್ತಿಗೆ

0
53

ಕಲಬುರಗಿ: ವೀರಶೈವರು ಬೇಡ ಜಂಗಮ ಪ್ರಮಾಣ ಪತ್ರಕ್ಕಾಗಿ ಬೆಂಗಳೂರಿನ ವಿಧಾನಸೌಧದಲ್ಲಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲಿಸಿ ಭಾಷಣ ಮಾಡಿದ ಮತ್ತು ಅಧಿವೇಶನದಲ್ಲಿ ಇದರ ಬಗ್ಗೆ ಪ್ರಸ್ತಾಪಿಸಲಾಗುವುದು ಎಂದು ಹೇಳಿಕೆ ನೀಡಿದ ಜೇವರ್ಗಿ ಶಾಸಕ ಡಾ.ಅಜಯಸಿಂಗ್ ಅವರ ನಡೆಯನ್ನು ಖಂಡಿಸಿ ಕಲಬುರಗಿ ನಿವಾಸಕ್ಕೆ ಬುಧವಾರ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.

ರಾಜ್ಯಾಧ್ಯಕ್ಷ ಗುರಣ್ಣ ಐನಾಪುರ ಮಾತನಾಡಿˌ ಸುಮಾರು ಅರ್ಧ ದಶಕಗಳ ಕಾಲ ಪರಿಶಿಷ್ಟರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಅಲ್ಲದೆ ಧರ್ಮಸಿಂಗ್ ಕುಟುಂಬವನ್ನು ರಾಜಕೀಯವಾಗಿ ಬೆಳೆಸಿ ಮುಖ್ಯಮಂತ್ರಿ ಮಾಡುವಲ್ಲಿ ದಲಿತರ ಪಾತ್ರ ಬಹಳಷ್ಟಿದೆ. ಆದರೆ ಶಾಸಕ ಡಾ.ಅಜಯಸಿಂಗ್ ಅವರು ವೀರಶೈವವರಿಗೆ ಬೇಡ ಜಂಗಮ ಪ್ರಮಾಣ ಪತ್ರ ನೀಡಲು ಬೆಂಬಲಿಸುತ್ತೇನೆ ಎಂದಿರುವುದು ಮೂಲ ಪರಿಶಿಷ್ಟರಿಗೆ ಮಾಡಿದ ಅವಮಾನ ಎಂದರು.

Contact Your\'s Advertisement; 9902492681

ಕೂಡಲೇ ಶಾಸಕ ಡಾ. ಅಜಯಸಿಂಗ್ ಇಡೀ ರಾಜ್ಯದ ಶೋಷಿತರ ಕ್ಷೇಮೆ ಕೇಳಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ತಾಲ್ಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿ ಘೇರಾವ್ ಹಾಕುವುದರ ಮೂಲಕ ಚುನಾವಣೆಯಲ್ಲಿ ಪಾಠ ಕಲಿಸಲಾಗುವುದು ಎಂದರು.

ಉಪನ್ಯಾಸಕ ನಿಜಲಿಂಗ ದೊಡ್ಮನಿˌ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ ಶಿವಶಂಕರˌ ಮಲ್ಲಿಕಾರ್ಜುನ ಬರ್ಮಾˌ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕೆರಮಗಿˌ ತಾಲ್ಲೂಕಾಧ್ಯಕ್ಷ ಕ್ರಷ್ಣ ಕುಶಾಳಕರˌ ಸೀತಾರಾಮ ರಾಠೋಡˌ ನಾಗೇಶ ಗೊಬ್ಬೂರˌ ಶಿವಾನಂದ ಸಿಂಗೆˌ ಹಣಮಂತ ಭಜೇಂತ್ರಿˌ ಮನೋಜ ರಾಠೋಡˌಅರ್ಜುನ ಬೇಲೂರˌ ಸಂಗೀತಾ ದೋತ್ರೆˌ ರಾಧಾ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here